Bollywood
ಸಿನಿಮಾ ಅವಕಾಶಗಳಿಲ್ಲದಿದ್ರೂ ಈಗ ಈ ಕಾರಣಕ್ಕೆ ಫುಲ್ ಖುಷಿಯಲ್ಲಿದ್ದಾಳೆ ಪೂನಂ ಪಾಂಡೆ

ಮುಂಬೈ: ಸಿನಿಮಾದಲ್ಲಿ ಅವಕಾಶಗಳು ಇಲ್ಲದಿದ್ರೂ ಬಾಲಿವುಡ್ ಹಾಟ್ ಸ್ಟಾರ್ ಪೂನಂ ಪಾಂಡೆ ಈಗ ಸಖತ್ ಖುಷಿಯಲ್ಲಿದ್ದಾಳೆ. ಕಾರಣ ಪೂನಂ ತಮ್ಮ ಮನೆಯನ್ನು ಕ್ರಿಕೆಟ್ ದಂತಕಥೆ ಸಚಿನ್ ತೆಂಡಲ್ಕೂರ್ ಪಕ್ಕದ ಮನೆಗೆ ಶಿಫ್ಟ್ ಮಾಡಿದ್ದಾಳೆ.
ಮುಂಬೈನ ಬಾಂದ್ರಾ ನಗರದ ಸಚಿನ್ ಮನೆಯ ಪಕ್ಕವೇ ಪೂನಂ ಮನೆಯೊಂದನ್ನು ಮಾಡಿದ್ದು ಫುಲ್ ಹ್ಯಾಪಿ ಮೂಡ್‍ನಲ್ಲಿದ್ದಾಳೆ.
ಯಾರಿಗೆ ಇಷ್ಟವಿರಲ್ಲ ಹೇಳಿ ಸಚಿನ್ ಮನೆಯ ಪಕ್ಕದಲ್ಲಿ ಇರೋದಕ್ಕೆ? ಈ ವಿಷಯದಲ್ಲಿ ನಾನು ತುಂಬಾ ಅದೃಷ್ಟವಂತೆ ಎಂದು ಪೂನಂ ಪಾಂಡೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾಳೆ.
ಸದಾ ವಿವಾದಾತ್ಮಕ ಹೇಳಿಕೆಗಳಿಂದ ಮತ್ತು ತಮ್ಮ ಹಾಟ್ ಫೋಟೋ ಶೂಟ್‍ಗಳ ಮೂಲಕ ಸುದ್ದಿಯಾಗುವ ಪೂನಂ ಸದ್ಯ ಮನೆಯ ವಿಚಾರವಾಗಿ ಸುದ್ದಿಯಾಗಿದ್ದಾರೆ. ಪೂನಂ ನಶಾ, ಲವ್ ಇಸ್ ಪಾಯ್ಸನ್, ಯುವಾ, ಆ ಗಯಾ ಹೀರೋ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾಳೆ.
