BollywoodCinemaLatestMain PostSouth cinema

ಐರೆನ್ ಲೆಗ್ ಅಂದವರಿಗೆ ಪೂಜಾ ತಿರುಗೇಟು:ಟೀಕಿಸಿದವರಿಗೆ ಪೂಜಾ ಹೆಗ್ಡೆ ಕ್ಲಾಸ್

ಕ್ಷಿಣ ಭಾರತದ ಸ್ಟಾರ್ ನಟಿ ಪೂಜಾ ಹೆಗ್ಡೆ ಇದೀಗ ರೆಬೆಲ್ ಆಗಿದ್ದಾರೆ. ಇತ್ತೀಚೆಗಷ್ಟೇ ಪೂಜಾ ಹಗ್ಡೆ ನಟನೆಯ ಸಾಲು ಸಾಲು ಸಿನಿಮಾಗಳ ಸೋಲಿಗೆ ಟೀಕಿಸಿದವರಿಗೆ ಪೂಜಾ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಐರೆನ್ ಲೆಗ್ ಅಂತಾ ಕರೆದವರಿಗೆ ಬೊಟ್ಟಬೊಮ್ಮ ಸುಂದರಿ ಪೂಜಾ ತಿರುಗೇಟು ಕೊಟ್ಟಿದ್ದಾರೆ.

ಸೌತ್ ಸಿನಿಮಾ ರಂಗದ ಬ್ಯೂಟಿ ಜತೆ ಟ್ಯಾಲೆಂಟ್‌ಯಿರೋ ನಾಯಕಿ ಪೂಜಾ ಹೆಗ್ಡೆ ಇದೀಗ ಫುಲ್ ಗರಂ ಆಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಆರು ಸಿನಿಮಾಗಳು ಹಿಟ್ ಕೊಟ್ಟಿದ್ದ ನಟಿ ಪೂಜಾ ನಟಿಸಿರುವ ಇತ್ತೀಚಿನ ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಕಲೆಕ್ಷನ್ ಮಾಡೋದ್ರಲ್ಲಿ ವಿಫಲವಾಗಿತ್ತು. ರಾಧೆ ಶ್ಯಾಮ್, ಬೀಸ್ಟ್, ಆಚಾರ್ಯ ಸೋಲಿಗೆ ಈ ನಟಿನೇ ಕಾರಣ, ಐರೆನ್ ಲೆಗ್ ನಟಿ ಈಕೆ ಅಂತಾ ಅಂದವರಿಗೆ ಪೂಜಾ ಹೆಗ್ಡೆ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.

ಪೂಜಾ ನಟಿಸಿರುವ ಸಾಲು ಸಾಲು ಚಿತ್ರಗಳನ್ನು ಹಿಟ್ ಕೊಟ್ಟಾಗ ಈ ನಟಿಯನ್ನ ಪೂಜಿಸಿದ ಜನರೇ ಇಂದು ಟೀಕಿಸ್ತಿದ್ದಾರೆ. ಈಕೆಯನ್ನ ಮತ್ತೆ ಸಿನಿಮಾಗೆ ಹಾಕಿಕೊಂಡರೆ ಆ ಸಿನಿಮಾ ಫ್ಲಾಪ್ ಆಗೋದು ಗ್ಯಾರೆಂಟ್ ಐರೆನ್‌ಲೆಗ್ ನಾಯಕಿ ಅಂತಾ ಹೇಳಿದವರಿಗೆ ಪೂಜಾ ಖಡಕ್ ರಿಯಾಕ್ಷನ್ ಕೊಟ್ಟಿದ್ದಾರೆ. ಇದನ್ನೂ ಓದಿ: ಪ್ರಶಾಂತ್ ನೀಲ್ – ಜ್ಯೂ.ಎನ್‌ಟಿಆರ್ ಚಿತ್ರದಲ್ಲಿ ಸೂಪರ್ ಸ್ಟಾರ್ ಕಮಲ್ ಹಾಸನ್..!

ಸೋಲು ಮತ್ತು ಗೆಲವು ಜೀವನದ ಒಂದು ಭಾಗ. ಬ್ಯಾಕ್ ಟು ಬ್ಯಾಕ್ 6 ಸಿನಿಮಾಗಳನ್ನು ಹಿಟ್ ಕೊಟ್ಟಿದ್ದೇನೆ. ಈ ಬಗ್ಗೆ ನನಗೆ ಖುಷಿಯಿದೆ. ಸೋಲು ಮತ್ತು ಗೆಲುವಿನ ಸಿನಿಮಾಗಳನ್ನು ನಾನು ಸಮಾನವಾಗಿ ಸ್ವೀಕರಿಸುತ್ತೀನಿ. ನಟನೆಗೆ ಅವಕಾಶವಿರುವ ಕಾರಣ ರಾಧೆ ಶ್ಯಾಮ್, ಬೀಸ್ಟ್, ಆಚಾರ್ಯ ಚಿತ್ರವನ್ನು ಒಪ್ಪಿಕೊಂಡೆ. ನಮ್ಮ ನಟನೆಯನ್ನ ನೋಡಿ ಮುಂದಿನ ಚಿತ್ರವನ್ನ ಆಫರ್ ಮಾಡುತ್ತಾರೆ. ಎಂಡ್ ಆಫ್ ದಿ ಡೇ ನಾವು ಎಂಟರ್‌ಟೈನರ್ಸ್..ಜನರ ಮುಖದಲ್ಲಿ ನಗು ಅರಳಿಸೋದಷ್ಟೇ ನಮ್ಮ ಕರ್ತವ್ಯ ಎಂದು ಟೀಕಿಸಿದವರಿಗೆ ಪೂಜಾ ಸ್ಟ್ರಾಂಗ್ ಆಗಿ ಉತ್ತರಿಸಿದ್ದಾರೆ.

Leave a Reply

Your email address will not be published.

Back to top button