ಮಂಡ್ಯ: ಉದ್ಘಾಟನೆ ಮಾಡುವ ಸಲುವಾಗಿ ಈಗಾಗಲೇ ಚಾಲ್ತಿಯಲ್ಲಿದ್ದ ಶುದ್ಧ ನೀರಿನ ಘಟಕದ ಬಾಗಿಲು ಹಾಕಿಸಿ ಮತ್ತೆ ಹೊಸದಾಗಿ ಉದ್ಘಾನೆಗೆ ಬಂದ ಮಳವಳ್ಳಿ ಕ್ಷೇತ್ರದ ಶಾಸಕ ಅನ್ನದಾನಿ ವಿರುದ್ಧ ಮಹಿಳೆಯರು ಆಕ್ರೋಶ ಹೊರಹಾಕಿದ ಘಟನೆ ಕುಂತೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ ನಿರ್ಮಾಣ ಮಾಡಲಾಗಿದ್ದ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿತ್ತು. ಶಾಸಕ ಅನ್ನದಾನಿ ಅವರು ಮಂಗಳವಾರದಂದು ನೀರಿನ ಉದ್ಘಾಟನೆ ಕಾರ್ಯಕ್ರಮ ನಿಮಿತ್ತ ಕುಂತೂರು ಗ್ರಾಮಕ್ಕೆ ಆಗಮಿಸಿದ್ದರು. ಈ ವೇಳೆ ಗ್ರಾಮದ ಮಹಿಳೆಯರು ಶುದ್ಧ ಕುಡಿಯುವ ನೀರು ಘಟಕದಲ್ಲೂ ರಾಜಕೀಯ ಮಾಡುತ್ತಿರಾ. ಉದ್ಘಾಟನೆ ಮಾಡಬೇಡಿ ಎಂದು ಶಾಸಕರನ್ನು ತರಾಟೆ ತೆಗೆದುಕೊಂಡರು. ಇದನ್ನು ಓದಿ: ಮಂಡ್ಯದಲ್ಲಿ ನೀರಿನ ವಿಚಾರದಲ್ಲೂ ಕೈ-ದಳ ಸಮರ- ದೋಸ್ತಿಗಳ ಕಚ್ಚಾಟಕ್ಕೆ ಜನರ ಹಿಡಿಶಾಪ
Advertisement
Advertisement
ಈ ವೇಳೆ ಮಹಿಳೆಯನ್ನು ಸಮಾಧಾನ ಪಡಿಸಲು ಮುಂದಾದ ಶಾಸಕರ ಮೊದಲು ಪೂಜೆ ಮಾಡಿ ಮುಗಿಸುತ್ತೇನೆ, ನಂತರ ಮಾತನಾಡೋಣ ಎಂದರು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಪೊಲೀಸರು ಮಹಿಳೆಯನ್ನು ಸ್ಥಳದಿಂದ ಕರೆದುಕೊಂಡು ಹೋದರು. ಇತ್ತ ಶಾಸಕರು ಉದ್ಘಾಟನೆ ಮಾಡಿದ್ದರಿಂದ ಶುದ್ಧ ಕುಡಿಯುವ ನೀರಿನ ಘಟಕದ ಮತ್ತೆ ಬಾಗಿಲು ತೆರೆಯಲಾಗಿದೆ ಎಂದು ಎಲ್ಲರನ್ನು ಸಮಾಧಾನ ಮಾಡಿ ಅಲ್ಲಿಂದ ತೆರಳಿದರು.
Advertisement
ಈ ಹಿಂದೆ ಕುಂತೂರು ಗ್ರಾಮದ ಶುದ್ಧ ಕುಡಿಯುವ ನೀರು ವಿಚಾರವಾಗಿ ಎಇಇ ಸೋಮಶೇಖರ್ ರವರು ಉದ್ಘಾಟನೆಯಾಗಿಲ್ಲ ಎಂದು ಕಾರಣ ನೀಡಿ ಬೀಗ ಜಡಿದ ಬಗ್ಗೆ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv