ಮುಂಬೈ: ದೇಶಾದ್ಯಂತ ಹವಾ ಸೃಷ್ಟಿಸಿದ್ದ `ಬಾಹುಬಲಿ’ ಚಿತ್ರದ ಬಳಿಕ ನಾಯಕ ನಟ ಪ್ರಭಾಸ್ ಹಾಗೂ ಅನುಷ್ಕಾ ನಡುವಿನ ಬಾಂಧವ್ಯದ ಬಗ್ಗೆ ಸಾಕಷ್ಟು ಬಾರಿ ಸುದ್ದಿಯಾಗಿದೆ.
ಇದರ ಮಧ್ಯೆ ಅನುಷ್ಕಾ ಅಭಿನಯದ `ಭಾಗಮತಿ’ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಈ ಬಗ್ಗೆ ಪ್ರಭಾಸ್ ತಮ್ಮ ಫೇಸ್ ಬುಕ್ ನಲ್ಲಿ ಸ್ಟೇಟಸ್ ಹಾಕಿ ಸ್ವೀಟಿ ಬಗ್ಗೆ ಪ್ರೀತಿಯ ಮಾತುಗಳನ್ನಾಡಿದ್ದಾರೆ.
Advertisement
“ಪ್ರತಿ ಸಿನಿಮಾಗಳಲ್ಲಿಯೂ ಹೊಸ ರೀತಿಯ ಪ್ರಯೋಗ ಮಾಡುವುದರಲ್ಲಿ ಅನುಷ್ಕಾ ಶೆಟ್ಟಿ ಯಾವಾಗಲೂ ಮೊದಲಿರುತ್ತಾರೆ. ಗುಡ್ ಲಕ್ ಸ್ವೀಟಿ.. ಹಾಗೂ ಚಿತ್ರತಂಡಕ್ಕೆ ಶುಭವಾಗಲಿ” ಎಂದು ಬರೆದು ಭಾಗಮತಿ ಸಿನಿಮಾ ಟೀಸರ್ ಹಾಕಿಕೊಂಡಿದ್ದಾರೆ.
Advertisement
Advertisement
ಅನುಷ್ಕಾ ಶೆಟ್ಟಿ ಅಭಿನಯದ `ಭಾಗಮತಿ’ ಚಿತ್ರದ ಟೀಸರ್ ಡಿಸೆಂಬರ್ 20 ರಂದು ಬಿಡುಗಡೆಯಾಗಿದೆ. `ಬಾಹುಬಲಿ’ ಚಿತ್ರದಲ್ಲಿ ದೇವಸೇನಾ ಆಗಿ ಕಾಣಿಸಿಕೊಂಡಿದ್ದ ಅನುಷ್ಕಾ, ಈಗ ರಾಣಿ ಭಾಗಮತಿ ಪಾತ್ರದಲ್ಲಿ ಮಿಂಚಲಿದ್ದಾರೆ. ಚಿತ್ರದ ಟೀಸರ್ ತುಂಬಾ ಕುತೂಹಲವನ್ನು ಮೂಡಿಸುತ್ತಿದೆ.
Advertisement
ಪ್ರಭಾಸ್ ಸದ್ಯ ಸಾಹೋ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರವನ್ನ ಸುಜೀತ್ ನಿರ್ದೇಶಿಸುತ್ತಿದ್ದು, ಹಾಲಿವುಡ್ ಸ್ಟಂಟ್‍ಮ್ಯಾನ್ ಕೆನ್ನಿ ಬೇಟ್ಸ್ ಪ್ರಭಾಸ್‍ಗೆ ತರಬೇತಿ ನೀಡುತ್ತಿದ್ದಾರೆ. ಸಾಹೋ ಸಿನಿಮಾ ತೆಲುಗು, ತಮಿಳು, ಮಲೆಯಾಳಂ ಮತ್ತು ಹಿಂದಿ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗುತ್ತಿದ್ದು, ಮುಂದಿನ ವರ್ಷ 2018 ಕ್ಕೆ ತೆರೆಕಾಣುವ ಸಾಧ್ಯತೆ ಇದೆ.