ಬೆಂಗಳೂರು: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ನಿಯಂತ್ರಿಸೋ ಸಲುವಾಗಿ ಪೊಲೀಸ್ ಇಲಾಖೆ ಶಾಲೆಗಳಿಗೆ ಸುತ್ತೋಲೆಯೊಂದನ್ನ ನೀಡಿದೆ.
ಶಾಲೆಗಳ ಬಾತ್‍ರೂಂ, ವಾಷ್‍ರೂಂಗಳಲ್ಲೂ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಬಾತ್‍ರೂಂನಲ್ಲಿನ ದೃಶ್ಯಗಳು ಡಿವಿಆರ್‍ನಲ್ಲಿ ರೆಕಾರ್ಡ್ ಆಗಬೇಕು ಎಂದು ಬೆಂಗಳೂರು ಪೊಲೀಸ್ ಇಲಾಖೆಯಿಂದ ಶಾಲೆಗಳಿಗೆ ಸುತ್ತೋಲೆ ಹೋಗಿದೆ.
Advertisement
Advertisement
ಬೆಂಗಳೂರು ನಗರದ 12 ಖಾಸಗಿ ಶಾಲೆಗಳಿಗೆ ಪೊಲೀಸ್ ಇನ್ಸ್ ಪೆಕ್ಟರ್‍ಗಳಿಂದ ಹೀಗೊಂದು ಸುತ್ತೋಲೆ ಹೋಗಿದೆ. ಬಾತ್‍ರೂಂಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕೆಂಬ ಪೊಲೀಸ್ ಇಲಾಖೆಯ ಈ ಸುತ್ತೋಲೆ ಬಗ್ಗೆ ಖಾಸಗಿ ಶಾಲೆಗಳ ಒಕ್ಕೂಟದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
Advertisement
Advertisement
ಕೆಪಿ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ಆಗಸ್ಟ್ 30ರ ರಾತ್ರಿ ಬಾಲಕಿಯ ಮೇಲೆ ಅತ್ಯಾಚಾರ ನಡೆದಿತ್ತು. 8 ವರ್ಷದ ಬಾಲಕಿಯ ಮೇಲೆ 13 ವರ್ಷದ ಬಾಲಕ ಬಾತ್ ರೂಮ್‍ನಲ್ಲಿ ಅತ್ಯಾಚಾರ ನಡೆಸಿದ್ದ. ಹುಡುಗಿಯ ಮೇಲೆ ದೌರ್ಜನ್ಯ ನಡೆಯುವಾಗ ಹೊರಗಡೆ ಬಾಲಕನೊಬ್ಬ ಕಾವಲು ಕಾಯ್ತಿದ್ದ. ಹೀಗಾಗಿ ಎಲ್ಲಾ ಶಾಲೆಯ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ್ದ ಪೊಲೀಸರು ಶಾಲೆಯಲ್ಲಿ ಕಡ್ಡಾಯವಾಗಿ ಸಿಸಿಟಿವಿ ಹಾಕುವಂತೆ ಹೇಳಿದ್ದಾರೆ. ಮಕ್ಕಳನ್ನು ಯಾರು ಟಾಯ್ಲೆಟ್ ಒಳಗೆ ಕರೆದುಕೊಂಡು ಹೋಗ್ತಾರೆ ಅನ್ನೋ ದೃಷ್ಟಿಯಿಂದ ಟಾಯ್ಲೆಟ್‍ನಲ್ಲೂ ಸಿಸಿಟಿವಿ ಹಾಕಲು ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಟಾಯ್ಲೆಟ್‍ನಲ್ಲಿ 2ನೇ ಕ್ಲಾಸ್ ಬಾಲಕನನ್ನು ಕೊಂದಿದ್ದು ಹೇಗೆ: ಶಾಕಿಂಗ್ ಸಂಗತಿ ಬಾಯ್ಬಿಟ್ಟ ಕಂಡಕ್ಟರ್
ಇದನ್ನೂ ಓದಿ: 2ನೇ ಕ್ಲಾಸ್ ಬಾಲಕನ ಕೊಲೆ ಪ್ರಕರಣದಲ್ಲಿ ಮತ್ತಷ್ಟು ಅನುಮಾನ- ಟಾಯ್ಲೆಟ್‍ನಲ್ಲಿದ್ದ ಕಿಟಕಿಗೆ ಕಂಬಿ ಇರ್ಲಿಲ್ಲ