ರಾಮನಗರ: ರಾಜಕಾರಣ (Politics) ಅಷ್ಟೊಂದು ಚೆನ್ನಾಗಿಲ್ಲ, ರಾಜಕೀಯ ಸಾಕಾಗಿದೆ. ಹಾಗಾಗಿ ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು ಎಂಬುದು ನನ್ನ ಉದ್ದೇಶ ಎಂದು ಸಂಸದ ಡಿಕೆ ಸುರೇಶ್ (D.K.Suresh) ವೈರಾಗ್ಯದ ಮಾತುಗಳನ್ನಾಡಿದ್ದಾರೆ.
2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ವಿಚಾರವಾಗಿ ರಾಮನಗರದಲ್ಲಿ (Ramanagara) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ನಿಲ್ಲುವ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಕಾರ್ಯಕರ್ತರು ಮತ್ತು ಮುಖಂಡರ ಸಲಹೆ ಪಡೆಯಬೇಕು. ಯಾರು ಸೂಕ್ತ ಎಂದು ಅವರು ತೀರ್ಮಾನ ಮಾಡುತ್ತಾರೋ ಅವರಿಗೆ ಬೆಂಬಲ ಕೊಡುತ್ತೇನೆ ಎಂದರು. ಇದನ್ನೂ ಓದಿ: ಸಚಿವ ಸತೀಶ್ ಜಾರಕಿಹೊಳಿ ತವರು ಜಿಲ್ಲೆಯ 20 ಗ್ರಾಮಗಳಲ್ಲಿ ಸುಸಜ್ಜಿತ ರಸ್ತೆಗಳೇ ಇಲ್ಲ!
ಸಂಸದರ ಬಗ್ಗೆ ಹೆಚ್‌ಡಿಕೆ (H.D.Kumaraswamy) ವ್ಯಂಗ್ಯ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಅವರಿಗೆ ವ್ಯಂಗ್ಯ ಬಿಟ್ಟು ಬೇರೆ ಏನೂ ಬರುವುದಿಲ್ಲ, ವ್ಯಂಗ್ಯ ಮಾಡಲಿ. ಅಧಿಕಾರದ ದಾಹ ಇದ್ದವರಿಗೆ ರಾಜಕಾರಣ ಬೇಕು. ನನಗಿರುವುದು ಅಭಿವೃದ್ಧಿಯ ದಾಹ. ಇನ್ನೂ ಒಂದು ವರ್ಷ ಸಮಯವಿದೆ. ನಾನು ಅಭಿವೃದ್ಧಿಯ ಕಡೆ ಗಮನ ಕೊಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಫ್ರೀ ಬಸ್ ಘೋಷಣೆ ಬಳಿಕ ಮೊದಲ ವೀಕೆಂಡ್ – ಸರ್ಕಾರಿ ಬಸ್‌ಗಳು ಫುಲ್ ರಶ್
ಡಿಕೆ ಸುರೇಶ್ ಸೋಲಿಸಲು ಬಿಜೆಪಿ (BJP)-ಜೆಡಿಎಸ್ (JDS) ಹೊಂದಾಣಿಕೆ ಕುರಿತು ಮಾತನಾಡಿದ ಅವರು, ಅವರು ಹೊಂದಾಣಿಕೆ ಮಾಡಿಕೊಳ್ಳಲಿ. ಯಾರು ಬೇಕಾದರೂ ನಿಲ್ಲಲಿ. ನನಗಿರುವುದೂ ಒಂದೇ ಮತ, ಪ್ರಧಾನಿಗಿರೋದು ಒಂದೇ ಮತ. ಆ ಮತವನ್ನು ಯಾರಿಗೆ ಹಾಕಬೇಕು ಎಂದು ಜನರು ತೀರ್ಮಾನ ಮಾಡುತ್ತಾರೆ ಎಂದರು. ಇದನ್ನೂ ಓದಿ: `ಗ್ಯಾರಂಟಿ’ಗೆ ಅರ್ಜಿ ಸಲ್ಲಿಸುವ ಮುನ್ನ ಹುಷಾರ್ – ಸೈಬರ್ ಕಳ್ಳರಿದ್ದಾರೆ ಎಚ್ಚರ!
ಅಕ್ಕಿ ನೀಡದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ (Protest) ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರದಲ್ಲಿ ಸಾಕಷ್ಟು ಅಕ್ಕಿ ದಾಸ್ತಾನು ಇದೆ. ಅಕ್ಕಿ ಇರುವುದು ಸಾರ್ವಜನಿಕರ ವಿತರಣೆಗೆ. ಆದರೆ ಕೇಂದ್ರ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ಎಷ್ಟೋ ಸಾರಿ ಅಕ್ಕಿ ಕೆಟ್ಟುಹೋಗಿ ನಷ್ಟ ಆಗಿದೆ. ರಾಜ್ಯ ಸರ್ಕಾರ ಉಚಿತವಾಗಿ ಅಕ್ಕಿ ಕೇಳುತ್ತಿಲ್ಲ. ಕೇಂದ್ರ ಸರ್ಕಾರದ ಮಾರ್ಗಸೂಚಿಯಲ್ಲಿಯೇ ಕೊಡಿ ಎಂದು ಕೇಳುತ್ತಿದ್ದೇವೆ. ಬಡವರು, ಹಸಿದವರ ದೃಷ್ಟಿಯಿಂದ ಅಕ್ಕಿ ಕೊಡಿ ಎಂದು ಕೇಳುತ್ತಿದ್ದೇವೆ ಎಂದು ಕಿಡಿಕಾರಿದರು. ಇದನ್ನೂ ಓದಿ: ರಾಜ್ಯದ ಪರ ಧ್ವನಿ ಎತ್ತದೇ ಸುಮ್ಮನಿರುವ ಬಿಜೆಪಿ ಸಂಸದರು ದಂಡಪಿಂಡಗಳು: ಬಿ.ವಿ ಶ್ರೀನಿವಾಸ್
ಆಹಾರ ಭದ್ರತಾ ಕಾಯ್ದೆ ತಂದಿದ್ದೇ ಯುಪಿಎ ಸರ್ಕಾರ. ಆ ಕಾಯ್ದೆ ತರದಿದ್ದರೆ ದೇಶದ ಜನರಿಗೆ ಇವರು 5 ಕೆಜಿ ಅಕ್ಕಿ ಕೊಡಲು ಆಗುತ್ತಿತ್ತಾ? ಹಿಂದೆ ಸಿದ್ದರಾಮಯ್ಯನವರು (Siddaramaiah) ಉಚಿತ ಅಕ್ಕಿ ಕೊಟ್ಟಿದ್ದರು. ಆಗಲೂ ಬಡವರ ಹಸಿವನ್ನು ನೀಗಿಸಿದ್ದೆವು. ಈಗಲೂ ಉಚಿತ 10 ಕೆಜಿ ಅಕ್ಕಿ ಘೋಷಣೆ ಮಾಡಿದ್ದೇವೆ. ಇದರಿಂದ ಎಲ್ಲರಿಗೂ ಅನುಕೂಲ ಆಗುತ್ತದೆ. ಬಿಜೆಪಿಗೆ ಮತ ಹಾಕಿದವರಿಗೂ ಅಕ್ಕಿ, ಜೆಡಿಎಸ್‌ಗೆ ಮತ ಹಾಕಿದವರಿಗೂ ಅಕ್ಕಿ ಸಿಗುತ್ತದೆ. ಆದರೆ ಹಸಿದ ವರ್ಗಕ್ಕೆ ಕೇಂದ್ರ ಅನ್ಯಾಯ ಮಾಡುತ್ತಿದೆ. ಇದರಲ್ಲಿ ರಾಜಕೀಯ ಮಾಡೋದು ಬೇಡ. ಬಡವರಿಗೆ ಅಕ್ಕಿ ಕೊಡಿ ಎಂದು ಹರಿಹಾಯ್ದರು. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನ ಮಿನಿ ಪಾಕಿಸ್ತಾನ ಮಾಡಲು ಹೊರಟಿದೆ: ಆರ್.ಅಶೋಕ್ ವಾಗ್ದಾಳಿ
ಕಾಂಗ್ರೆಸ್ ಪ್ರತಿಭಟನೆಗೆ ಶಾಮಿಯಾನ ಹಾಕಿ ಕೊಡುತ್ತೇವೆ ಎಂಬ ಆರ್. ಅಶೋಕ್ (R.Ashok) ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಆರ್. ಅಶೋಕ್ ಅವರಷ್ಟು ತಿಳುವಳಿಕೆ ನನಗಿಲ್ಲ. ಅವರು ಶಾಮಿಯಾನ ಹಾಕಿಸಿಕೊಟ್ಟರೆ ಸಂತೋಷ. ಅಲ್ಲೇ ಕೂತು ನಾವು ಪ್ರತಿಭಟನೆ ಮಾಡುತ್ತೇವೆ. ಎಲ್ಲಾ ಕಡೆಗಳಲ್ಲೂ ಶಾಮಿಯಾನ ಹಾಕಿಸಿಕೊಡಲಿ ಎಂದು ಟಾಂಗ್ ನೀಡಿದರು. ಇದನ್ನೂ ಓದಿ: ಹಜ್ ಯಾತ್ರಿಕರ ಆರೈಕೆ ಮಾಡಿದ ಸ್ವಯಂ ಸೇವಕರಿಗೆ ಉಮ್ರಾ ಪ್ರವಾಸ: ಜಮೀರ್ ಅಹ್ಮದ್