ಮೊರಾದಾಬಾದ್: ಅತಿಯಾದರೆ ಅಮೃತವೂ ವಿಷ ಎಂಬ ಗಾದೆ ಮಾತು ಈಗಿನ ಸೆಲ್ಫಿ ಕ್ರೇಜ್ ಯುವಕರಿಗೆ ಅನ್ವಯಿಸುತ್ತದೆ. ಇಂದಿನ ಸ್ಮಾರ್ಟ್ ಫೋನ್ ಯುಗದಲ್ಲಿ ಸೆಲ್ಫಿ ಕ್ರೇಜ್ ಯಾರನ್ನೂ ಬಿಟ್ಟಿಲ್ಲ. ಈ ಸೆಲ್ಫಿ ಕ್ರೇಜ್ ಕೆಲವರ ಜೀವಕ್ಕೆ ಅಪಾಯವಾಗುತ್ತಿರುವ ಹಿನ್ನೆಲೆಯಲ್ಲಿ ಇಂತಹ ಅನಾಹುತ ತಡೆಯಲು ಉತ್ತರಪ್ರದೇಶ ಪೊಲೀಸರು ಮುಂದಾಗಿದ್ದಾರೆ.
ರೈಲ್ವೆ ಹಳಿ, ಬಸ್ ನಿಲ್ದಾಣ, ಹೆದ್ದಾರಿ, ನದಿ ದಡ, ಎತ್ತರದ ಕಟ್ಟಡಗಳಂತಹ ಸ್ಥಳಗಲ್ಲಿ ಸೆಲ್ಫಿ ತೆಗೆದುಕೊಂಡವರ ಮೇಲೆ ದಂಡ ವಿಧಿಸಲಾಗುವುದು ಮತ್ತುಕಠಿಣ ಕ್ರಮ ಕೈಗೊಳ್ಳಲಾಗುವುದು ಮೊರಾದಾಬಾದ್ ಎಂದು ಪೊಲೀಸರು ಹೇಳಿದ್ದಾರೆ,
Advertisement
ಯುವ ಜನತೆ ಸೆಲ್ಫಿ ತೆಗೆಯುವುದು ತಪ್ಪು ಎಂದು ನಾವು ಹೇಳುತ್ತಿಲ್ಲ. ಆದರೆ ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ಕ್ಲಿಕ್ಕಿಸಿ ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ನಾವು ದಂಡ ವಿಧಿಸಲು ಮುಂದಾಗಿದ್ದೇವೆ ಎಂದು ಎಸ್‍ಪಿ ಆಶೀಶ್ ಶ್ರೀವಾಸ್ತವ್ ಹೇಳಿದ್ದಾರೆ.
Advertisement
ಕಳೆದ ತಿಂಗಳು ತೆಲಂಗಾಣದ ಸಿಕಂದರಾಬಾದ್ ಸಮೀಪ ಅಲ್ವಾಲ್ ರೈಲ್ವೆ ನಿಲ್ದಾಣದಲ್ಲಿ ಸೆಲ್ಫಿ ತಗೆದುಕೊಳ್ಳಲು ಹೋಗಿ ಓರ್ವ ವ್ಯಕ್ತಿ ಮೃತಪಟ್ಟಿದ್ದ. ಅಲ್ಲದೆ ಇನ್ನೊಬ್ಬ ವ್ಯಕ್ತಿ ತನ್ನ ಕೈ ಕಳೆದುಕೊಂಡಿದ್ದ.
Advertisement
ಇದನ್ನೂ ಓದಿ: ಸಮುದ್ರ ದಂಡೆಯ ಮೇಲೆ ಸೆಲ್ಫೀ ತೆಗೆಯಲು ಹೋದ ಯುವಕ ನೀರುಪಾಲು