ಕೋಲಾರ: ಶನಿವಾರ ವಿಶ್ವ ಸೈಕಲ್ ದಿನಾಚರಣೆಯಾಗಿದ್ದು (World Bicycle Day) , ಅಪರೂಪದ ಸೈಕಲ್‌ಗಳನ್ನು ಸಂಗ್ರಹಿಸುವ ಪೊಲೀಸ್ ಅಧಿಕಾರಿಯೊಬ್ಬರು ಸಂಗ್ರಹ ಮಾಡಿದ ಸೈಕಲ್‌ಗಳ ಫೋಟೋವನ್ನು ಹಂಚಿಕೊಳ್ಳುವ ಮೂಲಕ ವಿಭಿನ್ನ ರೀತಿಯಲ್ಲಿ ಶುಭಾಶಯ (Wish) ತಿಳಿಸಿದ್ದಾರೆ.
ಹಣವಂತರು ಶ್ರೀಮಂತರ ಹಳೇಯ ಕಾರುಗಳನ್ನು ಸಂಗ್ರಹ ಮಾಡುವಂತೆ ಕೋಲಾರದ (Kolar) ಡಿಎಆರ್ ಎಎಸ್‌ಐ ಬಾಬಣ್ಣ ಎಂದೆ ಕರೆಯಲ್ಪಡುವ ಪೊಲೀಸ್ ಅಧಿಕಾರಿ (Police Officer) ಹವ್ಯಾಸ (Hobby) ಎಂಬಂತೆ ವಿಶಿಷ್ಟ ಸೈಕಲ್‌ಗಳನ್ನು ಸಂಗ್ರಹ ಮಾಡಿದ್ದಾರೆ. ಒಬ್ಬೊಬ್ಬರಿಗೆ ಒಂದೊಂದು ಹವ್ಯಾಸಗಳು ಇರುವುದು ಸಹಜ. ಆದರೆ ಇವರಿಗೆ ಹಳೇಯ ಹಾಗೂ ವಿಭಿನ್ನ ಸೈಕಲ್‌ಗಳನ್ನು ಸಂಗ್ರಹ ಮಾಡುವುದು ಹವ್ಯಾಸವಾಗಿದೆ. ಇದನ್ನೂ ಓದಿ: ಒಡಿಶಾ ಸರ್ಕಾರದ ಜೊತೆ ಸಂಪರ್ಕದಲ್ಲಿದ್ದೇವೆ: ಸಿಎಂ ಸಿದ್ದರಾಮಯ್ಯ
Advertisement
Advertisement
ಕೋಲಾರ ಜಿಲ್ಲಾ ಪೊಲೀಸರಲ್ಲಿ ಫೋಟೋಗ್ರಾಫರ್ ಆಗಿರುವ ಎಎಸ್‌ಐ ಸುರೇಂದ್ರ ಬಾಬು ಅವರನ್ನು ಎಲ್ಲರೂ ಪ್ರೀತಿಯಿಂದ ಬಾಬಣ್ಣ ಎಂದೇ ಕರೆಯುತ್ತಾರೆ. ಬಡವರ ಹಾಗೂ ಮಧ್ಯಮ ವರ್ಗದ ರಥವಾಗಿದ್ದ ಹಳೇಯ ಬೈಸಿಕಲ್ ಸಂಗ್ರಹ ಮಾಡುವುದು ಇವರ ಹವ್ಯಾಸವಾಗಿದೆ. ಇವರು ಅತ್ಯಮೂಲ್ಯ ಹಳೇಯ ಸೈಕಲ್‌ಗಳು, ಭಾರತ್ ರಾಬಿನ್ ಹುಡ್, ಇಂಗ್ಲೆಂಡ್ ರಾಬಿನ್ ಹುಡ್, ಭಾರತ ರ‍್ಯಾಲಿ, ಇಂಗ್ಲೆಂಡ್ ರ‍್ಯಾಲಿ, ಬಿಎಸ್‌ಎ ಮತ್ತು ಅಟ್ಲಾಸ್ ಒಂದಕ್ಕಿಂತ ಒಂದು ಹೆಚ್ಚು ಎಂಬಂತೆ ಬೈಸಿಕಲ್‌ಗಳನ್ನು ಸಂಗ್ರಹ ಮಾಡಿದ್ದಾರೆ. ಇದನ್ನೂ ಓದಿ: ಎಲ್ಲರಿಗೂ ಎಐ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಅನ್ನೋ ಆಲೋಚನೆ ಬೇಡ: ಹೆಚ್.ಆರ್.ರಂಗನಾಥ್
Advertisement
Advertisement
ಸುಮಾರು 40 ರಿಂದ 90ರ ದಶಕದ ಸೈಕಲ್‌ಗಳು ಇವರ ಬಳಿಯಿದ್ದು, ಇವುಗಳನ್ನು ಕಂಡಾಗ ಹಳಬರಿಗಂತೂ ತಾವು ಸೈಕಲ್ ಸವಾರಿ ಮಾಡಿದ ನೆನಪುಗಳು ಮರುಕಳಿಸುವುದು ಗ್ಯಾರಂಟಿ ಎಂದರೆ ಸುಳ್ಳಾಗಲಾರದು. ಇದನ್ನೂ ಓದಿ: ಒಡಿಶಾ ರೈಲು ದುರಂತ: ಉನ್ನತ ಮಟ್ಟದ ತನಿಖೆಗೆ ಲಾಲೂ ಪ್ರಸಾದ್ ಯಾದವ್ ಒತ್ತಾಯ