– ಪೊಲೀಸ್ ಸಿಬ್ಬಂದಿಯಿಂದ್ಲೇ ಕಳ್ಳತನ
ಲಕ್ನೋ: ಖದೀಮರಿಗೆ ಬುದ್ಧಿ ಕಲಿಸಬೇಕಾದ ಪೊಲೀಸ್ ಸಿಬ್ಬಂದಿಯೇ ಕಳ್ಳತನ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಉತ್ತರ ಪ್ರದೇಶದ ನೋಯ್ಡಾದಲ್ಲಿ ಈ ಘಟನೆ ನಡೆದಿದೆ. ಭಾನುವಾರ ಬೆಳಗ್ಗೆ ಅಂಗಡಿಯೊಂದರ ಮುಂದೆ ಇಟ್ಟಿದ್ದ ಬಾಕ್ಸ್ ಗಳಲ್ಲಿ ಇದ್ದ 2 ಹಾಲಿನ ಪ್ಯಾಕೆಟ್‍ನನ್ನು ಕರ್ತವ್ಯ ನಿರತ ಪೊಲೀಸ್ ಪೇದೆ ಕದ್ದಿದ್ದಾರೆ. ಈ ದೃಶ್ಯವು ಅಂಗಡಿ ಮುಂದೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಳ್ಳರನ್ನು ಹಿಡಿಯಬೇಕಿದ್ದ ಪೊಲೀಸರೇ ಕಳ್ಳತನ ಮಾಡಿ ಸಾಕ್ಷಿ ಸಮೇತ ಸಿಕ್ಕಿಬಿದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.
Advertisement
Advertisement
ನಸುಕಿನ ಜಾವದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸ್ ಪೇದೆ ಕಳ್ಳತನ ಮಾಡಿದ್ದಾರೆ. ಅಂಗಡಿ ಮುಂದೆ ಹಾಲಿನ ಪ್ಯಾಕೆಟ್‍ಗಳನ್ನು ತುಂಬಿದ್ದ ಬಾಕ್ಸ್ ಗಳನ್ನು ಇರಿಸಲಾಗಿತ್ತು. ಇದನ್ನು ಪೊಲೀಸ್ ವಾಹನದಲ್ಲಿ ಗಸ್ತು ತಿರುಗುತ್ತಿದ್ದ ಪೇದೆ ಗಮನಿಸಿದ್ದು, ವಾಹನವನ್ನು ಅಂಗಡಿ ಮುಂದೆ ನಿಲ್ಲಿಸಿ, ಬಳಿಕ ವಾಹನದಿಂದ ಇಳಿದು ಅಕ್ಕ ಪಕ್ಕ ನೋಡಿ ಬಾಕ್ಸ್ ಗಳಲ್ಲಿ ಇದ್ದ 2 ಹಾಲಿನ ಪ್ಯಾಕೆಟ್‍ಗಳನ್ನು ಕದ್ದಿದ್ದಾರೆ. ನಂತರ ಅದನ್ನು ವಾಹನದಲ್ಲಿದ್ದ ಇನ್ನೋರ್ವ ಸಿಬ್ಬಂದಿಗೆ ಕೊಟ್ಟು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ದೃಶ್ಯಗಳು ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Advertisement
ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವಿಡಿಯೋ ನೋಡಿದ ನೆಟ್ಟಿಗರು ಪೊಲೀಸ್ ಇಲಾಖೆಯನ್ನು ಟೀಕಿಸುತ್ತಿದ್ದಾರೆ. ‘ಮಿಲ್ಕ್ ಚೋರ್’, ‘ಖಾಕಿ ಚೋರ್’ ಎಂದು ಕಮೆಂಟ್ ಮಾಡುತ್ತಾ ಪೊಲೀಸರ ಕಾಲೆಳೆಯುತ್ತಿದ್ದಾರೆ.
Advertisement
#WATCH Policeman seen stealing packets of milk in Noida, Uttar Pradesh, yesterday. (Source: CCTV footage) pic.twitter.com/elszjwbyA1
— ANI UP/Uttarakhand (@ANINewsUP) January 20, 2020