ಮೈಸೂರು: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಕಾನೂನು-ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮೈಸೂರು ನಗರ ಪೊಲೀಸ್ ಆಯುಕ್ತರು ಕೆಲವು ನಿಯಮಗಳನ್ನು ಜಾರಿಗೆ ತಂದಿದ್ದಾರೆ.
ಸಾರ್ವಜನಿಕರು, ಹೋಟೆಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್ ಹಾಗೂ ಪಾರ್ಟಿ ಆಯೋಜಿಸುವ ಸಂಘ ಸಂಸ್ಥೆಗಳಿಗೆ ಪೊಲೀಸ್ ಆಯುಕ್ತರು ಕೆಲ ಕಟ್ಟು ನಿಟ್ಟಿನ ಸೂಚನೆಯನ್ನು ನೀಡಿದ್ದಾರೆ.
Advertisement
Advertisement
ಪೊಲೀಸ್ ಆಯುಕ್ತರು ನೀಡಿರುವ ಸೂಚನೆ:
ಹೊಸ ವರ್ಷದ ದಿನ ಮಧ್ಯರಾತ್ರಿ 1 ಗಂಟೆಯೊಳಗೆ ಕಾರ್ಯಕ್ರಮವನ್ನು ಮುಗಿಸಬೇಕು. ಒಂದು ವೇಳೆ ರೆಸ್ಟೋರೆಂಟ್, ಬಾರ್‌ಗಳು ಹೆಚ್ಚುವರಿ ಸಮಯದವರೆಗೆ ಕಾರ್ಯಕ್ರಮ ನಡೆಸಬೇಕಾದರೆ, ಅವರು ಪೊಲೀಸ್ ಇಲಾಖೆ ಅನುಮತಿ ಪಡೆಯಬೇಕು. ಇನ್ನೂ ರೆಸ್ಟೋರೆಂಟ್ ಮತ್ತು ಬಾರ್‌ಗಳಲ್ಲಿ ಅಶ್ಲೀಲ, ಅರೆ ಬೆತ್ತಲೆ ಮತ್ತು ಬೆತ್ತಲೆ ನೃತ್ಯವನ್ನು ನಿಷೇಧಿಸಲಾಗಿದೆ.
Advertisement
ಧ್ವನಿವರ್ಧಕ ಅಳವಡಿಸಲು ಪೊಲೀಸರ ಅನುಮತಿ ಕಡ್ಡಾಯ. ಮಹಿಳೆಯರು ಮತ್ತು ಯುವತಿಯರಿಗೆ ಬಲವಂತವಾಗಿ ಹೊಸ ವರ್ಷದ ಶುಭಶಯವನ್ನು ಕೋರಬಾರದು. ಮುಖ್ಯವಾಗಿ ಮಧ್ಯಪಾನ ಮಾಡಿ ವಾಹನ ಚಾಲನೆ ಮಾಡಬಾರದು. ಇನ್ನೂ ಪಟಾಕಿ ಹಾಗೂ ಸಿಡಿ ಮದ್ದು ಸಿಡಿಸಿ ಸಾರ್ವಜನಿಕರಿಗೆ ತೊಂದರೆ ಕೊಡಕೂಡದು ಎಂದು ಪೊಲೀಸರು ಸೂಚನೆ ಕೊಟ್ಟಿದ್ದಾರೆ.