ಶ್ರೀನಗರ: ಇತ್ತೀಚೆಗೆ ಪೂಂಚ್‌ನಲ್ಲಿ ಭಾರತೀಯ ವಾಯುಪಡೆಯ ವಾಹನದ ಮೇಲೆ ನಡೆದ ದಾಳಿಗೆ ಹೊಣೆಗಾರರಾಗಿರುವ ಇಬ್ಬರು ಪಾಕಿಸ್ತಾನಿ (Pakistan) ಭಯೋತ್ಪಾದಕರ ರೇಖಾಚಿತ್ರಗಳನ್ನು ಜಮ್ಮು ಮತ್ತು ಕಾಶ್ಮೀರದ ಭದ್ರತಾ ಪಡೆ ಬಹಿರಂಗಪಡಿಸಿದೆ.
ಶಂಕಿತ ಉಗ್ರರ ಬಂಧನಕ್ಕೆ ನೆರವಾಗುವ ಯಾವುದೇ ಮಾಹಿತಿ ನೀಡಿದವರಿಗೆ 20 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಭದ್ರತಾ ಪಡೆ (Indian Air Force) ಘೋಷಿಸಿದೆ. ಇದನ್ನೂ ಓದಿ: ಪಾಕಿಸ್ತಾನ ಕೈಗೆ ಬಳೆ ತೊಟ್ಟಿಲ್ಲ- ಫಾರೂಖ್ ಅಬ್ದುಲ್ಲ ವಿವಾದಾತ್ಮಕ ಹೇಳಿಕೆ
Advertisement
Advertisement
ಶನಿವಾರ ಸಂಜೆ ಪೂಂಚ್‌ನ ಶಾಸಿತಾರ್ ಬಳಿ ಐಎಎಫ್ (IAF) ಬೆಂಗಾವಲು ಪಡೆಯ ವಾಹನದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಐಎಎಫ್ ಕಾರ್ಪೋರಲ್ ವಿಕ್ಕಿ ಪಹಾಡೆ ಪ್ರಾಣ ಕಳೆದುಕೊಂಡಿದ್ದರು. ಅಲ್ಲದೇ ಘಟನೆಯಲ್ಲಿ ನಾಲ್ವರು ಸೈನಿಕರು ಗಾಯಗೊಂಡಿದ್ದರು. ದಾಳಿಯ ಬಳಿಕ ಶಾಸಿತಾರ್ ಪ್ರದೇಶದಲ್ಲಿ ಸಶಸ್ತ್ರ ಪಡೆಗಳು ಸಶಸ್ತ್ರ ಪಡೆಗಳು ಮಹತ್ವದ ಶೋಧ ಕಾರ್ಯಾಚರಣೆ ನಡೆಸಿದವು. ಇದನ್ನೂ ಓದಿ: ವಾಯುಸೇನೆಯ ವಾಹನದ ಮೇಲೆ ಉಗ್ರರ ದಾಳಿ – ಹಲವರನ್ನು ವಶಕ್ಕೆ ಪಡೆದ ಸೇನೆ
Advertisement
Advertisement
ದಾಳಿಯಲ್ಲಿ ದುರಂತವಾಗಿ ಪ್ರಾಣ ಕಳೆದುಕೊಂಡ ವಿಕ್ಕಿ ಪಹಾಡೆ, ತನ್ನ ಸಹೋದರಿಯ ಮದುವೆಗೆ 15 ದಿನಗಳ ರಜೆ ತೆಗೆದುಕೊಂಡಿದ್ದು, ಬಳಿಕ ಕೆಲಸಕ್ಕೆ ಬಂದಿದ್ದರು. ಮಧ್ಯಪ್ರದೇಶದ ಚಿಂದ್ವಾರದ ನೋನಿಯಾ ಕರ್ಬಲ್ ಪ್ರದೇಶದ ಪಹಾಡೆಯವರು ಜಮ್ಮು ಮತ್ತು ಕಾಶ್ಮೀರದಲ್ಲಿ ನೆಲೆಸಿದ್ದರು. 2011 ರಲ್ಲಿ ಭಾರತೀಯ ವಾಯುಪಡೆಗೆ ಸೇರಿದ ಅವರು ತಮ್ಮ ಪತ್ನಿ ರೀನಾ ಮತ್ತು ಮಗ ಹಾರ್ದಿಕ್ ಅವರನ್ನು ಅಗಲಿದ್ದಾರೆ.
ಸಹೋದರಿ ಗೀತಾ ಪಹಾಡೆ ಅವರು ತಮ್ಮ ಸಹೋದರನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ನನಗೆ ನನ್ನ ಸಹೋದರನ ಬಗ್ಗೆ ಹೆಮ್ಮೆ ಇದೆ. ನಿನ್ನೆ ಮೊನ್ನೆಯಷ್ಟೇ ಸಹೋದರನ ನಿಧನ ಬಗ್ಗೆ ನನಗೆ ತಿಳಿದಿತ್ತು. ನನ್ನ ಸಹೋದರನಿಗೆ ನ್ಯಾಯ ಬೇಕು ಎಂದು ಹೇಳಿದರು.