Connect with us

International

ಸೆಕ್ಸ್ ವೇಳೆ ಗೆಳತಿಗೆ ತಿಳಿಯದೇ ಕಾಂಡೋಮ್ ಬಿಚ್ಚಿಟ್ಟು ಜೈಲು ಸೇರಿದ ಪೊಲೀಸ್!

Published

on

ಬರ್ಲಿನ್: ಸೆಕ್ಸ್ ಮಾಡುವ ವೇಳೆ ಗೆಳತಿಗೆ ತಿಳಿಯದೇ ಕಾಂಡೋಮ್ ಬಿಚ್ಚಿಟ್ಟ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜರ್ಮನಿ ಪೊಲೀಸ್ ಅಧಿಕಾರಿಯೊರ್ವ ಜೈಲು ಶಿಕ್ಷೆಗೆ ಒಳಗಾಗಿದ್ದಾನೆ.

ಈ ಕುರಿತು ಪೊಲೀಸ್ ಅಧಿಕಾರಿಯ ಗೆಳತಿ ದೂರು ನೀಡಿದ್ದು, ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯ 8 ತಿಂಗಳು ಜೈಲು ಶಿಕ್ಷೆ ಹಾಗೂ 3 ಸಾವಿರ ಯುರೋ(ಅಂದಾಜು 2.39 ಲಕ್ಷ ರೂ.) ದಂಡವನ್ನು ವಿಧಿಸಿದೆ. ಅಲ್ಲದೇ 96 ಯುರೋಗಳನ್ನು(ಅಂದಾಜು 7500 ರೂ.)ಮಹಿಳೆಯ ಆರೋಗ್ಯ ಪರೀಕ್ಷೆಗೆ ಪಾವತಿ ಮಾಡುವಂತೆ ಸೂಚನೆ ನೀಡಿದೆ.

ಜರ್ಮನಿಯಲ್ಲಿ ಇಂತಹ ಪ್ರಕರಣ ಇದೇ ಮೊದಲ ಬಾರಿಗೆ ದಾಖಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದು, ಇಂತಹದ್ದೇ 2 ಪ್ರಕರಣಗಳು ಈ ಹಿಂದೆ ಸ್ವಿಜರ್ಲೆಂಡ್ ಹಾಗೂ ಕೆನಡಾದಲ್ಲಿ ವರದಿಯಾಗಿತ್ತು. ಇವುಗಳನ್ನು ರೇಪ್ ಹಾಗೂ ಲೈಂಗಿಕ ಕಿರುಕುಳ ಆರೋಪದ ಅಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿತ್ತು ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಯುವತಿ ಕಾಂಡೋಮ್ ಬಳಕೆ ಮಾಡಿ ಲೈಂಗಿಕ ಕ್ರಿಯೆ ನಡೆಸಲು ಅನುಮತಿ ನೀಡಿದ್ದಳು. ಈ ವೇಳೆ ಯುವತಿಗೆ ತಿಳಿಯದಂತೆ ಆತ ಕಾಂಡೋಮ್ ಬಿಚ್ಚಿಟ್ಟು ಲೈಂಗಿಕ ಕ್ರಿಯೆಗೆ ಮುಂದಾಗಿದ್ದ. ಇದನ್ನು ತಿಳಿದ ಯುವತಿ ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದಳು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *