ಚಂಡೀಗಢ: 45 ವರ್ಷದ ಪೊಲೀಸ್ ಅಧಿಕಾರಿ ಪತ್ನಿಯನ್ನು ಕೊಂದು ಬಳಿಕ ತಾನೂ ಸರ್ವೀಸ್ ರಿವಾಲ್ವರ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಂಜಾಬ್ನ ಜಲಂಧರ್ ಜಿಲ್ಲೆಯಲ್ಲಿ ನಡೆದಿದೆ.
ವಂದನಾ (41) ಮೃತ ದುರ್ದೈವಿ. ಗುರ್ವಕ್ಷ್ ಸಿಂಗ್ ಪತ್ನಿಯನ್ನು ಕೊಂದು ಶೂಟ್ ಮಾಡಿಕೊಂಡ ಸಹಾಯಕ ಉಪ ಇನ್ಸ್ ಪೆಕ್ಟರ್. ಇವರು ರಾಮ ಮಂಡಿ ಪ್ರದೇಶದಲ್ಲಿ ವಾಸವಾಗಿದ್ದು, ಜಲಂಧರ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ಪೊಲೀಸ್ ಅಧಿಕಾರಿ ಸೇವಾ ಸಿಂಗ್ ಹೇಳಿದ್ದಾರೆ.
Advertisement
Advertisement
ಈ ಕುರಿತು ಪೊಲೀಸರು ತನಿಖೆ ಮಾಡಿದ್ದು, ಪ್ರಾಥಮಿಕ ತನಿಖೆಯಲ್ಲಿ ವಿದೇಶದಲ್ಲಿ ನೆಲೆಸುವ ಬಗ್ಗೆ ದಂಪತಿಯ ನಡುವೆ ಜಗಳವಾಗಿ ಸಾವಿನಲ್ಲಿ ಅಂತ್ಯಗೊಂಡಿದೆ ಎಂದು ತಿಳಿದು ಬಂದಿದೆ.
Advertisement
ಈ ದಂಪತಿಗೆ 19 ಮತ್ತು 17 ರ ವಯಸ್ಸಿನ ಇಬ್ಬರು ಮಕ್ಕಳಿದ್ದಾರೆ. ವಂದನಾ ತನ್ನ ಪತಿ ಸಿಂಗ್ ಮತ್ತು ಕುಟುಂಬದೊಂದಿಗೆ ಕೆನಡಾದಲ್ಲಿ ನೆಲೆಸಬೇಕೆಂದು ಬಯಸಿದ್ದರು. ಆದರೆ ಪತಿ ಸಿಂಗ್ ಗೆ ಇಷ್ಟವಿರಲಿಲ್ಲ. ಈ ವಾದದಲ್ಲಿಯೇ ಕೋಪಗೊಂಡ ಸಿಂಗ್, ಪತ್ನಿಗೂ ಶೂಟ್ ಮಾಡಿ ಕೊಂದು ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement