ರವಿವಾರವಷ್ಟೇ ‘ಆದಿಪುರುಷ್’ (Adipurush) ಸಿನಿಮಾದ ಟೀಸರ್ (Teaser) ಬಿಡುಗಡೆಯಾಗಿದೆ. ಟೀಸರ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, 100 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಅಯೋಧ್ಯೆಯಲ್ಲಿ ನಡೆದ ಟೀಸರ್ ಬಿಡುಗಡೆ ಸಮಾರಂಭದ ನಂತರ ಪ್ರಭಾಸ್ ಗರಂ ಆಗಿದ್ದು, ಚಿತ್ರದ ನಿರ್ದೇಶಕ ಓಂ ರಾವುತ್ (Om Raut) ಮೇಲೆ ಕೋಪ ಮಾಡಿಕೊಂಡ ವಿಡಿಯೋವೊಂದು ಸಖತ್ ವೈರಲ್ ಆಗಿದೆ.
Advertisement
ಅಯೋಧ್ಯೆಯಲ್ಲಿ(Ayodhya) ನಡೆದ ವರ್ಣ ರಂಜಿತ ಸಮಾರಂಭದಲ್ಲಿ ಪ್ರಭಾಸ್, ಸೈಫ್ ಅಲಿಖಾನ್, ಕೃತಿ ಸನೂನ್, ಸನ್ನಿ ಸಿಂಗ್ ಸೇರಿದಂತೆ ಸಾಕಷ್ಟು ಕಲಾವಿದರು ಭಾಗಿಯಾಗಿದ್ದರು. ಈ ಸಮಾರಂಭದ ನಂತರ ತಾವು ತಂಗಿದ್ದ ಹೋಟೆಲ್ ಗೆ ತೆರಳಿರುವ ಪ್ರಭಾಸ್, ಕಾರಿಡಾರ್ ನಲ್ಲೇ ‘ಏ ಓಂ.. ನನ್ನ ರೂಮ್ ಗೆ ಬಾರೋ, ಬಾರೋ ನನ್ ರೂಮ್ ಗೆ’ ಎಂದು ಕೋಪದಲ್ಲಿಯೇ ಹೇಳುತ್ತಾರೆ. ಅವರನ್ನು ಸಮಾಧಾನಿಸಲು ಹಲವರು ಪ್ರಯತ್ನಿಸ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ:ರಚಿತಾ ರಾಮ್ @30: ಹ್ಯಾಪಿ ಬರ್ತ್ಡೇ ರಚ್ಚು ಅಂದ್ರು ಫ್ಯಾನ್ಸ್
Advertisement
Advertisement
ಟೀಸರ್ ಬಗ್ಗೆ ಪ್ರಭಾಸ್ (Prabhas) ಅಭಿಮಾನಿಗಳು ಬೇಸರಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಅತ್ಯಂತ ಕಳಪೆ ಮಟ್ಟದ ಗ್ರಾಫಿಕ್ಸ್ ಬಳಸಿದ್ದಾರೆ ಎನ್ನುವ ಆರೋಪ ಕೂಡ ಇದೆ. ಅತೀ ನಿರೀಕ್ಷೆ ಮಾಡಿದ್ದ ಸಿನಿಮಾಗೆ ಕಳಪೆ ಮಟ್ಟದ ಕೆಲಸ ಮಾಡಿದ್ದಾರೆ ಎಂದು ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ಈ ಕಾರಣಕ್ಕಾಗಿಯೇ ನಿರ್ದೇಶಕರ ಮೇಲೆ ಪ್ರಭಾಸ್ ಗರಂ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.
Advertisement
ಆದರೆ ಈ ಕುರಿತು ಪ್ರಭಾಸ್ ಯಾವುದೇ ಪ್ರತಿಕ್ರಿಯೆ ಆಗಲಿ, ವೈರಲ್ ಆಗಿರುವ ವಿಡಿಯೋ ಕುರಿತಾದ ಸ್ಪಷ್ಟನೆ ಆಗಲಿ ನೀಡಿಲ್ಲ. ಆದರೆ, ವಿಡಿಯೋ ಮಾತ್ರ ಹಲವು ಅನುಮಾನಗಳಿಗೆ ಕಾರಣವಾಗಿದೆ. ಪ್ರಭಾಸ್ ಅವರನ್ನು ನಾವು ಈ ರೀತಿಯಾಗಿ ಯಾವತ್ತೂ ನೋಡಿಲ್ಲ, ನಿರ್ದೇಶಕರಿಗೆ ಇದೆ ಮಾರಿಹಬ್ಬ ಅಂತೆಲ್ಲ ಅಭಿಮಾನಿಗಳು ಕಾಮೆಂಟ್ ಹಾಕುತ್ತಿದ್ದಾರೆ.