ದಕ್ಷಿಣ ಭಾರತದ ಚೆಂದದ ನಟಿ ಪೂಜಾ ಹೆಗ್ಡೆಗೆ ಲಕ್ ಕೈ ಕೊಟ್ಟಂತಿದೆ. ಇತ್ತೀಚೆಗೆ ನಟಿಸಿರೋ ಸಾಲು ಸಾಲು ಸಿನಿಮಾಗಳು ಬಾಕ್ಸಾಫೀಸ್ನಲ್ಲಿ ಸೋತಿದೆ. ಅದರೂ ಪೂಜಾಗೆ ಅವಕಾಶಗಳೇನು ಕಮ್ಮಿಯಾಗಿಲ್ಲ. ಇತ್ತೀಚೆಗೆ ಕಾನ್ ಫೆಸ್ಟಿವಲ್ನಲ್ಲಿ ಮಿಂಚಿದ ಬಳಿಕ ಈಗ ಹೊಸದೊಂದು ಫೋಟೋಶೂಟ್ ಮಾಡಿಸಿದ್ದಾರೆ. ಕಲರ್ಫುಲ್ ಅವತಾರದಲ್ಲಿ ಮಿಂಚಿದ್ದಾರೆ.
View this post on Instagram
ಸದ್ಯ ವಿಜಯ್ ದೇಚರಕೊಂಡ ನಟನೆಯ ಚಿತ್ರದಲ್ಲಿ ನಾಯಕಿಯಾಗಿ ಪೂಜಾ ನಟಿಸುತ್ತಿದ್ದಾರೆ. ಸಾಲು ಸಾಲು ಸಿನಿಮಾ ಶೂಟಿಂಗ್ ಮಧ್ಯೆ ಇದೀಗ ಕ್ಯಾಮೆರಾ ಕಣ್ಣಿಗೆ ಹಾಟ್ ಲುಕ್ನಲ್ಲಿ ಪೋಸ್ ನೀಡಿದ್ದಾರೆ. ಕಲರ್ಫುಲ್ ಡ್ರೆಸ್ನಲ್ಲಿ ಬೊಟ್ಟಬೊಮ್ಮ ಸುಂದರಿ ಮಿಂಚಿದ್ದಾರೆ. ವೈಟ್ ಕಲರ್ ಡ್ರೆಸ್ ಮತ್ತು ಬಣ್ಣ ಬಣ್ಣದ ಡ್ರೆಸ್ ಎರಡು ಲುಕ್ನಲ್ಲಿಯೂ ಬೋಲ್ಡ್ ಆಗಿ ಮಿಂಚಿದ್ದಾರೆ. ಇದನ್ನೂ ಓದಿ:ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ ಹಾಕಿದವರ ಲಿಸ್ಟ್ ನಲ್ಲಿ ಕರಣ್ ಜೋಹರ್
View this post on Instagram
ಪೂಜಾ ಹೆಗ್ಡೆ ಐರೆನ್ ಲೆಗ್ ಎಂಬ ಮಾತುಗಳ ಮಧ್ಯೆ, ಸಾಲು ಸಾಲು ಸಿನಿಮಾಗಳಿಗೆ ನಾಯಕಿಯಾಗುವ ಮೂಲಕ ಸೌಂಡ್ ಮಾಡ್ತಿದ್ದಾರೆ. ಈ ಮಧ್ಯೆ ಯಶ್ಗೆ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಎಲ್ಲದಕ್ಕೂ ಅಧಿಕೃತ ಘೋಷಣೆಗಾಗಿ ಕಾಯಬೇಕಿದೆ.