ಬೆಂಗಳೂರು: ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ರಾಜ್ಯ ಬಿಜೆಪಿ ರಾಜಕೀಯ ವ್ಯವಾಹಾರಗಳ ಸಭೆ ಇಂದು ಬೆಳಗ್ಗೆ 8 ಗಂಟೆಗೆ ನಡೆಯಿತು.
ಬಿಜೆಪಿ ಕಚೇರಿ ಮುಂದೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಸಭೆಗೆ ಆಗಮಿಸಿದ ಕೇಂದ್ರ ಸಚಿವ ಸದಾನಂದಗೌಡರನ್ನು ಪೊಲೀಸರು ಕಾಡು ಮಲ್ಲೇಶ್ವರ ದೇವಸ್ಥಾನದ ಬಳಿಯೆ ಕಾರು ತಡೆದ್ರು.
ಈ ಹಿನ್ನೆಲೆಯಲ್ಲಿ ಅಲ್ಲಿಂದ ಬಿಜೆಪಿ ಕಚೇರಿವರೆಗೆ ನಡೆದುಕೊಂಡು ಬಂದ ಡಿವಿಎಸ್ ತಮ್ಮ ಕಾರು ತಡೆದದ್ದಕ್ಕೆ, ಕಚೇರಿ ಮುಂಭಾಗದಲ್ಲಿ ಇದ್ದ ಎಸಿಪಿ ಬಡಿಗೇರ್ ರನ್ನು ತರಾಟೆಗೆ ತಗೆದುಕೊಂಡರು. ಕೇಂದ್ರ ಸಚಿವರನ್ನು ಬಿಡುವುದಿಲ್ಲ ಅಂದ್ರೆ ಇದು ಶೇಮ್‍ಲೆಸ್, ಕೇಂದ್ರ ಸಚಿವರ ಜೊತೆ ನಡೆದುಕೊಳ್ಳುವ ಪರಿಯೇ ಎಂದು ಕಿಡಿಕಾರಿದ್ರು.
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರಾಜ್ಯ ಬಿಜೆಪಿಯ ಒಡಕನ್ನು ಸರಿಪಡಿಸ್ತಾ ಇದ್ರೆ ಇತ್ತ ತುಮಕೂರು ಜಿಲ್ಲೆಯಲ್ಲಿ ನ ಬಿಜೆಪಿ ಭಿನ್ನಮತ ಮುಂದುವರೆದಿದೆ. ಮಾಜಿ ಸಚಿವ ಸೊಗಡು ಶಿವಣ್ಣ ಶಾ ಕಾರ್ಯಕ್ರಮದಿಂದ ದೂರ ಉಳಿಯುವ ಮೂಲಕ ಭಿನ್ನರಾಗ ಮುಂದುವರೆಸಿದ್ದಾರೆ. ತನಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿಲ್ಲ. ಹಾಗಾಗಿ ಆ ಕಾರ್ಯಕ್ರಮಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಮುಂದಿನ ಬಾರಿ ಬಿಜೆಪಿಯಿಂದಲೇ ಸ್ಪರ್ಧಿಸುತ್ತೇನೆ. ಅಮಿತ್ ಶಾ ಅವರೇ ಟಿಕೆಟ್ ಕೊಡುತ್ತಾರೆ ಎಂಬ ವಿಶ್ವಾಸ ಇದೆ ಎಂದು ಹೇಳಿದ್ದಾರೆ. ಅಮಿತಾ ಶಾ ಅವರಿಗೆ ರಾಜ್ಯವನ್ನು ಹೇಗೆ ನಿಭಾಯಿಸಬೇಕು ಅನ್ನೋದು ಗೊತ್ತಿದೆ. ಹಾಗಾಗಿ ಎಲ್ಲವೂ ಒಳ್ಳೆಯದಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ ಗೆ ಐಟಿ ಶಾಕ್ ನೀಡಿದ್ದ ಬಿಜೆಪಿಗೆ 80 ಸೀಟಿನ ಶಾಕ್! https://t.co/NQ7v6SVcn8#Congress #IT #BJP #Amitshah pic.twitter.com/DmBqLpMVrM
— PublicTV (@publictvnews) August 13, 2017
ರಾಜ್ಯ ಬಿಜೆಪಿ ನಾಯಕರ ಮೇಲೆ ಅಮಿತ್ ಶಾ ಗರಂ! https://t.co/PC6n0PdERT#AmitShah #BJP #Election pic.twitter.com/oz9STmIsrL
— PublicTV (@publictvnews) August 12, 2017
ಪ್ರಧಾನಿ ಮೋದಿ ಹೋದಲ್ಲೆಲ್ಲಾ ಸುಳ್ಳು ಹೇಳ್ತಾರೆ: ರಾಹುಲ್ ಗಾಂಧಿ https://t.co/CzDtmTWBTi#Rahulgandhi #Congress #Raichur #Narendramodi pic.twitter.com/QzcCBaGkHI
— PublicTV (@publictvnews) August 12, 2017