ಬೆಂಗಳೂರು: ಕಳೆದ ತಿಂಗಳು ನವೆಂಬರ್ ನಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು 33 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ‘ಬೆಟ್ಟದ ಹೂವು’ ಚಿತ್ರದ ಸ್ಥಳಕ್ಕೆ ಭೇಟಿ ನೀಡಿ ತಮ್ಮ ಹಳೆಯ ನೆನಪನ್ನು ಹಂಚಿಕೊಂಡಿದ್ದರು. ಈಗ ಇದೇ ಚಿತ್ರದ ಪೋಸ್ಟರ್ ಹಾಕಿ ಮರೆಯಲಾಗದ ನೆನಪುಗಳು ಎಂದು ಪೋಸ್ಟ್ ಮಾಡಿದ್ದಾರೆ.
ಪುನೀತ್ ರಾಜ್‍ಕುಮಾರ್ ತಮ್ಮ ಫೇಸ್‍ಬುಕ್‍ನಲ್ಲಿ 33 ವರ್ಷದ ಹಿಂದಿನ ಬೆಟ್ಟದ ಹೂವು ಚಿತ್ರದ ಪೋಸ್ಟರ್ ಹಾಕಿ ಅದಕ್ಕೆ, “ಬೆಟ್ಟದ ಹೂವು ಸಿನಿಮಾ ಪೋಸ್ಟರ್ ಮರೆಯಲಾಗದ ನೆನಪುಗಳು” ಎಂದು ಬರೆದು ಪೋಸ್ಟ್ ಮಾಡಿಕೊಂಡಿದ್ದಾರೆ.
Advertisement
ಪುನೀತ್ ರಾಜ್‍ಕುಮಾರ್ ಬಾಲ ನಟರಾಗಿ `ಬೆಟ್ಟದ ಹೂವು’ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರಕ್ಕೆ ಅವರಿಗೆ ರಾಷ್ಟ್ರ ಪ್ರಶಸ್ತಿ ಕೂಡ ದೊರೆತ್ತಿತ್ತು. ಈ ಹಿಂದೆ ಪುನೀತ್ ಬೆಟ್ಟದ ಹೂವು ಚಿತ್ರದ ದಿನಗಳನ್ನು ನೆನಪಿಸಿಕೊಂಡು ಫೇಸ್‍ಬುಕ್ ನಲ್ಲಿ ವಿಡಿಯೋವೊಂದನ್ನು ಅಪ್ಲೋಡ್ ಮಾಡಿದ್ದರು. ಇದನ್ನೂ ಓದಿ: 33 ವರ್ಷದ ಹಿಂದಿನ ನೆನಪು ಮಾಡಿಕೊಂಡು ಮುಗಳ್ನಕ್ಕ ಪವರ್ ಸ್ಟಾರ್
Advertisement
Advertisement
ಬೆಟ್ಟದ ಹೂವು ಚಿತ್ರ 1985ರಲ್ಲಿ ಬಿಡುಗಡೆಯಾಗಿ 33 ವರ್ಷಗಳು ಆಗಿದೆ. ನವೆಂಬರ್ ನಲ್ಲಿ ಪುನೀತ್ ರಾಜ್‍ಕುಮಾರ್ ಅವರು ಬೆಟ್ಟದ ಹೂವು ಚಿತ್ರೀಕರಣ ಜಾಗಕ್ಕೆ ಭೇಟಿ ಮಾಡಿ ತಮ್ಮ ಬಾಲ್ಯದ ನೆನಪುಗಳನ್ನು ವಿಡಿಯೋ ಮೂಲಕ ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು.
Advertisement
ಪುನೀತ್ `ನಟಸಾರ್ವಭೌಮ’ ಚಿತ್ರದ ಚಿತ್ರೀಕರಣಕ್ಕಾಗಿ ಚಿಕ್ಕಮಗಳೂರಿನಲ್ಲಿ ಸಂಚರಿಸುತ್ತಿದ್ದಾಗ ಬೆಟ್ಟದ ಹೂವು ಚಿತ್ರದ ಚಿತ್ರೀಕರಣ ಸ್ಥಳದ ನೆನಪಾಗಿ ಕೂಡಲೇ ಕಾರನ್ನು ಅತ್ತಿಗುಂಡಿ ಕಡೆಗೆ ತಿರುಗಿಸಿದ್ದಾರೆ. ಪುನೀತ್ ಆ ಸ್ಥಳಕ್ಕೆ ಹೋದ ನಂತರ ಶೂಟಿಂಗ್ ಸ್ಥಳ, ಶೂಟಿಂಗ್ ಸೆಟ್ ಎಲ್ಲಿ ಹಾಕಿದ್ದು ಹಾಗೂ ಚಿತ್ರದಲ್ಲಿ ಯಾರ್ಯಾರು ಯಾವ ಪಾತ್ರ ಮಾಡಿದ್ದರು ಎಂಬುದನ್ನು ವಿವರಿಸಿದ್ದರು.
33 ವರ್ಷಗಳ ಹಿಂದೆ ರಿಲೀಸ್ ಆಗಿದ್ದ ಬೆಟ್ಟದ ಹೂವು ಚಿತ್ರೀಕರಣ ನೆನಪನ್ನು ಮೆಲುಕು ಹಾಕಿದ್ದರು. ಪುನೀತ್ ಚಿತ್ರೀಕರಣ ಜಾಗಕ್ಕೆ ಭೇಟಿ ನೀಡಿದ್ದಲ್ಲದೇ ಅತ್ತಿಗುಂಡಿಯ ಗ್ರಾಮಸ್ಥರನ್ನು ಮಾತನಾಡಿಸಿ ಚಿತ್ರೀಕರಣದ ಸ್ಥಳ ಹಾಗೂ ಚಿತ್ರೀಕರಣದ ಅನುಭವವನ್ನು ಹಂಚಿಕೊಂಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv