ಬಳ್ಳಾರಿ: ದಾಖಲೆಗಳಿಲ್ಲದೇ ಕೆಎಸ್‍ಆರ್ ಟಿಸಿ ಬಸ್ಸಿನಲ್ಲಿ ಹಣ ಸಾಗಾಟ ಮಾಡುತ್ತಿದ್ದ ಬರೋಬ್ಬರಿ 11 ಲಕ್ಷ ರೂಪಾಯಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಜಿಟಿಟಿಸಿ ಬಳಿ ಸ್ಥಾಪಿಸಲಾಗಿರುವ ಸ್ಥಿರ ಕಣ್ಗಾವಲು ಪಡೆ(ಎಸ್‍ಎಸ್ಟಿ) ಚೆಕ್‍ಪೋಸ್ಟ್ ಬಳಿ ಶುಕ್ರವಾರ ರಾತ್ರಿ ಹಣವನ್ನು ಜಪ್ತಿ ಮಾಡಲಾಗಿದೆ. ದಾವಣಗೆರೆಯಿಂದ ಸೋಲಾಪುರಕ್ಕೆ (ಕೆಎ-17,ಎಫ್-1673) ನಂಬರ್ ನ ಕೆಎಸ್‍ಆರ್ ಟಿಸಿ ಬಸ್ ಹೋಗುತ್ತಿತ್ತು. ಈ ವೇಳೆ ಸ್ಥಿರ ಕಣ್ಗಾವಲು ಪಡೆಯ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಆಗ ಬಸ್ಸಿನಲ್ಲಿ 11,05,200 ರೂ. ಹಣ ಪತ್ತೆಯಾಗಿದೆ.
Advertisement
Advertisement
ಈ ಕುರಿತು ವಿಚಾರಿಸಿದಾಗ ಸರಿಯಾದ ದಾಖಲೆ ನೀಡದ ಹಿನ್ನೆಲೆಯಲ್ಲಿ ಹಣವನ್ನು ವಶಪಡಿಸಿಕೊಂಡು ಹಗರಿಬೊಮ್ಮನಹಳ್ಳಿ ಖಜಾನೆಯಲ್ಲಿಡಲಾಗಿದೆ. ಈ ಹಣವು ಜೂಟುರು ಹನುಮೇಶ ಕುವೆಂಪು ಬಡಾವಣೆ ಗಂಗಾವತಿ(ಶ್ರೀ ರಾಮಾಂಜನೇಯ ಕಮರ್ಷಿಯಲ್ ಕಾರ್ಪೊರೇಷನ್ ಸಿಬಿಎಸ್ ಗಂಜ್ ಆರ್‍ಜಿ ರೋಡ್ ಅಂಗಡಿ ಮಾಲೀಕ) ಎಂಬವರಿಗೆ ಸೇರಿದ್ದಾಗಿದೆ ಎಂದು ತಿಳಿದು ಬಂದಿದೆ.
Advertisement
Advertisement
ಈ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿ ಜಹೀರ್ ಅಬ್ಬಾಸ್, ತಾಲೂಕು ನೋಡಲ್ ಅಧಿಕಾರಿ ರಾಜಪ್ಪ, ತಹಸೀಲ್ದಾರ್ ರೆಹಮಾನ್ ಪಾಷ್ ಮತ್ತು ಎಂಸಿಸಿ ನೋಡಲ್ ಅಧಿಕಾರಿ ವಿಶ್ವನಾಥ್ ಕಾರ್ಯಚರಣೆ ನಡೆಸುತ್ತಿದ್ದರು.
ಈ ಸಂಬಂಧ ಹೊಸಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv