ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಡೆಸಿಕೊಡುವ ಫ್ಯಾಮಿಲಿ ಪವರ್ ಕಾರ್ಯಕ್ರಮಕ್ಕೆ ಇನ್ನೇನು ತೆರೆ ಬೀಳಲಿದೆ. ಅದ್ದಕ್ಕಿಂದ ಮೊದಲೇ ಪುನೀತ್ ರಾಜ್ ಕುಮಾರ್, ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗೆ ಧನ್ಯವಾದ ತಿಳಿಸಿದ್ದಾರೆ.
ಕಾಮಿಡಿ ಆ್ಯಕ್ಟರ್ ವಿಶ್ವನಾಥ್ ಧರ್ಮಪತ್ನಿ ಸಾತ್ವಿಕಾ ಅವರಿಂದಾಗಿ ಪುನೀತ್ ದರ್ಶನ್‍ಗೆ ಥ್ಯಾಂಕ್ಸ್ ಹೇಳಿದ್ದಾರೆ. ಫ್ಯಾಮಿಲಿ ಪವರ್ ಕೊನೆಯ ಎಪಿಸೋಡ್‍ನಲ್ಲಿ ಸ್ಪರ್ಧಿಗಳಾಗಿ ಕುರಿ ಪ್ರತಾಪ್ ಫ್ಯಾಮಿಲಿ ಮತ್ತು ವಿಶ್ವ ಫ್ಯಾಮಿಲಿ ಆಗಮಿಸಿದ್ದರು.
ಈ ವೇಳೆ ನಡೆದ ಪ್ರಶ್ನೋತ್ತರ ಸಂದರ್ಭದಲ್ಲಿ ವಿಶ್ವ ಪತ್ನಿ ಸಾತ್ವಿಕಾ ಹತ್ತು ಪ್ರಶ್ನೆಗೆ ಸರಿ ಉತ್ತರ ಕೊಡೋಕೆ ಒದ್ದಾಡುತ್ತಿದ್ದರು. ಆದರೆ ಒಂಭತ್ತನೇ ಪ್ರಶ್ನೆ ದರ್ಶನ್ ನಾಯಕನಾಗಿ ಅಭಿನಯಿಸಿರೋ ಮೊದಲ ಚಿತ್ರ ಯಾವುದು ಎನ್ನುವ ಪ್ರಶ್ನೆಗೆ ಮೆಜೆಸ್ಟಿಕ್ ಎಂದು ಸರಿ ಉತ್ತರ ನೀಡಿದ್ದಾರೆ.
ಇಡೀ ಎಪಿಸೋಡ್‍ನಲ್ಲಿ ವಿಶ್ವಾ ಅವರ ಪತ್ನಿ ಸಾತ್ವಿಕಾ ಸಿನಿಮಾ ಪ್ರಶ್ನೆ ಬಂದಿದ್ದರೂ ಹೇಳೋಕೆ ಕಷ್ಟವಾಗಿತ್ತು. ಆದರೆ ಮಗನ ಫೇವರೇಟ್ ನಟ ದರ್ಶನ್ ಬಗ್ಗೆ ಪ್ರಶ್ನೆ ಬಂದಾಗ ಪಟ್ ಎಂದು ಉತ್ತರಿಸಿದ್ದಾರೆ. ಆ ಸಂಭ್ರಮಕ್ಕೆ ಪುನೀತ್ ಕೂಡ ಖುಷಿಯಾಗಿ ಥ್ಯಾಂಕ್ಯೂ ದರ್ಶನ್ ಥ್ಯಾಂಕ್ಸ್ ಮೆಜೆಸ್ಟಿಕ್ ಎಂದು ತಿಳಿಸಿದ್ದಾರೆ.