ನೆಲಮಂಗಲ: ಸಿಲಿಕಾನ್ ಸಿಟಿಯಲ್ಲಿ ವಾಹನ ಚಾಲಕರಿಗೆ ಯಾವಾಗಲೂ ಟ್ರಾಫಿಕ್ ಸಮಸ್ಯೆ, ಮಳೆಯ ಸಂದರ್ಭದಲ್ಲಿ ಗುಂಡಿಯ ಸಮಸ್ಯೆ. ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಲೇ ಇರುತ್ತದೆ.
ಕೆಲ ವರ್ಷಗಳ ಹಿಂದೆ ದಾಸರಹಳ್ಳಿಯ (Dasarahalli) ಎಂಟನೇ ಮೈಲಿ ಬಳಿ ಫ್ಲೈಓವರ್ ರಸ್ತೆಯ ಪಿಲ್ಲರ್‌ನಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ವಾಹನಗಳಿಗೆ ನಿಷೇಧ ಹೇರಲಾಯಿತು. ಇದರಿಂದಾಗಿ ಸಾಕಷ್ಟು ಸಮಸ್ಯೆಯಾಗಿ ಪ್ರತಿನಿತ್ಯ ಟ್ರಾಫಿಕ್ ಜಾಮ್‌ನಿಂದಾಗಿ ಸವಾರರು ಪರಿತಪ್ಪಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿ ಸುದ್ದಿಗೆ ಕಾರಣವಾಗಿತ್ತು. ಇತ್ತೀಚೆಗಷ್ಟೇ ನೆಲಮಂಗಲ (Nelamangala) ಹಾಗೂ ಗೊರಗುಂಟೆಪಾಳ್ಯ (Gorguntepalya) ನಡುವಿನ ರಾಷ್ಟ್ರೀಯ ಹೆದ್ದಾರಿಯು ಈ ಟ್ರಾಫಿಕ್ ಸಮಸ್ಯೆಗಳಿನ್ನು ತೆರವುಗೊಳಿಸಿ, ವಾಹನಗಳಿಗೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿತ್ತು.ಇದನ್ನೂ ಓದಿ: ಪಶ್ಚಿಮ ಬಂಗಾಳದ ʼಅಪರಾಜಿತ ಬಿಲ್ʼ ಪೋಕ್ಸೊಗಿಂತ ಭಿನ್ನ ಹೇಗೆ?
Advertisement
Advertisement
ಇಗೀಗ ಟೋಲ್ ಕಂಪನಿಯ ನಿರ್ಲಕ್ಷ್ಯದಿಂದ ಮತ್ತೊಂದು ಭಾರೀ ಅನಾಹುತಕ್ಕೆ ಕಾರಣವಾಗಿದೆ. ನೆಲಮಂಗಲದ ಕುಣಿಗಲ್ ಬೈಪಾಸ್, ಮಾಕಳಿ, ಮಾದನಾಯಕನಹಳ್ಳಿ, ಮಾದಾವಾರ ರಸ್ತೆಯ ಬಳಿ ಬೃಹತ್ ಗುಂಡಿಗಳಿಂದ ಸವಾರರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಂದ ಪರಿಣಾಮ ರಸ್ತೆಯ ಪಕ್ಕದ ಬೃಹತ್ ಸ್ಲಾಬ್‌ಗಳು ಕುಸಿದು ವಾಹನ ಸವಾರರ ಜೀವಕ್ಕೆ ಮೃತ್ಯು ಕೂಪವಾಗಿ ಪರಿಣಮಿಸಿವೆ.
Advertisement
Advertisement
ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚಾರ ಮಾಡುವ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾಗೂ ರಾಜ್ಯದ ಸುಮಾರು 17 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬೃಹತ್ ಗುಂಡಿಗಳ ಗಂಡಾಂತರದಿಂದ ಪರಿಸ್ಥಿತಿ ಹದಗೆಟ್ಟಿದೆ. ದ್ವಿಚಕ್ರ ವಾಹನ ಸವಾರರು ಸ್ವಲ್ಪ ಯಾಮಾರಿದರೂ ಜೀವಕ್ಕೆ ಸಂಚಕಾರ ತರಲಿದೆ.ಇದನ್ನೂ ಓದಿ: Breaking | ರೇಣುಕಾಸ್ವಾಮಿ ಕೊಲೆ ಕೇಸ್ – ದರ್ಶನ್ & ಗ್ಯಾಂಗ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ
ಪ್ರತಿನಿತ್ಯ ಲಕ್ಷಾಂತರ ರೂಪಾಯಿ ಟೋಲ್ ಹಣ ಸಂಗ್ರಹಿಸುವ ಟೋಲ್ ಕಂಪನಿ ನಿರ್ವಹಣೆ ಮಾಡಬೇಕಿದ್ದು, ಸವಾರರ ಜೀವದ ಜೊತೆಗೆ ಚಲ್ಲಾಟವಾಡುತ್ತಿದ್ದಾರೆ ಎಂದು ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಸಮಸ್ಯೆಗಳ ಆಗರವಾಗಿರುವ ನೆಲಮಂಗಲ ಗೊರಗುಂಟೆಪಾಳ್ಯ ನಡುವಿನ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಒಂದಲ್ಲ ಒಂದು ಸಮಸ್ಯೆ ಸವಾರರ ಜೀವಕ್ಕೆ ಯಮಸ್ವರೂಪಿಯಾಗಿದೆ.