ನವದೆಹಲಿ: ಚುನಾವಣಾ (Election) ಕರ್ತವ್ಯಕ್ಕೆ ನಿಯೋಜಿಸಲಾದ ಅಧಿಕಾರಿಗಳು ನಿಗದಿಪಡಿಸಿದ ಚುನಾವಣಾ ಕೇಂದ್ರದಲ್ಲಿ ನಿರ್ದಿಷ್ಟ ಮಾದರಿಯಲ್ಲೇ ಅಂಚೆ ಮತ (Postal Voting) ಚಲಾವಣೆ ಮಾಡುವುದನ್ನು ಕೇಂದ್ರ ಸರ್ಕಾರ (Central Government) ಕಡ್ಡಾಯ ಮಾಡಿದೆ.
ಅಂಚೆ ಮತದಾನದ ದುರ್ಬಳಕೆ ತಡೆಯಲು ಕೇಂದ್ರ ಚುನಾವಣಾ ಆಯೋಗ ಪ್ರಸ್ತಾಪಿಸಿದ್ದ ಶಿಫಾರಸ್ಸನ್ನು ಕೇಂದ್ರ ಕಾನೂನು ಸಚಿವಾಲಯ ಅಂಗೀಕರಿಸಿ ಅಧಿಸೂಚನೆ ಹೊರಡಿಸಿದೆ. ಇದನ್ನೂ ಓದಿ: ತಮಿಳುನಾಡಿಗೆ ನೀರು – ಇಂದು ಸರ್ವಪಕ್ಷ ಸಭೆ ಕರೆದ ಸರ್ಕಾರ
Advertisement
Advertisement
ನಿಯೋಜಿಸಲಾದ ಅಧಿಕಾರಿಗಳಿಗೆ ಚುನಾವಣೆಯ ದಿನ ರಾತ್ರಿ 8ರ ವರೆಗೂ ಮತ ಚಲಾವಣೆಗೆ ಅವಕಾಶವಿದೆ. ಈ ವೇಳೆ ಅದನ್ನು ಮತಗಟ್ಟೆ ಹೊರಗೆ ಒಯ್ದು ನಂತರ ಚುನಾವಣಾಧಿಕಾರಿಗೆ ನೀಡುತ್ತಿದ್ದರು. ಆದರೆ ಹೆಚ್ಚಿನ ಸಮಯ ಮತ ಚೀಟಿ ಅವರ ಬಳಿ ಇದ್ದಷ್ಟೂ ಅವರು ರಾಜಕೀಯ ಪಕ್ಷಗಳ ಅಥವಾ ಅಭ್ಯರ್ಥಿಗಳ ಬೆದರಿಕೆ, ಲಂಚ ಅಥವಾ ಒತ್ತಡಕ್ಕೆ ಒಳಗಾಗಿ ಮತ ಚಲಾವಣೆ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಇದಕ್ಕಾಗಿ ಈ ಬದಲಾವಣೆ ತರಲಾಗಿದೆ. ಇದನ್ನೂ ಓದಿ: ದೊಡ್ಡಗೌಡರ ಕಾಲಿಗೆ ಮಂಡಿಯೂರಿ ನಮಸ್ಕರಿಸಿದ ಸಂಸದ ಪ್ರತಾಪ್‌ಸಿಂಹ
Advertisement
Web Stories