ಬಳ್ಳಾರಿ: ಮಾ.28ರಂದು ನಡೆಯಬೇಕಿದ್ದ ಬಳ್ಳಾರಿ (Ballari) ಮೇಯರ್ ಚುನಾವಣೆ (Mayor Election) ಮುಂದೂಡಿ ಕಲಬುರಗಿ ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಚುನಾವಣೆ ನೀತಿ ಸಂಹಿತೆ ಜಾರಿ (Code Of Election Conduct) ಹಾಗೂ ಎಲ್ಲಾ ಅಧಿಕಾರಿಗಳು ಚುನಾವಣೆ ಕೆಲಸದಲ್ಲಿ ತೊಡಗಿಸಿಕೊಂಡಿರುವ ಹಿನ್ನೆಲೆ ಮೇಯರ್ ಚುನಾವಣೆ ಮುಂದಕ್ಕೆ ಹಾಕಿ ಆದೇಶ ಹೊರಡಿಸಲಾಗಿದೆ. ಲೋಕಸಭೆ ಚುನಾವಣೆ ಮುಗಿದ ಬಳಿಕ ಮೇಯರ್ ಚುನಾವಣೆ ದಿನಾಂಕ ನಿಗದಿ ಮಾಡೋದಾಗಿ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಸಿಎಂ ಸ್ಥಾನಕ್ಕಾಗಿ ಮಹಾಬಲೇಶ್ವರ, ಕಾಲಭೈರವನ ಮೊರೆಹೋದ ಡಿಕೆಶಿ
Advertisement
Advertisement
ಬಳ್ಳಾರಿ ಪಾಲಿಕೆಯಲ್ಲಿ ಕಾಂಗ್ರೆಸ್ ಬಹುಮತ ಹೊಂದಿದ್ದು, ಪ್ರಸ್ತುತ ಮೆಯರ್ ಶ್ವೇತಾ ಅವಧಿ ಮಗಿದ ಹಿನ್ನೆಲೆ ಮೇಯರ್ ಚುನಾವಣೆ ನಿಗದಿಯಾಗಿತ್ತು. ಗುರುವಾರ ನಡೆಯಬೇಕಿದ್ದ ಚುನಾವಣೆ ಹಿನ್ನೆಲೆಯಲ್ಲಿ ನಾಲ್ಕು ಜನ ಆಕಾಂಕ್ಷಿಗಳು ಭರ್ಜರಿ ಗಿಫ್ಟ್ ಪಾಲಿಟಿಕ್ಸ್ ಆರಂಭ ಮಾಡಿದ್ದರು. ಪಾಲಿಕೆ ಸದಸ್ಯರಿಗೆ ಸೀರೆ, ಪಂಚೆ, ಬೆಳ್ಳಿ, ಬಂಗಾರದ ಉಡುಗೊರೆ ನೀಡಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದನ್ನೂ ಓದಿ: ಸುಧಾಕರ್ Vs ಮುನಿಯಪ್ಪ – ರಾಜಕೀಯ ಸಂಘರ್ಷಕ್ಕೆ ಇದೆ 25 ವರ್ಷಗಳ ಇತಿಹಾಸ
Advertisement