ಚಿಕ್ಕಬಳ್ಳಾಪುರ: ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸುವಂತೆ ಆಗ್ರಹಿಸಿ ಇಂದು ಬಯಲು ಸಿಮೆಯ ಸಾವಿರಾರು ರೈತರು ರೈತರು ಬೆಂಗಳೂರಿಗೆ ಬೈಕ್ ಮೆರವಣಿಗೆ ಬರುತ್ತಿದ್ದು, ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಯೋಜನೆ ಹಾಕಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ
ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರಿನ ರೈತರು ಬೆಂಗಳೂರಿನತ್ತ ಹೊರಟಿದ್ದು ಬಿಗಿ ಭದ್ರತೆ ಮಾಡಲಾಗಿದೆ. ಮುನ್ನೆಚ್ಚರಿಕೆಯಾಗಿ ಎಲ್ಲೆಡೆ ಬಂದೋಬಸ್ತ್ ಕೈಗೊಳ್ಳಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳನ್ನು ನೀಯೋಜಿಸಲಾಗಿದೆ.
Advertisement
ತುಮಕೂರಿನಿಂದ ಆಗಮಿಸುತ್ತಿದ್ದ ರೈತರನ್ನು ನೆಲಮಂಗಲದ ನವಯುಗ ಟೋಲ್ ಬಳಿ ವಶಕ್ಕೆ ಪಡೆಯಲಾಗಿದೆ. ದೇವನಹಳ್ಳಿ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಆಸುಪಾಸು ಭದ್ರತೆ ಕೈಗೊಳ್ಳಲಾಗಿದೆ.
Advertisement
ನಂದಿ ಬೆಟ್ಟದ ಕ್ರಾಸ್‍ನಲ್ಲೇ ರೈತರನ್ನು ತಡೆಯಲು ಪೊಲೀಸರು ಸನ್ನದ್ಧರಾಗಿದ್ದಾರೆ. ಇಬ್ಬರು ಡಿಸಿಪಿಗಳ ನೇತೃತ್ವದಲ್ಲಿ ರೈತರ ಮೆರವಣಿಗೆ ತಡೆಯಲು ಮುಂದಾಗಿದ್ದಾರೆ. 20 ಕೆಎಸ್‍ಆರ್‍ಪಿ ತುಕಡಿ, ಮೂರು ವಾಟರ್ ಜೆಟ್, 1500 ಪೊಲೀಸರನ್ನ ಬಂದೋಬಸ್ತ್ ಗೆ ನಿಯೋಜನೆ ಮಾಡಲಾಗಿದೆ. ಬೆಂಗಳೂರು ಸಿಟಿ ರೈಲ್ವೆ ಸ್ಟೇಷನ್‍ನಲ್ಲೂ ಕೂಡ ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಲಾಗಿದ್ದು, ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನ ನಿಯೋಜಿಸಲಾಗಿದೆ.