ಹಲ್ವಾ ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುವ ಸಿಹಿಗಳಲ್ಲಿ ಒಂದು. ಹಲವು ಹಣ್ಣು, ತರಕಾರಿಗಳನ್ನು ಬಳಸಿ ಹಲ್ವಾವನ್ನು ತಯಾರಿಸಲಾಗುತ್ತದೆ. ಇಂದು ನಾವು ಸ್ವಲ್ಪ ಡಿಫರೆಂಟ್ ಆಗಿ ಆಲೂಗಡ್ಡೆಯಿಂದ ಹಲ್ವಾ ಮಾಡುವುದು ಹೇಗೆ ಎಂಬುದನ್ನು ಹೇಳಿಕೊಡುತ್ತೇವೆ. ಸಿಹಿಯಾದ ಆಲೂಗಡ್ಡೆಯ ಹಲ್ವಾ ಮಾಡುವ ವಿಧಾನ ಇಲ್ಲಿದೆ.
Advertisement
ಬೇಕಾಗುವ ಪದಾರ್ಥಗಳು:
ಆಲೂಗಡ್ಡೆ – 5
ತುಪ್ಪ – ಅರ್ಧ ಕಪ್
ಸಕ್ಕರೆ – 1 ಕಪ್
ಕೇಸರಿ ಆಹಾರ ಬಣ್ಣ – ಅರ್ಧ ಟೀಸ್ಪೂನ್
ಏಲಕ್ಕಿ ಪುಡಿ – ಅರ್ಧ ಟೀಸ್ಪೂನ್
ಹುರಿಯಲು:
ತುಪ್ಪ – 1 ಟೀಸ್ಪೂನ್
ಒಣದ್ರಾಕ್ಷಿ – 2 ಟೀಸ್ಪೂನ್
ಕತ್ತರಿಸಿದ ಗೋಡಂಬಿ – 2 ಟೀಸ್ಪೂನ್
ಕತ್ತರಿಸಿದ ಬಾದಾಮಿ – 2 ಟೀಸ್ಪೂನ್ ಇದನ್ನೂ ಓದಿ: ಫಟಾಫಟ್ ಅಂತ ಮಾಡ್ಬೋದು ಕೇಸರ್ ಪೇಡ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ, ಪ್ರೆಷರ್ ಕುಕ್ಕರ್‌ನಲ್ಲಿ 5 ಆಲೂಗಡ್ಡೆಯನ್ನು 5 ಸೀಟಿ ಬರಿಸಿ ಬೇಯಿಸಿ.
* ಬಳಿಕ ಆಲೂಗಡ್ಡೆಯ ಸಿಪ್ಪೆಯನ್ನು ತೆಗೆದು ತುರಿಯಿರಿ ಮತ್ತು ಪಕ್ಕಕ್ಕೆ ಇರಿಸಿ.
* ದೊಡ್ಡ ಕಡಾಯಿಯಲ್ಲಿ ಅರ್ಧ ಕಪ್ ತುಪ್ಪ ತೆಗೆದುಕೊಂಡು, ಅದಕ್ಕೆ ಬೇಯಿಸಿ, ತುರಿದ ಆಲೂಗಡ್ಡೆಯನ್ನು ಸೇರಿಸಿ.
* 5 ನಿಮಿಷಗಳ ಕಾಲ ಹುರಿದು, ಬಳಿಕ ಸಕ್ಕರೆ ಮತ್ತು ಕೇಸರಿ ಆಹಾರ ಬಣ್ಣ ಸೇರಿಸಿ.
* ಮಧ್ಯಮ ಉರಿಯಲ್ಲಿ ಕೈ ಆಡಿಸುತ್ತಾ ಸಕ್ಕರೆ ಕರಗುವವರೆಗೆ ಬೇಯಿಸಿ.
* ತುಪ್ಪ ಬೇರ್ಪಡುವವರೆಗೂ ಮಧ್ಯಮ ಉರಿಯಲ್ಲಿ ಬೇಯಿಸಿ. ಇದು ಸುಮಾರು 15 ನಿಮಿಷ ತೆಗೆದುಕೊಳ್ಳುತ್ತದೆ.
* ಈಗ ಇನ್ನೊಂದು ಪ್ಯಾನ್‌ನಲ್ಲಿ 1 ಟೀಸ್ಪೂನ್ ತುಪ್ಪ ಬಿಸಿ ಮಾಡಿ, ಅದಕ್ಕೆ ಒಣದ್ರಾಕ್ಷಿ, ಗೋಡಂಬಿ ಮತ್ತು ಬಾದಾಮಿ ಸೇರಿಸಿ.
* ಬೀಜಗಳು ಗೋಲ್ಡನ್ ಬ್ರೌನ್ ಮತ್ತು ಗರಿಗರಿಯಾಗುವ ತನಕ ಕಡಿಮೆ ಉರಿಯಲ್ಲಿ ಹುರಿಯಿರಿ.
* ಈಗ ಹಲ್ವಾಗೆ ಹುರಿದ ಬೀಜಗಳನ್ನು ಹಾಕಿ, ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ಇದೀಗ ಆಲೂಗಡ್ಡೆಯ ಹಲ್ವಾ ತಯಾರಾಗಿದ್ದು, ಸ್ವಲ್ಪ ತಣ್ಣಗಾದಬಳಿಕ ಸವಿಯಿರಿ. ಇದನ್ನೂ ಓದಿ: ಸಿಹಿಯಾದ ಬಾಳೆಹಣ್ಣಿನ ಅಪ್ಪಂ – ಮಾಡುವುದು ತುಂಬಾ ಸುಲಭ