ಮಂಗಳೂರು: ಫೋನ್ ಸಂಭಾಷಣೆಯ ಪ್ರಕರಣ ಸಂಬಂಧ ಕೋರ್ಟಿಗೆ ಹಾಜರಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಸಾಕ್ಷ್ಯ ಹೇಳುತ್ತಿದ್ದ ಸಂದರ್ಭದಲ್ಲಿ ಕರೆಂಟ್ ಕೈಕೊಟ್ಟ ಪ್ರಸಂಗ ಇಂದು ನಡೆದಿದೆ.
ಸುಳ್ಯದ ಜನ ವಿದ್ಯುತ್ ವ್ಯತ್ಯಯವಾಗುವ ಸಮಸ್ಯೆ ಆಗಾಗ ಎದುರಿಸುತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಇಂದು ಮಾಜಿ ಪವರ್ ಮಿನಿಸ್ಟರ್ ಕೋರ್ಟ್ ಕಟೆಕಟೆಯ್ಲಲಿರುವಾಗಲೇ ಕರೆಂಟ್ ಹೋಗಿದೆ. ಇದೇ ಸಂದರ್ಭದಲ್ಲಿ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶರು, ವಿದ್ಯುತ್ ಸಮಸ್ಯೆಯ ಬಗ್ಗೆ ಡಿಕೆಶಿಗೆ ಮನವರಿಕೆ ಮಾಡಿದರು. ಇದನ್ನೂ ಓದಿ: ಕೋರ್ಟ್ ಆದೇಶಕ್ಕೆ ತಲೆ ಬಾಗಿ ಬಂದಿದ್ದೇನೆ – ಸುಳ್ಯ ನ್ಯಾಯಾಲಯಕ್ಕೆ ಇಂದು ಡಿಕೆಶಿ ಹಾಜರು
Advertisement
Advertisement
ಈ ವಿಚಾರದಲ್ಲಿ ನಿಮಗೆ ಅವರು ಬೈದಿದ್ದು ತಪ್ಪು. ಸುಳ್ಯದಲ್ಲಿ ವಿದ್ಯುತ್ ಸಮಸ್ಯೆ ಅಷ್ಟೊಂದಿದೆ. ಇದನ್ನು ನೀವೇ ಈಗ ಸ್ವತಃ ಅನುಭವಿಸಿದ್ದೀರಿ. ಎಲ್ಲರೂ ಪ್ರತೀ ದಿನ ವಿದ್ಯುತ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ನಿಮಗೂ ಇಂದು ವಿದ್ಯುತ್ ಸಮಸ್ಯೆಯ ಅರಿವಾಗಿದೆ ಎಂದು ಡಿಕೆಶಿಗೆ ನ್ಯಾಯಾಧೀಶರು ತಿಳಿಸಿದರು. ಇದನ್ನೂ ಓದಿ: ಸೋನಿಯಾ ಗಾಂಧಿ ಭೇಟಿ ಅಂತ್ಯ- ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯಗೆ ಆಹ್ವಾನ?
Advertisement
Advertisement
ಕೋರ್ಟಿನಲ್ಲಿ ಸಾಕ್ಷ್ಯ ನುಡಿದು ಹೊರ ಬಂದ ಬಳಿಕ ಮಧ್ಯಮಗಳ ಜೊತೆ ಮಾತನಾಡಿದ ಡಿಕೆಶಿ, ಕಾನೂನಿಗೆ ತಲೆ ಬಾಗಿ ಕೋರ್ಟ್‍ಗೆ ಹಾಜರಾಗಿದ್ದೇನೆ. ಆ ವ್ಯಕ್ತಿ ನನಗೆ ಮಾತ್ರವಲ್ಲದೇ ಅಧಿಕಾರಿಗಳಿಗೂ ಅವಾಚ್ಯ ಶಬ್ದದಿಂದ ಬೈದಿದ್ದಾರೆ. ಸಾರ್ವಜನಿಕ ಕೆಲಸ ಮಾಡೋವಾಗ ಕರ್ತವ್ಯಕ್ಕೆ ಅಡ್ಡಿ ಮಾಡುವ ಪ್ರಯತ್ನ ನಡೆಯುತ್ತದೆ. ಈ ಕಾರಣಕ್ಕಾಗಿ ಅಧಿಕಾರಿಗಳು ದೂರು ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದ ವಿಚಾರವನ್ನು ಕೋರ್ಟ್ ಮುಂದೆ ಹೇಳಿದ್ದೇನೆ ಎಂದರು.
ಸುಳ್ಯ ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ಇದೆ. ನಾನು ಸಚಿವನಾಗಿದ್ದ ಸಂದರ್ಭ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡಿದ್ದೇನೆ. ಈಗಿನ ನೂತನ ಸಚಿವರು ಸಮಸ್ಯೆ ಬಗೆಹರಿಸಬಹುದು ಎಂಬ ಭರವಸೆ ಇದೆ ಎಂದರು. ಇದನ್ನೂ ಓದಿ: ನಿರ್ಭೀತ, ನೈಜ ಕಾಂಗ್ರೆಸ್ಸಿಗಳು ಪ್ರಿಯಾಂಕಾ ಗಾಂಧಿ: ರಾಗಾ