ಕಾಣದಂತೆ ಮಾಯವಾದನು ಟ್ರೈಲರ್‌‌ಗೆ ಪವರ್ ಸ್ಟಾರ್ ಫಿದಾ!

Public TV
1 Min Read
Kanadante Mayavadavanu 1

ಬೆಂಗಳೂರು: ಕೆಲ ಚಿತ್ರಗಳು ತಡವಾದಷ್ಟೂ ಕ್ಯೂರಿಯಾಸಿಟಿ ಹುಟ್ಟಿಸುತ್ತಾ ಸಾಗುತ್ತವೆ. ಅದು ಸಾಧ್ಯವಾಗೋದು ಒಳಗೇನೇ ವಿಶೇಷವಾದ ಕಂಟೆಂಟು, ಕ್ರಿಯೇಟಿವಿಟಿಗಳಿದ್ದಾಗ ಮಾತ್ರ. ಸದ್ಯ ಟ್ರೈಲರ್ ಮೂಲಕ ಎಲ್ಲೆಡೆ ಮೆಚ್ಚುಗೆ ಗಳಿಸಿಕೊಂಡಿರೋ ರಾಜ್ ಪತ್ತಿಪಾಟಿ ನಿರ್ದೇಶನದ ಕಾಣದಂತೆ ಮಾಯವಾದನು ಚಿತ್ರ ಕೂಡಾ ಅದೇ ಮಾದರಿಯದ್ದು. ಆಗಾಗ ಮರೆಗೆ ಸರಿದಂತೆ ಕಾಣಿಸಿದ್ದರೂ ಕೂಡಾ ಈ ಸಿನಿಮಾ ಅಡಿಗಡಿಗೆ ಸದ್ದು ಮಾಡಿದ್ದು ಕ್ರಿಯೇಟಿವಿಟಿಯಿಂದಲೇ. ಕೆಲ ದಿನಗಳ ಹಿಂದೆ ಬಿಡುಗಡೆಯಾಗಿರೋ ಟ್ರೈಲರ್ ಅಂತೂ ಇದೊಂದು ವಿಶಿಷ್ಟ ಚಿತ್ರ ಎಂಬುದನ್ನು ಪಕ್ಕಾ ಮಾಡಿದೆ.

Kaanadante Maayavadanu

ಈ ಟ್ರೈಲರ್ ಅನ್ನು ವೀಕ್ಷಿಸಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೂ ಕೂಡಾ ಇದೀಗ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಈ ಟ್ರೈಲರಿನ ದೃಷ್ಯಾವಳಿಗಳೇ ಇದರಲ್ಲೇನೋ ಇದೆ ಎಂಬುದನ್ನು ಸೂಚಿಸುವಂತಿವೆ. ಕಮರ್ಶಿಯಲ್ ಸೇರಿದಂತೆ ಎಲ್ಲ ಅಂಶಗಳೂ ಮಿಳಿತವಾದಂತಿವೆ. ಈ ಚಿತ್ರಕ್ಕೆ ಯಶ ಸಿಗಲಿ ಅನ್ನುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಪವರ್ ಸ್ಟಾರ್ ಕಡೆಯಿಂದಲೇ ಇಂಥಾ ಮಾತುಗಳು ಬಂದಿರೋದರಿಂದ ಚಿತ್ರತಂಡವೂ ಖುಷಿಗೊಂಡಿದೆ.

Kaanadante Maayavadanu 1

ಈ ಮೂಲಕ ವಿಕಾಸ್ ಅವರ ಹೊಸಾ ಅನ್ವೇಷಣೆಗೂ ಗೆಲುವಿನ ಮುನ್ಸೂಚನೆ ಸಿಕ್ಕಮತಾಗಿದೆ. ಅಷ್ಟಕ್ಕೂ ಈ ಟ್ರೈಲರ್ ನೋಡಿದ ಪ್ರತಿಯೊಬ್ಬರೂ ಕಥೆಯ ಜಾಡಿನ ಜೊತೆಗೇ ವಿಶಾಲ್ ಅವರ ನಟನೆಯನ್ನೂ ಮೆಚ್ಚಿಕೊಂಡಿದ್ದಾರೆ. ಆತ್ಮವೊಂದರ ಪ್ರೇಮಕಥೆ, ರಿವೇಂಜಿನ ಸ್ಟೋರಿ ಹೊಂದಿರೀ ಈ ಚಿತ್ರ ಮಾಮೂಲಿ ಶೈಲಿಯದ್ದಂತೂ ಅಲ್ಲ ಎಂಬ ವಿಚಾರವೂ ಈ ಮೂಲಕವೇ ಸಾಬೀತಾಗಿದೆ. ಅದುವೇ ಕಾಣದಂತೆ ಮಾಯವಾದವನಿಗಾಗಿ ಕಾಯುವಂತೆಯೂ ಮಾಡಿ ಬಿಟ್ಟಿದೆ.

https://www.facebook.com/publictv/videos/323777685235397/

ಇದು ರಾಜ್ ಪತ್ತಿಪಾಟಿ ನಿರ್ದೇಶನದ ಚಿತ್ರ. ಹಾರರ್ ಚಿತ್ರವೆಂದರೆ ಭೂತಗಳನ್ನು ಬಿಟ್ಟು ಹೆದರಿಸೋದು, ಅದಕ್ಕೆ ಸಪೋರ್ಟಿಗೆಂಬಂತೆ ಕಥೆಯೊಂದನ್ನು ಹರಿಯ ಬಿಡೋದು ಎಂಬಂಥಾ ಸೂತ್ರ ಸಾಕಷ್ಟು ಕಾಲದಿಂದಲೂ ಇದೆ. ಅದನ್ನು ಬ್ರೇಕ್ ಮಾಡುವಂತೆ ಬಂದಿರೋ ಚಿತ್ರಗಳು ವಿರಳ. ಹಾಗೆ ಬಂದವೆಲ್ಲ ಗೆದ್ದಿವೆ. ಸದ್ಯ ಕಾಣದಂತೆ ಮಾಯವಾದನು ಚಿತ್ರವೂ ಅದೇ ಹಾದಿಯಲ್ಲಿದೆ.

Share This Article
Leave a Comment

Leave a Reply

Your email address will not be published. Required fields are marked *