ಶ್ರೀನಗರ: ಕಾಶ್ಮೀರದಲ್ಲಿ (Kashmir) ಮತ್ತೆ ಉಗ್ರರು (Terrorist) ಭದ್ರತಾ ಪಡೆಯನ್ನು ಗರಿಯಾಗಿಸಿ ದಾಳಿ ನಡೆಸಿದ್ದಾರೆ. ದಕ್ಷಿಣ ಕಾಶ್ಮೀರದ ಚೆಕ್‌ಪೋಸ್ಟ್ ಬಳಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ತಂಡವನ್ನು ಗುರಿಯಾಗಿಸಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಸೈನಿಕರೊಬ್ಬರು ಹುತಾತ್ಮರಾಗಿದ್ದಾರೆ. ಓರ್ವ ಸಿಆರ್‌ಪಿಎಫ್ ಯೋಧ ಗಾಯಗೊಂಡಿದ್ದಾರೆ.
#Terrorists fired upon joint naka party of CRPF & Police at Pinglana, #Pulwama. In this #terror attack, 01 Police personnel got #martyred & 01 CRPF personnel got injured. Reinforcement sent. Area being #cordoned. Further details shall follow.@JmuKmrPolice
— Kashmir Zone Police (@KashmirPolice) October 2, 2022
Advertisement
ಶೋಪಿಯಾನ್‌ದಲ್ಲಿ (Shopian) ನಡೆದ ಎನ್‌ಕೌಂಟರ್‌ನಲ್ಲಿ ಲಷ್ಕರ್ (LET) ಭಯೋತ್ಪಾದಕನನ್ನು ಹತ್ಯೆ ಮಾಡಿದ ಕೆಲವೇ ಗಂಟೆಗಳ ಬಳಿಕ ಉಗ್ರರಿಂದ ಪ್ರತಿದಾಳಿ ನಡೆದಿದೆ. ದಕ್ಷಿಣ ಕಾಶ್ಮೀರದ ಪುಲ್ವಾಮಾದ ಪಿಂಗ್ಲಾನಾ ಗ್ರಾಮದಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿ, ತಪ್ಪಿಸಿಕೊಂಡಿದ್ದಾರೆ. ಸದ್ಯ ಉಗ್ರರನ್ನು ಪತ್ತೆಹಚ್ಚಲು ಗ್ರಾಮಕ್ಕೆ ಪೊಲೀಸ್ (Police), ಸೇನೆ ಹಾಗೂ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಇದನ್ನೂ ಓದಿ: ಚರ್ಮಗಂಟು ರೋಗದಿಂದ ಮೃತಪಟ್ಟ ಜಾನುವಾರುಗಳಿಗೆ ಪರಿಹಾರ ನೀಡಲು 2 ಕೋಟಿ ರೂ. ಬಿಡುಗಡೆ: ಪ್ರಭು ಚವ್ಹಾಣ್
Advertisement
Advertisement
ಕಾರ್ಯಾಚರಣೆಯ ಸಮಯದಲ್ಲಿ ಎಕೆ ರೈಫಲ್ ಸೇರಿದಂತೆ ಮದ್ದು ಗುಂಡುಗಳು ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಉನ್ನತ ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಖಾದಿ ಎಂಪೋರಿಯಂನಲ್ಲಿ ಲೇಡಿಸ್ ಟಾಪ್ ಡ್ರೆಸ್ ಖರೀದಿಸಿದ ಸಿಎಂ
Advertisement
ದಕ್ಷಿಣ ಕಾಶ್ಮೀರದ ಶೋಪಿಯಾನ್ ಬಾಸ್ಕುಚಾನ್ ಇಮಾಮಸಾಹಿಬ್ ಪ್ರದೇಶದಲ್ಲಿ ಭದ್ರತಾಪಡೆಗಳು ಶನಿವಾರ ನಡೆಸಿದ ಎನ್‌ಕೌಂಟರ್ ದಾಳಿಯಲ್ಲಿ ಲಷ್ಕರ್ ಎ ತೋಯ್ಬಾ (LET) ದೊಂದಿಗೆ ಸಂಪರ್ಕ ಹೊಂದಿದ್ದ ಭಯೋತ್ಪಾದಕನನ್ನು ಹತ್ಯೆಗೈದು ಇಬ್ಬರನ್ನು ಬಂಧಿಸಿತ್ತು. ಮೃತ ಭಯೋತ್ಪಾದಕನನ್ನು ನಸೀರ್ ಅಹ್ಮದ್ ಭಟ್ ಎಂದು ಗುರುತಿಸಲಾಗಿದ್ದು, ಈತ ಇತ್ತೀಚೆಗೆ ಎನ್‌ಕೌಂಟರ್‌ನಿಂದ ತಪ್ಪಿಸಿಕೊಂಡಿದ ಹಲವಾರು ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ.