ಬೆಂಗಳೂರು: ದೇವಾಲಯ, ಮಸೀದಿ ಹಾಗೂ ಚರ್ಚ್‌ಗಳಲ್ಲಿ ಮೈಕ್ ಸಕ್ರಮಕ್ಕೆ ಸರ್ಕಾರ ನೀಡಿದ್ದ ಗಡುವು ನಿನ್ನೆಗೆ ಅಂತ್ಯವಾಗಿದೆ. ಇಂದಿನಿಂದ ಅನಧಿಕೃತ ಮೈಕ್‌ಗಳ ತೆರವು ಕಾರ್ಯಾಚರಣೆಯನ್ನು ಪೊಲೀಸರು ನಡೆಸಲಿದ್ದಾರೆ.
ಯಾರೆಲ್ಲ ಅಕ್ರಮವಾಗಿ ಇನ್ನೂ ಮೈಕ್‌ಗಳನ್ನು ಹಾಕಿದ್ದಾರೋ ಅಂತಹವರ ವಿರುದ್ಧ ಪೊಲೀಸರು ಈಗ ಸಮರ ಸಾರಲಿದ್ದಾರೆ. ಅನಧಿಕೃತ ಮೈಕ್ ಅಳವಡಿಸಿಕೊಂಡಿರುವವರ ವಿರುದ್ಧ ಪೊಲೀಸರು ಫೀಲ್ಡ್‌ಗೆ ಇಳಿಯಲಿದ್ದು, ಕಾನೂನು ಅಸ್ತ್ರ ಪ್ರಯೋಗಿಸಲಿದ್ದಾರೆ. ಇದನ್ನೂ ಓದಿ: ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆ
Advertisement
Advertisement
ಮಸೀದಿ, ಮಂದಿರ ಹಾಗೂ ಚರ್ಚ್‌ಗಳಲ್ಲಿ ಧ್ವನಿವರ್ಧಕ ಬಳಕೆಗೆ ಅನುಮತಿ ಕೋರಿ 900ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿದ್ದವು. ಈ ಪೈಕಿ 121 ಅರ್ಜಿ ವಿಲೇವಾರಿ ಮಾಡಿ ಪೊಲೀಸರು ಅನುಮತಿ ನೀಡಿದ್ದಾರೆ. ಕೋರ್ಟ್ ಆದೇಶ ಹಾಗೂ ಸರ್ಕಾರದ ಸೂಚನೆಗಳ ಅನುಸಾರವಾಗಿ ಅರ್ಜಿ ವಿಲೇವಾರಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.