ಚೆನ್ನೈ: ಟಾಲಿವುಡ್ ನಟ ಪ್ರಭಾಸ್ ತಮ್ಮ 25 ನೇ ಚಿತ್ರಕ್ಕೆ ಅರ್ಜುನ್ ರೆಡ್ಡಿ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ಆಕ್ಷನ್ ಕಟ್ ಹೇಳುತ್ತಿದ್ದಾರೆ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ.
View this post on Instagram
Advertisement
ಪ್ರಭಾಸ್ ಅ.23 ರಂದು 42 ನೇ ವಸಂತಕ್ಕೆ ಕಾಲಿಡುತ್ತಿದ್ದು, ಇನ್ನೂ ಹುಟ್ಟುಹಬ್ಬ ಹತ್ತಿರ ಇರುವಾಗಲೇ ಅಭಿಮಾನಿಗಳಿಗೆ ತಮ್ಮ 25ನೇ ಸಿನಿಮಾದ ನಿರ್ದೇಶಕರ ಬಗ್ಗೆ ಹೇಳಿದ್ದಾರೆ. ಭೂಷಣ್ ಕುಮಾರ್ ಅವರ ಭದ್ರಕಾಳಿ ಪಿಕ್ಚರ್ಸ್ ನಲ್ಲಿ ನಿರ್ಮಾಣವಾಗುತ್ತಿರುವ ‘ಸ್ಪಿರಿಟ್’ ಚಿತ್ರದಲ್ಲಿ ಪ್ರಭಾಸ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಈ ಚಿತ್ರವನ್ನು ಸಂದೀಪ್ ನಿರ್ದೇಶಿಸುತ್ತಿದ್ದಾರೆ. ಇದನ್ನೂ ಓದಿ: ಕೊನೆ ಕ್ಷಣದಲ್ಲಿ ಅಜಯ್ ದೇವ್‍ಗನ್ ಜೊತೆ ಶೂಟ್ ಬೇಡವೆಂದ ನಟ ಶಾರೂಖ್
Advertisement
Advertisement
ಈ ಕುರಿತು ಪ್ರಭಾಸ್ ಇನ್‍ಸ್ಟಾಗ್ರಾಮ್ ನಲ್ಲಿ, ‘ಸ್ಪಿರಿಟ್’ ನೊಂದಿಗೆ ನನ್ನ ಪ್ರಯಾಣವನ್ನು ಆರಂಭಿಸಿದ್ದೇನೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಮತ್ತು ಭೂಷಣ್ ಕುಮಾರ್ ಅವರ ಭದ್ರಕಾಳಿ ಪಿಕ್ಚರ್ಸ್ ನಿರ್ಮಾಣ #Prabhas25SandeepReddyVanga ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
Advertisement
The Mighty man marching On…..????#Prabhas25SandeepReddyVanga#BhushanKumar#Prabhas @VangaPranay #KrishanKumar @TSeries @VangaPictures pic.twitter.com/gbkfh6suLn
— Sandeep Reddy Vanga (@imvangasandeep) October 7, 2021
ತಮ್ಮ ಹೊಸ ಚಿತ್ರ ಕುರಿತು ಮಾತನಾಡಿದ ಪ್ರಭಾಸ್, ಸ್ಪಿರಿಟ್ ಕಥೆ ‘ಅದ್ಭುತ’ವಾಗಿದೆ. ಚಿತ್ರದ ಶೂಟಿಂಗ್ ಆರಂಭಿಸಲು ಕಾಯಲು ಸಾಧ್ಯವಿಲ್ಲ. ಭೂಷಣ್ ಕುಮಾರ್ ಜೊತೆ ಕೆಲಸ ಮಾಡುವುದು ಯಾವಾಗಲೂ ಸುಲಭ ಮತ್ತು ಸಂತೋಷ ನೀಡುತ್ತದೆ. ಅವರು ನಮ್ಮಲ್ಲಿರುವ ಅತ್ಯುತ್ತಮ ನಿರ್ಮಾಪಕರಲ್ಲಿ ಒಬ್ಬರು, ನಾನು ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದೇನೆ. ಸಂದೀಪ್ ಅವರ ಜೊತೆ ಕೆಲಸ ಮಾಡಬೇಕೆಂದು ಎಲ್ಲರಿಗೂ ಇಷ್ಟವಿರುತ್ತೆ. ಈಗ ಸ್ಪಿರಿಟ್‍ನೊಂದಿಗೆ, ಅಂತಹ ಪ್ರತಿಭೆ ಜೊತೆಗೆ ಅಭಿನಯಿಸುವ ಅವಕಾಶವನ್ನು ಪಡೆದುಕೊಂಡಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ನವರಾತ್ರಿಯ ಮೊದಲದಿನ ಶೈಲಪುತ್ರಿಯ ಆರಾಧನೆ
ಪ್ರಭಾಸ್ ಬಹುನಿರೀಕ್ಷಿತ ರಾಧೆ ಶ್ಯಾಮ್, ಆದಿಪುರುಷ ಮತ್ತು ಸಲಾರ್ ಸಿನಿಮಾಗಳ ಸಾಲಿಗೆ ಈ ಸಿನಿಮಾ ಸಹ ಸೇರಿಕೊಂಡಿದೆ. ‘ಸ್ಪಿರಿಟ್’ ವಿಶ್ವಾದ್ಯಂತ ಹಿಂದಿ, ತೆಲುಗು, ತಮಿಳು, ಮಲಯಾಳಂ, ಕನ್ನಡ, ಜಪಾನೀಸ್, ಚೈನೀಸ್ ಮತ್ತು ಕೊರಿಯನ್ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ಈ ಚಿತ್ರದ ಇತರ ಪಾತ್ರಗಳ ಬಗ್ಗೆ ಮತ್ತು ನಟರ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿಯನ್ನು ನೀಡಿಲ್ಲ.