ಬ್ಯಾಂಕಾಕ್: ವರ್ಷಾನುಗಟ್ಟಲೆ ಮದ್ಯವನ್ನು ಸಂಗ್ರಹಿಸಿಟ್ಟರೆ ಅದರ ರುಚಿ ಚೆನ್ನಾಗಿರುತ್ತೆ ಎನ್ನುವ ಸಂಗತಿ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ. ಆದರೆ ಬ್ಯಾಂಕಾಕಿನ ವಟ್ಟಾನ ಪ್ರದೇಶದಲ್ಲಿರುವ ರೆಸ್ಟೋರೆಂಟ್‍ನಲ್ಲಿ ಸ್ಪೆಷಲ್ ಟೇಸ್ಟ್ಗಾಗಿ 45 ವರ್ಷಗಳಿಂದ ಸೂಪನ್ನು ಬೇಯಿಸುತ್ತಲೇ ಇದ್ದಾರೆ.
ಹೌದು. ಈ ವಿಷಯ ಕೇಳಿದರೆ ವಿಚಿತ್ರ ಅನಿಸಬಹುದು. ಆದರೂ ಕೂಡ ಈ ರೀತಿ ಸೂಪ್ ತಯಾರಾಗುತ್ತಿರುವುದು ಸತ್ಯ. ವಟ್ಟಾನದ ಪನೀಚ್ ರೆಸ್ಟೋರೆಂಟ್‍ನಲ್ಲಿ ಈ ರೀತಿ ವಿಶೇಷ ಸೂಪ್ ತಯಾರಿಸಲಾಗುತ್ತೆ. ವರ್ಷಾನುಗಟ್ಟೆಲೆಯಿಂದ ಸೂಪ್ ಬೇಯುತ್ತಿರುವ ಕಾರಣಕ್ಕೆ ಇದರ ರುಚಿ ಬೇರೆ ಸೂಪ್‍ಗಳಿಗಿಂತ ವಿಭಿನ್ನವಾಗಿದೆ. ಆದರಿಂದ ಪನೀಚ್ ರೆಸ್ಟೋರೆಂಟ್ ಸೂಪ್ ಸಖತ್ ಫೇಮಸ್ ಆಗಿದೆ.
Advertisement
Wattana Panich Restaurant pic.twitter.com/x4VWyCiHKL
— ikari cringey (@wypnagogic) December 15, 2017
Advertisement
ಪ್ರತಿದಿನ ರೆಸ್ಟೋರೆಂಟ್‍ನಲ್ಲಿ ರಾತ್ರಿ ಉಳಿಯುವ ಸೂಪನ್ನು ಪುನಃ ಬೆಳಿಗ್ಗೆ ಮಾಂಸ ಹಾಗೂ ಇತರೆ ವಸ್ತುಗಳನ್ನು ಹಾಕಿ ಬೇಯಿಸುತ್ತಾರೆ. ಈ ರೀತಿ ಮಾಡುವುದರಿಂದ ಸೂಪಿಗೆ ಟೆಸ್ಟ್ ಬರುತ್ತದೆ ಎಂದು ರೆಸ್ಟೋರೆಂಟ್ ಸಿಬ್ಬಂದಿ ತಿಳಿಸಿದ್ದಾರೆ. ಅಲ್ಲದೆ ಈ ವಿಶಿಷ್ಟ ಸೂಪಿಗೆ ನಿವ್ವಾ ಟ್ಯೂನ್ ಎಂದು ಕರೆಯಲಾಗುತ್ತದೆ. ಈ ಸೂಪ್ ಅಲ್ಲಿನ ಜನಕ್ಕೆ ಹಾಗೂ ಪ್ರವಾಸಿಗರಿಗೆ ಅಚ್ಚುಮೆಚ್ಚಿನ ಸೂಪ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಈ ಸೂಪ್ ಸಿಕ್ಕಾಪಟ್ಟೆ ಫೇಮಸ್. ನಿವ್ವಾ ಟ್ಯೂನ್ ಸೂಪ್ ಸೇವಿಸಿದವರು ಇದರ ರುಚಿಗೆ ಫಿದಾ ಆಗಿಬಿಟ್ಟಿದ್ದಾರೆ.
Advertisement
So annoying, keep getting full. Just want to eat all day! This is goat soup at Wattana Panich #bangkok pic.twitter.com/c9oNuO7Xqz
— Dave's Travel Corner (@DaveDTC) January 4, 2019
Advertisement
ಸಂಗ್ರಹಿಸಿಟ್ಟ ವೈನಿನ ರುಚಿ ಹೇಗೆ ವರ್ಷ ಕಳೆದಂತೆ ಹೆಚ್ಚಾಗುತ್ತದೊ, ಅದೇ ರೀತಿ ಈ ಸೂಪಿನ ರುಚಿ ಕೂಡ ಹೆಚ್ಚಾಗುತ್ತಿದೆ ಎಂದು ಜನರು ಬಾಯಿ ಚಪ್ಪರಿಸಿಕೊಂಡು ಸೂಪ್ ಸವಿದು ಆನಂದಿಸುತ್ತಾರೆ.