ಚತ್ತೀಸ್‍ಗಢ: ಪ್ರತಿದಿನ ವಾಹನಗಳ ತಪಾಸಣೆ ವೇಳೆ ಪೊಲೀಸರು ರಾಯ್ಪುರದಲ್ಲಿ ಬರೋಬ್ಬರಿ 1.70 ಕೋಟಿ ರೂ. ಹಣವನ್ನು ವಶಪಡಿಸಿಕೊಂಡಿದ್ದಾರೆ.
ವಾಹನವೊಂದರಲ್ಲಿ ಹಣ ಸಾಗಾಣೆ ಮಾಡುತ್ತಿದ್ದರು. ಈ ವೇಳೆ ರಾಯ್ಪುರದಲ್ಲಿ ವಾಹನ ತಪಾಸಣೆ ಮಾಡುವ ಸಂದರ್ಭದಲ್ಲಿ ಹಣ ಪತ್ತೆಯಾಗಿದೆ. ಈ ಸಂಬಂಧ ಹವಾಲಾ ನೆಟ್ವರ್ಕ್ ಮೂಲಕ ದಂಧೆ ನಡೆಸುತ್ತಿದ್ದ ಇಬ್ಬರು ಆರೋಪಿಗಳ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
Advertisement
Advertisement
ಬಂಧಿತರು ಹವಾಲಾ ದಂಧೆ ಮೂಲಕ ತಾವೂ ಕಾರ್ಯ ನಿರ್ವಹಿಸುತ್ತಿರುವುದಾಗಿ ಹೇಳಿದ್ದಾರೆ. ಜೊತೆಗೆ ಗುಜರಾತ್‍ನ ಚೇತನ್ ಭಾಯ್ ಸೂಚನೆ ಮೇರೆಗೆ ಈ ಹಣವನ್ನು ಸಾಗಾಣೆ ಮಾಡುತ್ತಿದ್ದೇವೆ ಎಂದು ತಿಳಿಸಿರುವುದಾಗಿ ರಾಯ್‍ಪುರ್ ಎಸ್‍ಪಿ ಪ್ರಫೂಲ್ ಠಾಕೂರ್ ಹೇಳಿದ್ದಾರೆ.
Advertisement
ಬಂಧಿತ ಆರೋಪಿಗಳು ಗುಜರಾತ್‍ನ ಪರ್ಟರ್ ಪ್ರದೇಶದವರಾಗಿದ್ದು, ದೇವೇಂದ್ರ ನಗರ ವಲಯದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಅವರಿಗೆ ಈ ಕೆಲಸ ಮಾಡಲು ತಿಂಗಳ ವೇತನ ಮತ್ತು ಕಮಿಷನ್ ಕೂಡ ನೀಡಲಾಗುತ್ತಿದೆ ಎಂದು ಠಾಕೂರ್ ತಿಳಿಸಿದ್ದಾರೆ.
Advertisement
Chhattisgarh: Police in Raipur seized Rs 1.70 Crore cash from 2 people during vehicle checking on 21 Feb. Raipur ASP says, "They told us that they operated through a hawala network & worked on the instructions of a Chetan bhai in Gujarat. They're originally from Gujarat's Patan". pic.twitter.com/QXhoZfkVyS
— ANI (@ANI) February 21, 2019
ಆರೋಪಿಗಳು ತನ್ನ ಮನೆಯ ವಿಳಾಸ ಹೇಳಿದ ಬಳಿಕ ಅಲ್ಲಿ ಕೂಡ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ನೋಟ್ ಕೌಟಿಂಗ್ ಯಂತ್ರ ಮತ್ತು 1.35 ಲಕ್ಷ ರೂ. ಹಣ ಸಿಕ್ಕಿದೆ. ಸದ್ಯಕ್ಕೆ ತೆರಿಗೆ ಇಲಾಖೆಯ ಅಧಿಕಾರಿಗಳು ಹಣವನ್ನು ವಶಪಡಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv