ಕಂಚಿನ ಕಂಠದ ಆರ್.ಜೆ ರಚನಾ ಹೃದಯಾಘಾತದಿಂದ ನಿಧನ

Public TV
1 Min Read
FotoJet 2 3

ರೇಡಿಯೋ ಮಿರ್ಚಿ ಮೂಲಕ ತಮ್ಮ ವೃತ್ತಿ ಬದುಕನ್ನು ಆರಂಭಿಸಿದ್ದ ಖ್ಯಾತ ಆರ್.ಜೆ ರಚನಾ (RJ Rachana) ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ತಮ್ಮ ಕಂಠ ಸಿರಿಯಿಂದಲೇ ಫೇಮಸ್ ಆಗಿದ್ದ ರಚನಾ ಏಳು ವರ್ಷಗಳ ಹಿಂದೆ ಆರ್.ಜೆ ವೃತ್ತಿಗೆ ವಿದಾಯ ಹೇಳಿದ್ದರು. ಇದನ್ನೂ ಓದಿ : ವೇದಿಕಾಗೆ ಸಿಕ್ತು ಬಂಪರ್ ಆಫರ್

 FotoJet 3 3

ರೇಡಿಯೋ ಮಿರ್ಚಿ, ರೇಡಿಯೋ ಸಿಟಿ ಸೇರಿದಂತೆ ಹಲವು ರೇಡಿಯೋ ವಾಹಿನಿಗಳಲ್ಲಿ ಕೆಲಸ ಮಾಡಿದ್ದ ಅವರು, ತಮ್ಮದೇ ವಿಶೇಷ ಶೈಲಿಯ ಮಾತಿನಿಂದ ಅಪಾರ ಕೇಳುಗರನ್ನು ಪಡೆದಿದ್ದರು. ಹಾಗಾಗಿ ರಚನಾ ಕಾರ್ಯಕ್ರಮಗಳನ್ನು ಕೇಳಲು ಕೇಳುಗರ ವರ್ಗವೇ ಸೃಷ್ಟಿಯಾಗಿತ್ತು. ಅದರಲ್ಲೂ ಸ್ಯಾಂಡಲ್ ವುಡ್ ನ ಅನೇಕ ಸ್ಟಾರ್ ನಟರು ರಚನಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ತುದಿಗಾಲಲ್ಲಿ ನಿಲ್ಲುತ್ತಿದ್ದರು. ಇದನ್ನೂ ಓದಿ : ಮೊಗ್ಗಿನ ಮನಸು ಚಿತ್ರಕ್ಕೂ ಲವ್ 360 ಸಿನಿಮಾಗೂ ಇರೋ ಸಂಬಂಧ ಏನು?

FotoJet 16

ಕಳೆದ ಕೆಲ ವರ್ಷಗಳಿಂದ ರಚನಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗುತ್ತಿದೆ. ಅಲ್ಲದೇ ಹೆಚ್ಚು ಜನರ ಜತೆ ಬೆರೆಯುತ್ತಿರಲಿಲ್ಲ ಎನ್ನುತ್ತಾರೆ ಅವರ ಸ್ನೇಹಿತರು. ಅತೀ ಚಿಕ್ಕ ವಯಸ್ಸಿನಲ್ಲೇ ಅವರು ಕಾರ್ಡಿಯಾ ಕರೆಸ್ಟ್‍ನಿಂದಾಗಿ ನಿಧನರಾಗಿದ್ದಾರೆ. ಇದನ್ನೂ ಓದಿ : ನಾಗಿಣಿ 2 ಧಾರಾವಾಹಿಗೆ ಬಂದ ತಿಥಿ ಖ್ಯಾತಿಯ ಸೆಂಚ್ಯುರಿ ಗೌಡ, ಗಡ್ಡಪ್ಪ

FotoJet 1 3

ಡಯೆಟ್, ಸದಾ ಹಸನ್ಮುಖಿಯಾಗಿಯೇ ಇರುತ್ತಿದ್ದ ಮತ್ತು ಆರೋಗ್ಯದ ಬಗ್ಗೆ ಸಾಕಷ್ಟು ಕಾಳಜಿ ತಗೆದುಕೊಳ್ಳುತ್ತಿದ್ದ ರಚನಾ ಸಾವು ಅವರ ಸ್ನೇಹಿತರ ಬಳಗಕ್ಕೆ ತೀವ್ರ ಆಘಾತ ಮೂಡಿಸಿದೆ.

Share This Article
Leave a Comment

Leave a Reply

Your email address will not be published. Required fields are marked *