– ಶಾಂಪಿಂಗ್ ಮಾಲ್, ದೇವಸ್ಥಾನಕ್ಕೂ ನಿರ್ಬಂಧ
ಬೆಂಗಳೂರು: ಫ್ಲೆಕ್ಸ್, ಬ್ಯಾನರ್, ಪೋಸ್ಟರ್ ನಿಷೇಧ ಹಿನ್ನೆಲೆಯಲ್ಲಿ ರಸ್ತೆಗಳಲ್ಲಿ ಮಾತ್ರವಲ್ಲ, ಕಾರ್ಯಕ್ರಮಗಳಲ್ಲೂ ಬಳಸದಂತೆ ಹೈಕೋರ್ಟ್ ಖಡಕ್ ಎಚ್ಚರಿಕೆಯನ್ನು ನೀಡಿದೆ.
ಫ್ಲೆಕ್ಸ್ ನಿಷೇಧದ ಬಿಸಿ ಈಗ ಮದುವೆ, ಸಭೆ ಮತ್ತು ಸಮಾರಂಭಕ್ಕೂ ತಟ್ಟಿದೆ. ಯಾವುದೇ ಕಾರ್ಯಕ್ರಮಗಳಲ್ಲೂ, ದೇವಸ್ಥಾನ, ಹೋಟೆಲ್ ಮತ್ತು ಮಾಲ್‍ಗಳಲ್ಲೂ ಜಾಹೀರಾತು, ಫ್ಲೆಕ್ಸ್ ಗಳನ್ನು ಹಾಕುವಂತಿಲ್ಲ ಎಂದು ಸಾರ್ವಜನಿಕರಿಗೆ ಮತ್ತು ಸಂಘಟನೆಗಳಿಗೆ ಪಾಲಿಕೆ ಸೂಚಿಸಿದೆ. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಪರಮೇಶ್ವರ್ ಗೆ ಶುಭಕೋರಿ ಬ್ಯಾನರ್- ಬೆಂಬಲಿಗರ ವಿರುದ್ಧ ಎಫ್‍ಐಆರ್
Advertisement
Advertisement
ಫೆಕ್ಸ್ ನಿಷೇಧ ಕುರಿತಂತೆ ಬೆಂಗಳೂರು ನಗರದಲ್ಲಿ ಸಂಪೂರ್ಣವಾಗಿ ನಿಷೇಧ ಮಾಡಲಾಗಿದ್ದು, ಅದರಂತೆ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಲು ಮಹಾಪೌರರು ಹಾಗೂ ಆಯುಕ್ತರು ಸೂಚಿಸಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಬೆಂಗ್ಳೂರಿನಲ್ಲಿ ಭಿತ್ತಿ ಪತ್ರ ಅಂಟಿಸಿದರೆ 1 ಲಕ್ಷ ದಂಡ!
Advertisement
ಎಲ್ಲೆಲ್ಲಿ ಹಾಕಬಾರದು ಫ್ಲೆಕ್ಸ್!
1) ಮದುವೆ ಕಾರ್ಯಕ್ರಮಗಳಲ್ಲಿ
2) ಮದುವೆ ಸಭಾಂಗಣದ ಒಳಗೆ
3) ಒಳಾಂಗಣ ಸಭೆಗಳ ಬ್ಯಾಕ್ ಡ್ರಾಪ್ ಗಳಲ್ಲಿ
4) ನಗರದ ಮಾಲ್ ಗಳಲ್ಲಿ
5) ದೇವಸ್ಥಾನ ಕಾರ್ಯಕ್ರಮ ಗಳಲ್ಲಿ
6) ಬಸ್ ಶೆಲ್ಟರ್ ಗಳಲ್ಲಿ
7) ಸ್ಕೈ ವಾಕ್ ಗಳಲ್ಲಿ
8) ಯಾವುದೇ ಸಭೆಗಳಲ್ಲಿ/ ಖಾಸಗಿ ಹೋಟೆಲ್ ಸಭಾಂಗಣದಲ್ಲಿ
9) ಶಾಪಿಂಗ್ ಮಾಲ್
Advertisement
ಇನ್ನಿತ್ತರೆ ಯಾವುದೇ ಸ್ಥಳಗಳಲ್ಲಿ ಕಡ್ಡಾಯವಾಗಿ ನಿಷೇಧಿಸಿದೆ. ಅದರಂತೆ ಜಾಗೃತಿ ಮೂಡಿಸುವ ಹಾಗೂ ಶಿಸ್ತು ಕ್ರಮವಹಿಸುವ ಬಗ್ಗೆ ಮಹಾಪೌರರು ಹಾಗೂ ಆಯುಕ್ತರು ಸೂಚಿಸಿದ್ದಾರೆ.
ನಗರದಲ್ಲಿ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್ ಗಳ ಹಾವಳಿ ಹೆಚ್ಚಾಗಿತ್ತು. ಇದರಿಂದ ಫ್ಲೆಕ್ಸ್, ಬ್ಯಾನರ್ ಮತ್ತು ಪೋಸ್ಟರ್ ಗಳನ್ನು ತಕ್ಷಣ ತೆರವು ಮಾಡುವಂತೆ ಹೈಕೋರ್ಟ್ ಸೂಚಿಸಿತ್ತು. ಅದರಂತೆ ಬಿಬಿಎಂಪಿ ಅವರು ತಕ್ಷಣ ನಗರದಲ್ಲಿದ್ದ ಎಲ್ಲ ಫ್ಲೆಕ್ಸ್ ಗಳನ್ನು ತೆರವು ಮಾಡಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews