ಇಸ್ಲಾಮಾಬಾದ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಪಾಕ್ ಪಟ್ಟಣದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ರೊಬ್ಬರು ಬಾಲಿವುಡ್ ನಟ ಗೋವಿಂದ್ ಅವರ ಹಾಡಿಗೆ ಮಹಿಳೆಯೊಂದಿಗೆ ಸ್ಟೆಪ್ಸ್ ಹಾಕಿದ್ದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಪಾಕ್ ಪಟ್ಟಣದ ಕಲ್ಯಾಣ ಪೊಲೀಸ್ ಠಾಣೆಯ ಅರ್ಷದ್ ಅಮಾನತುಗೊಂಡ ಪೊಲೀಸ್ ಇನ್ಸ್‌ಪೆಕ್ಟರ್. ಇವರು ಓರ್ವ ಮಹಿಳೆಯೊಂದಿಗೆ ಬಾಲಿವುಡ್ ಖ್ಯಾತ ನಟ ಗೋವಿಂದ್ ಅಭಿನಯದ ‘ಬಡೇ ಮಿಂಯಾ, ಚೋಟೆ ಮಿಂಯಾ’ ಸಿನಿಮಾದ `ಕೀಸಿ ಡಿಸ್ಕೋ ಮೇ ಜಾಯೇಂ’ ಹಾಡಿಗೆ ಅರ್ಷದ್ ಮಹಿಳೆ ಜೊತೆ ಹೆಜ್ಜೆ ಹಾಕಿದ್ದರು. ಎಸ್‍ಐ ಸ್ಟೆಪ್ಸ್ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿ ಮಾಡಿತ್ತು. ಅಲ್ಲದೇ ಅರ್ಷದ್ ಪೊಲೀಸ್ ಸಮವಸ್ತ್ರದಲ್ಲೇ ನೃತ್ಯ ಮಾಡಿದ್ದರು.
ಅರ್ಷದ್ ಜೊತೆಗೆ ಹೆಜ್ಜೆ ಹಾಕಿರುವ ಮಹಿಳೆಯನ್ನು ಅವರ ಗೆಳತಿ ಎಂದು ಹೇಳಲಾಗುತ್ತಿದೆ. ಪೊಲೀಸ್ ಸಮವಸ್ತ್ರದಲ್ಲೇ ಮಹಿಳೆಯೊಂದಿಗೆ ಕುಣಿಯುತ್ತಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಪಾಕ್‍ಪಟ್ಟಣದ ಪೊಲೀಸ್ ಅಧಿಕಾರಿ ಮರಿಯಾ ಮಹಮ್ಮದ್ ಅರ್ಷದ್ ಅವರನ್ನು ಸೇವೆಯಿಂದ ವಜಾಗೊಳಿಸಿ, ತನಿಖೆಗೆ ಆದೇಶಿಸಿದ್ದಾರೆ.
ಇದೇ ಅರ್ಷದ್ ಬಾಲಿವುಡ್ ನ ಜಾನ್ ಅಬ್ರಾಹಂ ಲೀಡ್ ರೋಲ್ ನಲ್ಲಿ ಅಭಿನಯದ ‘ಶೂಟೌಟ್ ಅಟ್ ವಡಾಲಾ’ ಚಿತ್ರದ ನಟ ಅನಿಲ್ ಕಪೂರ್ ಅವರ ಧ್ವನಿಯನ್ನು ಅನುಕರಣೆ ಮಾಡಿ ಬಿಡುಗಡೆಯನ್ನು ಸಹ ಮಾಡಿದ್ದರು. ಈ ವಿಡಿಯೋ ಸಹ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv