ಕೊಪ್ಪಳ: ಪೊಲೀಸ್ ಇಲಾಖೆಯಲ್ಲಿ ಆರ್ಡರ್ಲಿ ಪದ್ಧತಿ ರದ್ದಾಗಿ ಹಲವು ವರ್ಷಗಳೇ ಕಳೆದಿದೆ. ಆದ್ರೂ ಹಿರಿಯ ಪೊಲೀಸ್ ಅಧಿಕಾರಿಗಳ ದವಲತ್ತು ಇನ್ನೂ ಮುಂದುವರಿದಿದೆ. ಇಲಾಖೆಯ ನಿಮಯಗಳನ್ನು ಮೀರಿ ಹಿರಿಯ ಅಧಿಕಾರಿಗಳು ಕೆಳಮಟ್ಟದ ಸಿಬ್ಬಂದಿಯನ್ನು ಜೀತದಾಳುಗಳಂತೆ ಕೆಲಸ ಮಾಡಿಸಿಕೊಳ್ಳುತ್ತಿರುವುದು ಇದೀಗ ಮತ್ತೊಮ್ಮೆ ಬಯಲಾಗಿದೆ.
ಕೊಪ್ಪಳದ ಮುನಿರಾಬಾದ್ ನಲ್ಲಿರುವ ಕೆಎಸ್‍ಆರ್ ಪಿ ಪೊಲೀಸ್ ತರಬೇತಿ ಕೇಂದ್ರದಲ್ಲಿ ಹಿರಿಯ ಅಧಿಕಾರಿಯೊಬ್ಬರು ಇಲಾಖೆಯ ನಿಮಯಗಳನ್ನ ಮೀರಿ ತಮ್ಮ ಖಾಸಗಿ ಬಟ್ಟೆಗಳನ್ನ ತೊಳೆಸಿಕೊಳ್ಳುವುದಲ್ಲದೆ, ಶೇವಿಂಗ್ ಸಹ ಮಾಡಿಸಿಕೊಂಡು ಕೀಳುಮಟ್ಟದ ವರ್ತನೆ ತೋರಿದ್ದಾರೆ. ಕೆಎಸ್ ಆರ್ ಪಿ ತರಬೇತಿ ಶಾಲೆಯಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿರುವ ಎಚ್ ಹನುಮಂತಪ್ಪ, ಕೆಳಹಂತದ ಇಬ್ಬರೂ ಸಿಬ್ಬಂದಿಯನ್ನು ತಮ್ಮ ಜೀತದಾಳುಗಳಂತೆ ಕಾಣುತ್ತಿರುವುದು ಇದೀಗ ಬಯಲಾಗಿದೆ.
Advertisement
Advertisement
ಪೊಲೀಸ್ ಮ್ಯಾನುವಲ್ ಪ್ರಕಾರ ಕೆಎಸ್‍ಆರ್ ಪಿ ದೋಬಿಗಳು ಎಸ್‍ಪಿ ರೇಂಜಿನ ಅಧಿಕಾರಿಗಳ ಯೂನಿಫಾರ್ಮ್, ಆಫೀಸ್ ಬಟ್ಟೆಗಳು, ಕರ್ಟನ್, ಟೇಬಲ್ ಕ್ಲಾಥ್ ತೊಳೆಯೋದು ಹಾಗೂ ಎಲ್ಲ ಸಿಬ್ಬಂದಿಯ ಯೂನಿಫಾರ್ಮ್ ಮಾತ್ರ ಐರನ್ ಮಾಡಬೇಕು. ಆದ್ರೆ ಹೆಡ್ ಕಾನ್ಸ್ ಟೇಬಲ್ ಹನುಮಂತಪ್ಪ, ದೋಬಿ ರಾಜು ಎನ್ನುವವರಿಂದ ತಮ್ಮ ಖಾಸಗಿ ಬಟ್ಟೆಗಳು ಹಾಗೂ ಒಳ ಉಡುಪುಗಳನ್ನ ತೊಳೆಸಿಕೊಳ್ಳುತ್ತಿರುವುದು ಬಯಲಾಗಿದೆ.
Advertisement
Advertisement
ಅಲ್ಲದೇ ಇದೇ ಹೆಡ್ ಕಾನ್ಸ್ ಟೇಬಲ್ ಹನುಮಂತಪ್ಪ ಪೊಲೀಸ್ ಮ್ಯಾನುವಲ್ ಉಲ್ಲಂಘಿಸಿ ಬಾರ್ಬರ್ ನಾಗರಾಜ ಎನ್ನುವವರಿಂದ ಸೇವಿಂಗ್ ಸೇವೆ ಸಹ ಮಾಡಿಸಿಕೊಂಡು ಅಧಿಕಾರದ ದರ್ಪ ಮೆರೆದಿದ್ದಾರೆ. ಪೊಲೀಸ್ ಇಲಾಖೆಯ ಬಾರ್ಬರ್ ಗಳು ಅಧಿಕಾರಿಗಳ ಹಾಗೂ ಸಿಬ್ಬಂದಿಯ ಹೇರ್ ಕಟ್ಟಿಂಗ್ ಮಾತ್ರ ಮಾಡಬೇಕು. ಶಿಸ್ತು ಪಾಲಿಸುವ ಹಿನ್ನೆಲೆಯಲ್ಲಿ ಅವರವರೇ ಸೇವಿಂಗ್ ಮಾಡಿಕೊಳ್ಳಬೇಕು ಅನ್ನೋ ನಿಯಮವಿದೆ. ಆದ್ರೆ ಹೆಡ್ ಕಾನ್ಸ್ ಟೇಬಲ್ ಹನುಮಂತಪ್ಪ ತಮ್ಮ ಅಧಿಕಾರವನ್ನ ದುರ್ಬಳಕೆ ಮಾಡಿಕೊಂಡು ದೋಬಿ ಹಾಗೂ ಬಾರ್ಬರ್ ರಿಂದ ತಮ್ಮ ಸೇವೆ ಮಾಡಿಸಿಕೊಳ್ಳುತ್ತಿರುವುದು ಇದೀಗ ಬಯಲಾಗಿದೆ.
ಈ ಕುರಿತು ಕೊಪ್ಪಳದ ಮುನಿರಾಬಾದ್ ಕೆಸ್‍ಆರ್ ಪಿ ಹಾಗೂ ತರಬೇತಿ ಶಾಲೆಯ ಪಿನ್ಸಿಪಾಲ್ ರಾಮಕೃಷ್ಣ ಮುದ್ದೇಪಾಲರವರಿಗೆ ದೂರು ನೀಡಿದ್ರೂ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿರುವುದು ಕೆಳಮಟ್ಟದ ಸಿಬ್ಬಂದಿಯ ಸಂಕಷ್ಟ ಕೇಳೋರು ಯಾರು ಎನ್ನುವಂತಾಗಿದೆ. ಇನ್ನಾದ್ರೂ ರಾಜ್ಯ ಗೃಹ ಸಚಿವರಾದ ಎಂಬಿ ಪಾಟೀಲರು ಹಾಗೂ ಕೆಎಸ್‍ಆರ್ ಪಿ ಎಡಿಐಜಿ ಭಾಸ್ಕರರಾವ್ ಸಾಹೇಬರಾದ್ರೂ ಈ ಬಗ್ಗೆ ಗಮನ ಹರಿಸಿ ಕಳೆಮಟ್ಟದ ಸಿಬ್ಬಂದಿಯನ್ನು ಜೀತದಾಳುಗಳಂತೆ ಕಾಣೋದನ್ನ ತಡೆಯಬೇಕಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv