ಬೆಂಗಳೂರು: ಲೋಕಸಭಾ ಚುನಾವಣೆ ಎಫೆಕ್ಟ್ ಪರಪ್ಪನ ಅಗ್ರಹಾರ ಜೈಲಿಗೂ ತಟ್ಟಿದ್ದು, ಈ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರದ ಮೇಲೆ ಸುಮಾರು 300 ಪೊಲೀಸರು ದಾಳಿ ನಡೆಸಿದ್ದಾರೆ.
ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್, ಸಿಸಿಬಿ ಹೆಚ್ಚುವರಿ ಆಯುಕ್ತ ಅಲೋಕ್ ಕುಮಾರ್, ಸಿಸಿಬಿ ಡಿಸಿಪಿ ಗಿರೀಶ್, ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ, ಆಗ್ನೇಯ ವಿಭಾಗದ ಡಿಸಿಪಿ ಇಷಾ ಪಂಥ್ ಮತ್ತು ಕೇಂದ್ರ ವಿಭಾಗದ ದೇವರಾಜ್ ನೇತೃತ್ವದಲ್ಲಿ ಐವರು ಡಿಸಿಪಿ, ಎಸಿಪಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
Advertisement
Advertisement
ಒಟ್ಟು 300 ಪೊಲೀಸ್ ಸಿಬ್ಬಂದಿ ಕೈದಿಗಳ ತಪಾಸಣೆ ಮಾಡಲಾಗಿದ್ದು, ಈ ವೇಳೆ ಕೈದಿಗಳ ಬ್ಯಾರಕ್‍ನಲ್ಲಿ 250 ಗ್ರಾಂ ಗಾಂಜಾ, 70 ಮೊಬೈಲ್, ಸಿಮ್ ಕಾರ್ಡ್ ಗಳು ಸೇರಿ ಹಲವು ನಿಷೇಧಿತ ವಸ್ತುಗಳು ಪತ್ತೆಯಾಗಿವೆ. ಅಷ್ಟೇ ಅಲ್ಲದೇ 20 ಸಾವಿರ ನಗದು, ಚಾಕು, ಕಟರ್ ಗಳು ಪತ್ತೆಯಾಗಿದ್ದು, ಪೊಲೀಸರು ಅವುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
Advertisement
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ದಾಳಿ ಮಾಡಲಾಗಿದೆ. ಕೆಲ ರೌಡಿಗಳು ಜೈಲಿನಿಂದ ಮತದಾರರ ಮೇಲೆ ಪ್ರಭಾವ ಬೀರಿದ್ದು, ಮತದಾರರನ್ನ ಆಪರೇಟ್ ಮಾಡುತ್ತಿರುವ ಹಿನ್ನೆಲೆಯಲ್ಲಿ ದಾಳಿ ಮಾಡಿದ್ದೇವೆ. 70 ಮೊಬೈಲ್ ವಶಕ್ಕೆ ಪಡೆದಿದ್ದೇವೆ. ಸ್ವಲ್ಪ ಪ್ರಮಾಣದ ಮಾದಕ ವಸ್ತು ಮತ್ತು ಗಾಂಜಾ ಕೂಡ ಸಿಕ್ಕಿದೆ. ಈ ಬಗ್ಗೆ ನಾವು ಕೇಸ್ ದಾಖಲು ಮಾಡುತ್ತಿದ್ದೇವೆ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.