ರಸ್ತೆ ಬದಿ ಟೀ ಸವಿದು ಅಶೋಕ್‍ರಿಂದ ಪಾಲಿಟಿಕ್ಸ್ ಚರ್ಚೆ

Advertisements

ಮಂಡ್ಯ: ನಗರದ ಮಹಾವೀರ ವೃತ್ತದಲ್ಲಿ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಅವರ ಬೆಂಬಲಿಗ ಇಂಡುವಾಳು ಸಚ್ಚಿದಾನಂದ, ಬಿಜೆಪಿ (BJP) ಮುಖಂಡರು ಹಾಗೂ ಸಾರ್ವಜನಿಕರೊಂದಿಗೆ ಸಚಿವ ಆರ್.ಅಶೋಕ್ (R. Ashok) ಟೀ ಸವಿದಿದ್ದಾರೆ. ಈ ವೇಳೆ ಮುಂಬರುವ ಚುನಾವಣೆಯ ಕುರಿತು ಚರ್ಚೆ ಮಾಡಿದ್ದಾರೆ.

Advertisements

ಮುಂದಿನ ಚುನಾವಣೆಯಲ್ಲಿ ಮಂಡ್ಯದ 7 ಕ್ಷೇತ್ರಗಳಲ್ಲಿ ಗೆಲ್ಲಲು ಏನೆಲ್ಲಾ ಮಾಸ್ಟರ್ ಪ್ಲಾನ್ ಮಾಡಬೇಕೆಂದು ಚರ್ಚಿಸಲಾಯಿತು. ಸರಿಯಾದ ಪ್ಲಾನ್ ಮಾಡಿದ್ದರೆ ಕಮಲ ಅರಳುತ್ತೆಂಬ ವಿಶ್ವಾಸವಿದೆ. ಅಲ್ಲದೇ ಮುಂಬರುವ ವಿಧಾನಸಭೆ ಹಾಗೂ ಲೋಕಸಭೆಯಲ್ಲೂ ನಮ್ಮದೇ ಜಯಭೇರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮುಂದೆ ಎಲ್ಲಾ ಕಲಾವಿದರಿಗೂ ಪುನೀತ್ ಸ್ಫೂರ್ತಿಯಾಗಿರಲಿ: ಡಾ. ಡಿ ವೀರೇಂದ್ರ ಹೆಗ್ಗಡೆ

Advertisements

ಈ ವೇಳೆ ಸುಮಲತಾ ಬೆಂಬಲಿಗ ಇಂಡುವಾಳು ಸಚ್ಚಿದಾನಂದ ಶೀಘ್ರದಲ್ಲೇ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಶ್ರೀರಂಗಪಟ್ಟಣದಲ್ಲಿ (SrirangaPattana) ಕಾರ್ಯಕ್ರಮ ಆಯೋಜಿಸಿ ಪಕ್ಷ ಸೇರಲಿದ್ದಾರೆ. ಆ ಸಮಾರಂಭದಲ್ಲಿ ನಾನು ಸೇರಿದಂತೆ ಹಲವು ನಾಯಕರು ಪಾಲ್ಗೊಳ್ಳಲಿದ್ದಾರೆ. ಮಾತ್ರವಲ್ಲದೇ ಮಂಡ್ಯದಲ್ಲಿ ಇನ್ನಷ್ಟು ಜನ ಬಿಜೆಪಿಗೆ (BJP) ಸೇರ್ಪಡೆಯಾಗಲಿದ್ದಾರೆ. ಈಗಾಗಲೇ ಕೆ.ಸಿ.ನಾರಾಯಣಗೌಡ (K.C.Narayan Gowda) ಅವರು ಖಾತೆ ತೆರೆದಿದ್ದಾರೆ. ಮುಂದಿನ ದಿನದಲ್ಲಿ ಇನ್ನಷ್ಟು ಕ್ಷೇತ್ರದಲ್ಲಿ ಕಮಲ ಅರಳಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕನ್ನಡ ರಾಜ್ಯೋತ್ಸವದಲ್ಲಿ ಜನಸಾಮಾನ್ಯರೊಂದಿಗೆ ಕುಣಿದು ಕುಪ್ಪಳಿಸಿದ ಮಹಿಳಾ ಪಿಎಸ್‍ಐ

Live Tv

Advertisements
Exit mobile version