ಬೆಳಗಾವಿ: ಧರ್ಮ ಮತ್ತು ಜಾತಿಗಳ (Religion And Caste) ಮಧ್ಯೆ ವ್ಯಾಪಕ ಸಂಘರ್ಷ ಹುಟ್ಟು ಹಾಕುವಂತ ಕೆಲಸವನ್ನು ಕೆಲ ರಾಜಕಾರಣಿಗಳು (Politicians) ಮಾಡುತ್ತಿರುವುದು ವಿಪರ್ಯಾಸದ ಸಂಗತಿ ಎಂದು ಬಾಳೆಹೊನ್ನೂರು ರಂಭಾಪುರಿ ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
Advertisement
ಬೈಲಹೊಂಗಲ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜಕೀಯ ಧುರೀಣರು ಸರ್ವ ಜನಾಂಗದ ಶ್ರೇಯೋಭಿವೃದ್ಧಿಗೆ ಗಮನ ಹರಿಸದೇ ಶಾಂತಿ ಮತ್ತು ಸೌಹಾರ್ದತೆ ಬೆಳೆಸದೇ ಅಧಿಕಾರದ ಗದ್ದುಗೆಗಾಗಿ ಜಾತಿಯಲ್ಲಿ ವಿಷ ಬೀಜ ಬಿತ್ತುತ್ತಿದ್ದಾರೆ. ಜನರ ಭಾವನೆಗಳನ್ನು ಕೆರಳಿಸುವಂತ ಕೆಲಸ ಮಾಡುತ್ತಿದ್ದಾರೆ. ಇಂತಹ ಕೃತ್ಯವನ್ನು ಯಾರೂ ಮಾಡಬಾರದೆಂಬ ಸಂದೇಶ ನಾವು ನೀಡಲು ಇಚ್ಚಿಸುತ್ತೇವೆ ಎಂದರು. ಇದನ್ನೂ ಓದಿ: ರವಿ.ಡಿ ಚನ್ನಣ್ಣನವರ್ ಸೇರಿ 11 ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ
Advertisement
Advertisement
ಭಾರತೀಯ ಉತ್ಕೃಷ್ಟ ಸಂಸ್ಕೃತಿಯಲ್ಲಿ ಎಲ್ಲರೂ ಒಂದಾಗಿ ಬಾಳಬೇಕು. ಶಾಂತಿ, ನೆಮ್ಮದಿಯಿಂದ ಬದುಕು ಕಟ್ಟಿಕೊಳ್ಳಬೇಕು. ಪ್ರತಿಯೊಬ್ಬರೂ ತಮ್ಮ, ತಮ್ಮ ಧರ್ಮಗಳಲ್ಲಿ ನಿಷ್ಠೆ ಹೊಂದಿರಬೇಕು. ಆದರೆ, ಪರಧರ್ಮದ ಬಗ್ಗೆ ಸಂಹಿಷ್ಣತಾ ಮನೋಭಾವ ಬೆಳೆಸಿಕೊಂಡು ಬಂದಾಗ ಮಾತ್ರ ಧರ್ಮ, ಜಾತಿಗಳ ಮಧ್ಯೆ ಯಾವುದೇ ಸಂಘರ್ಷ ಉಂಟಾಗುವುದಿಲ್ಲ. ಪ್ರತಿಯೊಬ್ಬರಲ್ಲಿ ಸ್ವಾಭಿಮಾನ ಇರಬೇಕು. ಸ್ವಾಭಿಮಾನದ ಕೊರತೆಯಿಂದಾಗಿ ಎಲ್ಲ ರಂಗಗಳಲ್ಲಿ ಅನೇಕ ಸಂಘರ್ಷ ಉಂಟಾಗುತ್ತಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಪ್ರತಾಪ್‌ಸಿಂಹನಿಗೆ ಬಸ್‌ನಿಲ್ದಾಣದ ಗುಂಬಜ್‌ಗಳೂ ಮುಸ್ಲಿಮರ ಮಸೀದಿಯೆಂತೆ ಕಾಣ್ತಿದೆ – ಸೇಠ್ ತಿರುಗೇಟು
Advertisement
ಕಾರ್ಯಕ್ರಮದಲ್ಲಿ ಸಂಗೊಳ್ಳಿ ಗುರುಲಿಂಗ ಸ್ವಾಮೀಜಿ, ಶಿರಕೊಳ್ಳ ಗುರುಸಿದ್ದೇಶ್ವರ ಸ್ವಾಮೀಜಿ, ಸುಳ್ಳದ ಶಿವಸಿದ್ಧರಾಮೇಶ್ವರ ಸ್ವಾಮೀಜಿ ಸೇರಿ ಅನೇಕರು ಇದ್ದರು.