ಬೆಂಗಳೂರು: ಮೈಸೂರಿನ ದಸರಾ ಉದ್ಘಾಟನೆಗೆ ಸಾಂಸ್ಕøತಿಕ ಕ್ಷೇತ್ರದ ಸಾಧಕರ ಬದಲು ರಾಜಕಾರಣಿ ಎಸ್.ಎಂ.ಕೃಷ್ಣರವರನ್ನು ಆಯ್ಕೆ ಮಾಡಿರುವುದಕ್ಕೆ ಆಮ್ ಆದ್ಮಿ ಪಾರ್ಟಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂರವರು ವಿರೋಧ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿಯೇ ಸುಪ್ರಸಿದ್ಧ, ಪಾರಂಪರಿಕ,ಮಹೋನ್ನತ ಇತಿಹಾಸವುಳ್ಳ ದಸರಾ ಉತ್ಸವ ಉದ್ಘಾಟನೆಯನ್ನು ರಾಜಕೀಕರಣಗೊಳಿಸುತ್ತಿರುವ ನಿಮಗೆ ನಾಚಿಕೆಯಾಗುತ್ತಿಲ್ಲವೇ ? ಕರ್ನಾಟಕ ಸಾಹಿತ್ಯಲೋಕದ ದಿಗ್ಗಜರುಗಳಿಗೆ ಮಾಡುತ್ತಿರುವ ಮಹಾನ್ ಅಪಮಾನ @prajavani @firstnews_tv @KannadaPrabha @SMKrishnaCong pic.twitter.com/temIrTplIq
— Jagdish V Sadam (@jagdishsadam) September 29, 2021
Advertisement
ಈ ಕುರಿತು ಟ್ವೀಟ್ ಮಾಡಿರುವ ಜಗದೀಶ್ ವಿ. ಸದಂ, “ದೇಶದಲ್ಲಿಯೇ ಸುಪ್ರಸಿದ್ಧ, ಪಾರಂಪರಿಕ, ಮಹೋನ್ನತ ಇತಿಹಾಸವುಳ್ಳ ದಸರಾ ಉತ್ಸವ ಉದ್ಘಾಟನೆಯನ್ನು ರಾಜಕೀಯಗೊಳಿಸುತ್ತಿರುವ ನಿಮಗೆ ನಾಚಿಕೆಯಾಗುತ್ತಿಲ್ಲವೇ? ಇದು ಕರ್ನಾಟಕ ಸಾಹಿತ್ಯಲೋಕದ ದಿಗ್ಗಜರುಗಳಿಗೆ ಮಾಡುತ್ತಿರುವ ಮಹಾನ್ ಅಪಮಾನ” ಎಂದು ಬಿಜೆಪಿ ಸರ್ಕಾರದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಮ್ಮ ಸರ್ಕಾರದಲ್ಲಿ ಬಿಜೆಪಿಗೆ ನಾಯಕರಿಗೆ ಕಳಚಲಾಗದ ‘ಪ್ಯಾಂಟ್ ಭಾಗ್ಯ’ ನೀಡ್ತೇವೆ – ಕಾಂಗ್ರೆಸ್
Advertisement
Advertisement
“ಮೈಸೂರು ದಸರಾ ಆಯ್ಕೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಆಯ್ಕೆ ಮಾಡುವ ಪರಂಪರೆಯು ಹಲವು ದಶಕಗಳಿಂದ ನಡೆದುಕೊಂಡು ಬಂದಿದೆ. ಅನೇಕ ಸಾಹಿತಿಗಳು, ಸಮಾಜ ಸೇವಕರು, ಸಾಧಕರು ದಸರಾ ಉದ್ಘಾಟಿಸಿದ್ದಾರೆ. ಆದರೆ ಈ ಬಾರಿ ರಾಜಕಾರಣಿಯನ್ನು ಆಯ್ಕೆ ಮಾಡುವ ಮೂಲಕ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಲಾಗಿದೆ. ಇದನ್ನೇ ಮಾದರಿಯಾಗಿಟ್ಟುಕೊಂಡು ಮುಂದಿನ ಸರ್ಕಾರಗಳು ಕೂಡ ಸಾಧಕರ ಬದಲು ತಮ್ಮ ಪಕ್ಷದ ರಾಜಕಾರಣಿಗಳಿಗೆ ಮಣೆ ಹಾಕುವ ಅಪಾಯವಿದೆ” ಎಂದು ಜಗದೀಶ್ ವಿ. ಸದಂ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಶಕ್ತಿಯುತ ದೇಹ ಹಾಗೂ ಮನಸ್ಸು ಆರೋಗ್ಯಕರ ಜೀವನಕ್ಕೆ ಸಹಕಾರಿ: ಬೊಮ್ಮಾಯಿ
Advertisement
“ರಾಜಕೀಯ ಹೊರತು ಪಡಿಸಿದರೆ ಎಸ್.ಎಂ.ಕೃಷ್ಣರವರ ಸಾಧನೆ ಶೂನ್ಯ. ಸಕ್ರಿಯ ರಾಜಕೀಯದಲ್ಲಿರುವ ಅವರು ಬಿಜೆಪಿ ಹಾಗೂ ಪ್ರಧಾನಿ ಮೋದಿಯವರನ್ನು ಹೊಗಳುತ್ತಾ, ಬೇರೆ ಪಕ್ಷಗಳನ್ನು ಟೀಕಿಸುತ್ತಾ ಕಾಲ ಕಳೆಯುತ್ತಿದ್ದಾರೆ. ಈ ಮೂಲಕ ರಾಜಕೀಯ ಕೆಸರೆರಚಾಟಕ್ಕೆ ಗುರಿಯಾಗುತ್ತಿದ್ದಾರೆ. ದಸರಾ ಉದ್ಘಾಟನೆಗೆ ಅವರನ್ನು ಆಯ್ಕೆ ಮಾಡಿರುವುದು ನಾಡಹಬ್ಬದ ಪಾವಿತ್ರ್ಯತೆಗೆ ಕಳಂಕವಾಗಿದೆ. ಸಿಎಂ ಬಸವರಾಜ ಬೊಮ್ಮಾಯಿಯವರು ತಕ್ಷಣವೇ ಉದ್ಘಾಟಕರನ್ನು ಬದಲಿಸಲು ಮುಂದಾಗಬೇಕು. ರಾಜಕೀಯದಿಂದ ದೂರವಿರುವ ಹಾಗೂ ನಾಡಿಗೆ ನಿಸ್ವಾರ್ಥ ಸೇವೆ ಸಲ್ಲಿಸಿರುವವರನ್ನು ಆಯ್ಕೆ ಮಾಡಬೇಕು” ಎಂದು ಜಗದೀಶ್ ವಿ. ಸದಂ ಆಗ್ರಹಿಸಿದರು.