ಎರಡನೇ ಹಂತದ ಲಾಕ್‍ಡೌನ್ ಅಂತ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಕೆಲ ಭಾಗಗಳಿಗೆ ಸಡಿಲಿಕೆ ನೀಡದಿದ್ರೂ ಹೊರಗಡೆ ಹೋಗಿ ತಿಂಡಿ ತಿನ್ನಲು ಕೊರೊನಾ ಭಯ ಕಾಡುತ್ತೆ. ಒಂದೂವರೆ ತಿಂಗಳಿನಿಂದ ಗೃಹ ಬಂಧನದಲ್ಲಿರೋ ಜನರಿಗೆ ಹೊಸ ಹೊಸ ತಿಂಡಿ ತಿನ್ನಬೇಕೆನಿಸುತ್ತಿದೆ. ಕೆಲವು ಭಾಗಗಳಲ್ಲಿ ಮಳೆ ಆಗುತ್ತಿದ್ದು, ಮೋಡ ಮುಸುಕಿದ ವಾತಾವರಣದಲ್ಲಿ ಏನಾದ್ರೂ ತಿಂಡಿ ಬೇಕೆನಿಸುತ್ತೆ. ಹಾಗಾದ್ರೆ ಎರಡು ಆಲೂಗಡ್ಡೆ, ಎರಡು ಕಪ್ ನಿಂದ ಹೊಸ ಗರಿ ಗರಿಯಾದ ತಿಂಡಿ ಮಾಡ್ಕೊಳ್ಳಿ.
Advertisement
ಬೇಕಾಗುವ ಸಾಮಾಗ್ರಿಗಳು
ಅಕ್ಕಿ- 2 ಕಪ್
ಆಲೂಗಡ್ಡೆ-2
ಜೀರಿಗೆ- 1/2 ಟೇಬಲ್ ಸ್ಪೂನ್
ಹಸಿ ಮೆಣಸಿನಕಾಯಿ-2
ಬೆಳ್ಳುಳ್ಳಿ-ಶುಂಠಿ ಪೇಸ್ಟ್- 1/2 ಟೇಬಲ್ ಸ್ಪೂನ್
ಕೋತಂಬರಿ ಸೊಪ್ಪು
ಎಣ್ಣೆ
ಉಪ್ಪು-ರುಚಿಗೆ ತಕ್ಕಷ್ಟು
Advertisement
ಮಾಡುವ ವಿಧಾನ
* ಎರಡು ಕಪ್ ಅಕ್ಕಿಯನ್ನು ತೊಳೆದುಕೊಂಡು ಮೂರು ಗಂಟೆ ನೆನಸಿಟ್ಟುಕೊಳ್ಳಬೇಕು.
* ಆಲೂಗಡ್ಡೆಯ ಸಿಪ್ಪೆ ತೆಗೆದು ಸ್ಲೈಸ್ ಮಾಡಿಕೊಂಡು 10 ರಿಂದ 15 ನಿಮಿಷ ಸ್ಟೀಮ್ ಮಾಡಿಕೊಳ್ಳಬೇಕು.
( ಜರಡಿಗೆ ಎಣ್ಣೆ ಸವರಿ ಸ್ಲೈಸ್ ಮಾಡಿರುವ ಆಲೂಗಡ್ಡೆ ಹಾಕಿ. ದೊಡ್ಡ ಪಾತ್ರೆಯಲ್ಲಿ ಒಂದರಿಂದ ಎರಡು ಗ್ಲಾಸ್ ನೀರು ಹಾಕಿ ಜರಡಿಯನ್ನ ಮೇಲಿಟ್ಟು ಮುಚ್ಚಳದಿಂದ ಮುಚ್ಚಿದ್ರೆ ಆಲೂಗಡ್ಡೆ ಸ್ಟೀಮ್ ಆಗುತ್ತೆ)
Advertisement
* ನೆನದ ಅಕ್ಕಿಯನ್ನು ಮಿಕ್ಸಿ ಜಾರ್ಗೆ ಹಾಕಿ ಕಡಿಮೆ ನೀರು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ರುಬ್ಬಿದ ಅಕ್ಕಿ ಹಿಟ್ಟನ್ನು ಮಿಕ್ಸಿಂಗ್ ಬೌಲ್ ನಲ್ಲಿ ಹಾಕಿಕೊಂಡು ಜೀರಿಗೆ, ಸಣ್ಣಗೆ ಕತ್ತರಿಸಿದ ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ-ಶುಂಠಿ ಪೇಸ್ಟ್, ಕೋತಂಬರಿ ಸೊಪ್ಪು, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.
* ಇನ್ನು ಸ್ಟೀಮ್ ಆಗಿರುವ ಆಲೂಗಡ್ಡೆಯನ್ನು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಿ. (ಆಲೂಗಡ್ಡೆ ರುಬ್ಬಿಕೊಳ್ಳುವಾಗ ನೀರು ಮಿಕ್ಸ್ ಮಾಡಬಾರದು)
* ರುಬ್ಬಿದ ಆಲೂಗಡ್ಡೆಯನ್ನು ಅಕ್ಕಿಹಿಟ್ಟಿನ ಮಿಶ್ರಣದೊಂದಿಗೆ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಪಾತ್ರೆಯ ಮುಚ್ಚಳ ಮುಚ್ಚಿ ಐದು ನಿಮಿಷ ಬಿಟ್ಟರೆ ಹಿಟ್ಟು ಹದವಾಗುತ್ತೆ.
Advertisement
* ಸ್ಟೌವ್ ಮೇಲಿಟ್ಟುಕೊಂಡು ಒಂದು ಪ್ಯಾನ್ ಗೆ ಕರಿಯಲು ಬೇಕಾದಷ್ಟು ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ.
* ಆಲೂಗಡ್ಡೆ ಮತ್ತು ಅಕ್ಕಿ ಮಿಶ್ರಣ ರೆಡಿಯಾದ ಮೇಲೆ ಸಣ್ಣ ಸಣ್ಣ ಉಂಡೆಗಳನ್ನು ಮಾಡಿಕೊಳ್ಳಬೇಕು. ಉಂಡೆಗಳನ್ನು ಕಾದ ಎಣ್ಣೆಗೆ ಹಾಕಿ ಫ್ರೈ ಮಾಡಿದ್ರೆ ನಿಮ್ಮ ತಿಂಡಿ ರೆಡಿ.