– ಇದು ಕಾರ್ಯಕರ್ತರ ಗೆಲುವು ಎಂದ ಕಟೀಲ್
– ಬೆಳಗ್ಗೆಯಿಂದ ಪೂಂಜಾ ನಿವಾಸದಲ್ಲಿ ಭಾರೀ ಹೈಡ್ರಾಮಾ
ಮಂಗಳೂರು: ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ (Beltangady BJP MLA Harish Poonja) ಅವರನ್ನು ಬಂಧನ ಮಾಡದೇ ಇರಲು ಪೊಲೀಸರು ನಿರ್ಧರಿಸಿದ್ದಾರೆ. ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಶಾಸಕರಿಗೆ ತಿಳಿಸಿ ತೆರಳಿದ್ದಾರೆ.
Advertisement
ಸಂಜೆ ಮಾಧ್ಯಮಗಳ ಜೊತೆ ಮಾತನಾಡಿದ ಹರೀಶ್ ಪೂಂಜಾ, ಅಕ್ರಮ ಕಲ್ಲಿನ ಕೋರೆ ಪ್ರಕರಣದಲ್ಲಿ ಬಿಜೆಪಿ ಯುವ ಮೋರ್ಚಾ (BJP Yuva Morcha) ಅಧ್ಯಕ್ಷ ಶಶಿಧರ್ ಶೆಟ್ಟಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೂ ಶಶಿಧರ್ ಶೆಟ್ಟಿಗೂ ಯಾವುದೇ ಸಂಬಂಧವಿಲ್ಲ. ಉದ್ದೇಶಪೂರ್ವಕವಾಗಿ ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ಈ ಕಾರಣಕ್ಕೆ ನಾನು ಪ್ರತಿಭಟಿಸಿದ್ದೆ ಎಂದು ತಿಳಿಸಿದರು.
Advertisement
ಅಂದು ಅಧಿಕಾರಕ್ಕಾಗಿ ಸಿದ್ದರಾಮಯ್ಯನವರು ಬಿದರಿ ಅವರ ಕಾಲರ್ ಪಟ್ಟಿ ಹಿಡಿದಿದ್ದರು. ನಾನು ಅಧಿಕಾರಕ್ಕೆ ಪೊಲೀಸರ ವಿರುದ್ಧ ಮಾತನಾಡಿಲ್ಲ. ಕಾರ್ಯಕರ್ತನ ಪರವಾಗಿ ನಾನು ಮಾತನಾಡಿದ್ದೇನೆ. ಅಮಾಯಕನನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಾನೆ ಎಂಬ ಕಾರಣಕ್ಕೆ ಕೇಸ್ ಹಾಕಲಾಗಿದೆ. ಕಾಂಗ್ರೆಸ್‌ನ ದ್ವೇಷದ ರಾಜಕಾರಣವನ್ನು ನಾವು ಸಹಿಸುವುದಿಲ್ಲ ಎಂದು ಹೇಳಿದರು.
Advertisement
Advertisement
ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ದಕ್ಷಿಣ ಕನ್ನಡದ ಎಲ್ಲಾ ಬಿಜೆಪಿ ಶಾಸಕರು, ಹಾಲಿ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಇಲ್ಲಿಗೆ ಆಗಮಿಸಿದ್ದಾರೆ. ನೋಟಿಸ್ ನೀಡದೇ ಬಂಧನ ಮಾಡುವ ಪ್ರಯತ್ನ ನಡೆದಿತ್ತು. ಈಗ ನೋಟಿಸ್ ನೀಡಿ ಹೋಗಿದ್ದಾರೆ. ಮೊದಲ ಹಂತದ ಗೆಲುವು ಕಾರ್ಯಕರ್ಯರಿಗೆ ಮತ್ತು ಪೂಂಜಾ ಅವರಿಗೆ ಸಿಕ್ಕಿದೆ ಎಂದರು.
ಇವತ್ತು ಬೆಳಗ್ಗೆಯೇ ಹರೀಶ್ ಪೂಂಜಾ ಬಂಧಿಸಲು ಪೊಲೀಸರು ಅವರ ಗರ್ಡಾಡಿಯ ಮನೆಗೆ ಬಂದಿದ್ದರು. ಹರೀಶ್ ಪೂಂಜಾ ಮಾತ್ರ ನಾನು ಬರುವುದಿಲ್ಲ ಎಂದು ಹೇಳಿದರು. ಹರೀಶ್ ಪೂಂಜಾ ಮಾತ್ರ ನಾನು ಬರುವುದಿಲ್ಲ ಎಂದು ಹೇಳಿದರು. ವಿಷಯ ತಿಳಿದ ಪೂಂಜಾ ಬೆಂಬಲಿಗರು ಭಾರೀ ಸಂಖ್ಯೆಯಲ್ಲಿ ಸೇರಿದರು.
ಪೊಲೀಸರು ಮತ್ತು ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆಯುತ್ತಿದ್ದಂತೆ ಹರೀಶ್ ಪೂಂಜಾ ಮನೆಗೆ ಹೆಚ್ಚುವರಿ ಪೋಲಿಸರು ಆಗಮಿಸಿದರು. ಪುತ್ತೂರು ಡಿವೈಎಸ್ ಪಿ ಅರುಣ್ ನಾಗೇಗೌಡ ನೇತೃತ್ವದಲ್ಲಿ 150 ಕ್ಕೂ ಅಧಿಕ ಪೊಲೀಸ ಆಗಮಿಸಿದರು. ಆದರೆ ಪೊಲಿಸರನ್ನು ಮನೆಯ ಒಳಗೆ ಹೋಗಲು ಕಾರ್ಯಕರ್ತರು ಬಿಡಲಿಲ್ಲ.
ಈ ಸಂದರ್ಭದಲ್ಲಿ ಡಿವೈಎಸ್‌ಪಿ ಹಾಗೂ ಸರ್ಕಲ್ ಪೋಲಿಸ್ ಅಧಿಕಾರಿಗಳು ಹರೀಶ್ ಪೂಂಜಾ ಜೊತೆ ಮಾತುಕತೆ ನಡೆಸಿದರು. ವಕೀಲರು ಸ್ಥಳಕ್ಕೆ ಆಗಮಿಸಿ ನೋಟಿಸ್ ನೀಡದೇ ಬಂಧನ ಮಾಡುವುದು ಎಷ್ಟು ಸರಿ. ಈ ಪ್ರಕರಣಕ್ಕೆ ಜಾಮೀನು ರಹಿತ ಸೆಕ್ಷನ್ ಸೇರಿಸಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಬೆಳಗ್ಗೆಯಿಂದ ಸಂಜೆಯವರೆಗೂ ಭಾರೀ ಹೈಡ್ರಾಮಾ ನಡೆದು ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿ ಬಂಧನ ಮಾಡದೇ ತೆರಳಿದರು.
ಶಾಸಕರು ಏನೋ ಉದ್ವೇಗದಿಂದ ಮಾತಾಡಿದ್ದಾರೆ. ಆದರೆ ದುರುದ್ದೇಶದಿಂದ ಕೂಡಿಲ್ಲ. ಇದನ್ನೇ ನೆಪ ಮಾಡಿಕೊಂಡು ಶಾಸಕರ ಬಂಧನಕ್ಕೆ ಮುಂದಾಗಿರುವುದು ಸರಿಯಲ್ಲ. ಮುಂದೆ ಆಗುವ ಅನಾಹುತಗಳಿಗೆ ಪೊಲೀಸರೇ ಹೊಣೆಯಾಗುತ್ತಾರೆ ಎಂದು ಎಚ್ಚರಿಕೆ ನೀಡಿದ್ದರು.
ಹರೀಶ್ ಪೂಂಜಾ ಅವರನ್ನು ಬಂಧನ ಮಾಡಿದರೆ ನಾಳೆ ದಕ್ಷಿಣ ಕನ್ನಡ ಬಂದ್‌ಗೆ ಕರೆ ನೀಡಲಾಗುವುದು ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದರು.
ಏನಿದು ಪ್ರಕರಣ?
ಅನುಮತಿ ಪಡೆಯದೇ ಪ್ರತಿಭಟನೆ (Protest) ನಡೆಸಿ ಬೆಳ್ತಂಗಡಿ ಪೊಲೀಸರಿಗೆ ಬೆದರಿಕೆ ಅರೋಪದ ಮೇಲೆ ಹರೀಶ್ ಪೂಂಜಾ ವಿರುದ್ಧ ಕೇಸ್ ದಾಖಲಾಗಿತ್ತು. ಅರೆಸ್ಟ್ ಆಗಿರುವ ಕಾರ್ಯಕರ್ತರಿಗಾಗಿ ಪೊಲೀಸರ ಕಾಲರ್ ಹಿಡಿಯಲು ಸಿದ್ದ ಬೆಂಗಳೂರಿನ ಡಿ.ಜೆ ಹಳ್ಳಿ, ಕೆ.ಜೆ ಹಳ್ಳಿಯ ಪೊಲೀಸ್ ಠಾಣೆಗೆ ಆದ ಗತಿಯನ್ನು ಬೆಳ್ತಂಗಡಿ ಠಾಣೆಗೂ ಕಾಣಿಸ್ತೇನೆ ಎಂದು ಹರೀಶ್ ಪೂಂಜಾ ಬೆದರಿಕೆ ಹಾಕಿದ್ದರು. ಈ ಸಂಬಂಧ ಬೆಳ್ತಂಗಡಿ ಬಿಜೆಪಿ ಶಾಸಕರ ವಿರುದ್ಧ ಐಪಿಸಿ 143, 147, 341, 504, 506 ಜೊತೆಗೆ 149 ಸೆಕ್ಷನ್‌ಗಳ ಅಡಿ ಒಟ್ಟು ಎರಡು ಕೇಸ್ ದಾಖಲಾಗಿತ್ತು.