ಶಿವಮೊಗ್ಗ: ಪರವಾನಿಗೆ ಇಲ್ಲದೆ ರಸ್ತೆಗಿಳಿದಿದ್ದ 24ಕ್ಕೂ ಹೆಚ್ಚು ಖಾಸಗಿ ಅಂಬುಲೆನ್ಸ್‌ಗಳನ್ನು ಜಿಲ್ಲೆಯ ದೊಡ್ಡಪೇಟೆ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಸ್ತೆಯಲ್ಲಿ ಓಡಾಡುವಾಗ ಅಂಬುಲೆನ್ಸ್ ಸೈರನ್ ಕೇಳಿದರೆ ಸಾಕು ಜನ ಗಾಬರಿಯಿಂದ ದಾರಿ ಬಿಡುತ್ತಾರೆ. ಆದರೆ ಜನರ ಜೀವ ಉಳಿಸುವ ಅಂಬುಲೆನ್ಸ್‌ಗಳು ಇಂದು ಪರವಾನಿಗೆ(ಲೈಸೆನ್ಸ್) ಇಲ್ಲದೆ ರಸ್ತೆಯಲ್ಲಿ ಸಂಚಾರ ಮಾಡುತ್ತಿವೆ. ಶಿವಮೊಗ್ಗದಲ್ಲಿ ಸಂಚರಿಸುವ ಬಹುತೇಕ ಖಾಸಗಿ ಅಂಬುಲೆನ್ಸ್‌ಗಳಿಗೆ ಹಾಗೂ ಅದರ ಚಾಲಕರಿಗೆ ಪರವಾನಗಿಯೇ ಇಲ್ಲ.
Advertisement
Advertisement
ಇದನ್ನು ಮನಗಂಡ ಪೊಲೀಸರು ಇಂದು ಖಾಸಗಿ ಅಂಬುಲೆನ್ಸ್‌ಗಳ ಲೈಸನ್ಸ್‌ಗಳನ್ನು ಪರಿಶೀಲನೆ ನಡೆಸಿದಾಗ, ಸುಮಾರು 24ಕ್ಕೂ ಹೆಚ್ಚು ಖಾಸಗಿ ಅಂಬುಲೆನ್ಸ್‌ಗಳು ಯಾವುದೇ ಪರವಾನಿಗೆ ಇಲ್ಲದೆ ಸಂಚರಿಸುತ್ತಿರುವುದು ಬೆಳಕಿಗೆ ಬಂದಿದೆ. ವಾಹನದ ಜೊತೆಗೆ ಅದರ ಚಾಲಕರ ಬಳಿಯೂ ಲೈಸನ್ಸ್ ಇಲ್ಲದಿರುವುದು ತಿಳಿದಿದೆ.
Advertisement
ಈ ಹಿಂದೆ ದೊಡ್ಡಪೇಟೆ ಪೊಲೀಸರಿಗೆ ಸಾರ್ವಜನಿಕರಿಂದ ಈ ಬಗ್ಗೆ ದೂರು ಬಂದಿತ್ತು. ದೂರಿನ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಪರಿಶೀಲಿಸಿದಾಗ ಪೊಲೀಸರಿಗೆ ಖಾಸಗಿ ಅಂಬುಲೆನ್ಸ್‌ಗಳ ಪರವಾನಗಿ ಇಲ್ಲದಿರುವುದರ ಜೊತೆಗೆ ವಾಹನ ನಂಬರ್ ಸಹ ಸರಿಯಾಗಿಲ್ಲ ಎಂಬುದು ತಿಳಿದಿದೆ. ಅಷ್ಟೇ ಅಲ್ಲದೆ ಇವುಗಳನ್ನು ಚಲಾಯಿಸುವ ಚಾಲಕರು ಕೂಡ ರೋಗಿಗಳೂಂದಿಗೆ ಸರಿಯಾಗಿ ವರ್ತಿಸದಿರುವ ವಿಚಾರವೂ ಗೊತ್ತಾಗಿದೆ.
Advertisement
ಆದ್ದರಿಂದ ಪೊಲೀಸರು ಸುಮಾರು 24ಕ್ಕೂ ಅಧಿಕ ಖಾಸಗಿ ಅಂಬುಲೆನ್ಸ್‌ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರ ಈ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.