ಬೆಂಗಳೂರು: ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿ ನಾಯಕರಿಗೆ ‘ಕಳಚಲಾಗದ ಪ್ಯಾಂಟ್’ ಭಾಗ್ಯ ನೀಡುತ್ತೇವೆ ಎಂದು ಕಾಂಗ್ರೆಸ್ ಟ್ವೀಟ್ ಮಾಡುವ ಮೂಲಕ ಬಿಜೆಪಿ ನಾಯಕರನ್ನು ವ್ಯಂಗ್ಯ ಮಾಡಿದೆ.
'@siddaramaiahಅವರ ಪಂಚೆ ಆಕಸ್ಮಿಕವಾಗಿ ಕಳಚಿಬೀಳುವುದು ಸಹಜ,
ಆದರೆ ಬಿಜೆಪಿ ನಾಯಕರು ತಮ್ಮ ಪ್ಯಾಂಟ್‌ನ್ನ ತಾವೇ ಕಳಚುವುದು ಅಸಹ್ಯ.
ಕಳಚಿದ ನಂತರ ವಿಡಿಯೋ ಮಾಡಿಕೊಳ್ಳುವುದು, ಸಿಡಿ ಬಿಡುಗಡೆಗೆ ತಡೆಯಾಜ್ಞೆ ತರುವುದು ಪರಮ ಅಸಹ್ಯ
ಮುಂದೆ ನಮ್ಮ ಸರ್ಕಾರದಲ್ಲಿ @BJP4Karnataka ನಾಯಕರಿಗೆ ಕಳಚಲಾಗದ 'ಪ್ಯಾಂಟ್ ಭಾಗ್ಯ' ನೀಡುವೆವು ಚಿಂತಿಸಬೇಡಿ!
— Karnataka Congress (@INCKarnataka) September 29, 2021
Advertisement
ಸದನದಲ್ಲಿ ಸಿದ್ದರಾಮಯ್ಯನವರ ಪಂಚೆ ಆಕಸ್ಮಿಕವಾಗಿ ಕಳಚಿದೆ. ಆದರೆ ಬಿಜೆಪಿ ನಾಯಕರು ತಮ್ಮ ಪಂಚೆಯನ್ನು ಕಳಚುವುದು ಅಸಹ್ಯ, ಕಳಚಿದ ಪಂಚೆಯನ್ನು ತಾವೇ ವಿಡೀಯೊ ಮಾಡಿಕೊಳ್ಳವುದು ಹಾಗೂ ಸಿಡಿ ಬಿಡುಗಡೆಗೆ ಕೋರ್ಟ್‍ನಲ್ಲಿ ತಡೆಯಾಜ್ಞೆ ತರುವುದು ಇನ್ನೂ ಅಸಹ್ಯವಾಗಿದೆ ಎಂದು ಟ್ವೀಟ್ ಮಾಡುವ ಮೂಲಕ ಬಿಜೆಪಿ ನಾಯಕರಿಗೆ ಟಾಂಗ್ ನೀಡಿದೆ. ಇದನ್ನೂ ಓದಿ: ಹೆಲಿಕಾಪ್ಟರ್ ಲ್ಯಾಂಡಿಂಗ್‍ಗೆ ಅನುಮತಿ ಇಲ್ಲ- ಸಿದ್ದರಾಮಯ್ಯ ದಾವಣಗೆರೆ ಪ್ರವಾಸ ರದ್ದು
Advertisement
ಪಂಚೆ ಈ ನೆಲದ ಸಂಸ್ಕೃತಿಯ ಪ್ರತೀಕ, ಶ್ರಮಜೀವಿಗಳ ಸಂಗಾತಿ, ಪಂಚೆ ಕಳಚುವುದು ಎತ್ತಿ ಕಟ್ಟುವುದೂ ಸಹಜ, ಅದೇ ಕರುನಾಡ ಮಣ್ಣಿನ ಮಕ್ಕಳ ಗತ್ತು.
ಕಂಡ ಕಂಡಲ್ಲಿ ತಮ್ಮ ಪ್ಯಾಂಟ್ ಕಳಚಿ ಸಿಡಿ ಮಾಡಿಕೊಳ್ಳುವ @BJP4Karnataka ನಾಯಕರಿಗೆ @siddaramaiah ಅವರ ಪಂಚೆಯ ಬಗ್ಗೆ ಮಾತಾಡುವ ನೈತಿಕತೆ ಇಲ್ಲ.
ಮೊದಲು ತಮ್ಮ ಚಡ್ಡಿಯ ಲಾಡಿ ಭದ್ರಪಡಿಸಿಕೊಳ್ಳಲಿ.
— Karnataka Congress (@INCKarnataka) September 29, 2021
Advertisement
ಪಂಚೆ ಈ ನೆಲದ ಸಂಸ್ಕøತಿಯ ಪ್ರತೀಕ, ಶ್ರಮಜೀವಿಗಳ ಸಂಗಾತಿ, ಪಂಚೆ ಕಳಚುವುದು ಎತ್ತಿ ಕಟ್ಟುವುದೂ ಸಹಜ, ಅದೇ ಕರುನಾಡ ಮಣ್ಣಿನ ಮಕ್ಕಳ ಗತ್ತು. ಕಂಡ ಕಂಡಲ್ಲಿ ತಮ್ಮ ಪ್ಯಾಂಟ್ ಕಳಚಿ ಸಿಡಿ ಮಾಡಿಕೊಳ್ಳುವ ಬಿಜೆಪಿ ನಾಯಕರಿಗೆ, ಅವರ ಪಂಚೆಯ ಬಗ್ಗೆ ಮಾತಾಡುವ ನೈತಿಕತೆ ಇಲ್ಲ. ಮೊದಲು ತಮ್ಮ ಚಡ್ಡಿಯ ಲಾಡಿ ಭದ್ರಪಡಿಸಿಕೊಳ್ಳಲಿ ಎಂದು ಕಾಂಗ್ರೆಸ್ ಹೇಳಿದೆ. ಇದನ್ನೂ ಓದಿ: ಪಂಜಾಬ್ ಕಾಂಗ್ರೆಸ್‍ಗೆ ನಡುಕ- ಸಿಧು ಬೆನ್ನಲ್ಲೇ ನಾಲ್ವರು ರಾಜೀನಾಮೆ
Advertisement
ಸಿಎಂ ಬೊಮ್ಮಾಯಿ ಅವರು ಅನೈತಿಕ ಪೆÇಲೀಸ್‍ಗಿರಿಯನ್ನು ಸಹಿಸುವುದಿಲ್ಲ ಎಂದಿದ್ದರು, ಆದರೆ ಸುರತ್ಕಲ್‍ನಲ್ಲಿ ಬಿಜೆಪಿಯ ಭಯೋತ್ಪಾದಕ ಪಡೆ ನಡೆಸಿದ ಅನೈತಿಕ ಪೆÇಲೀಸ್‍ಗಿರಿಯ ಬಗ್ಗೆ ತುಟಿ ಬಿಚ್ಚದೆ ಆರೋಪಿಗಳಿಗೆ ಸ್ಟೇಶನ್ ಬೇಲ್ ನೀಡಿ ತಕ್ಷಣವೇ ಬಿಟ್ಟು ಕಳಿಸಿದ್ದೇಕೆ? ರಾಜ್ಯವನ್ನು ತಾಲಿಬಾನಿಕರಣ ಮಾಡಲು ಬಿಜೆಪಿ ಮುಂದಾಗಿದೆ ಎಂದು ಟೀಕಿಸಿದೆ.