ದಾವಣಗೆರೆ: ನಟ ಶಂಕರ್ ನಾಗ್ ರೀತಿ ನಟಿಸಿ ದಾವಣಗೆರೆ ಪೊಲೀಸ್ ಸಿಬ್ಬಂದಿ ಯುವಕರಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ದಾವಣಗೆರೆಯ ವಿದ್ಯಾನಗರದ ರಾಘವೇಂದ್ರ, ರಾಜೇಶ್ ಹಾಗೂ ಪರಶುರಾಮ್ ಎಂಬವರಿಗೆ ಬ್ಯಾಗೊಂದು ಸಿಕ್ಕಿದೆ. ಯುವಕರು ಆ ಬ್ಯಾಗ್ ತೆರೆದು ನೋಡದೆ ಪೊಲೀಸ್ ಠಾಣೆಗೆ ಬಂದು ಪೊಲೀಸರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದರು. ಹಾಗಾಗಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಸ್ಟೇಬಲ್ ಕುಮಾರ್ ನಾಯ್ಕ್ ಮೂರು ಜನ ಯುವಕರಿಗೆ ವಿಭಿನ್ನ ರೀತಿಯಲ್ಲಿ ಪ್ರಶಂಸಿದ್ದಾರೆ.
ಆಂಧ್ರ ಪ್ರದೇಶದ ಅನಂತಪುರಂನ ಶ್ರೀನಾಥ್, ಅಂಜನಾ ದಂಪತಿ ಆಟೋದಲ್ಲಿ ಬರುವಾಗ ತಮ್ಮ ಬ್ಯಾಗನ್ನು ಕಳೆದುಕೊಂಡಿದ್ದಾರೆ. ಬ್ಯಾಗಿನಲ್ಲಿ 1,30,000 ಮೌಲ್ಯದ 30 ಗ್ರಾಂ ಬಂಗಾರದ ಸರ ಹಾಗೂ 2,000 ನಗದು ಇತ್ತು. ಬಳಿಕ ದಂಪತಿ ಬ್ಯಾಗ್ ಕಳೆದಿದೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಯುವಕರು ಪೊಲೀಸರಿಗೆ ಬ್ಯಾಗ್ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದನ್ನು ಕಂಡ ದಂಪತಿ ಭಾವುಕರಾದರು. ಅಲ್ಲದೆ ಯುವಕರ ಕಾರ್ಯಕ್ಕೆ ವಿದ್ಯಾನಗರ ಪೊಲೀಸರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸದ್ಯ ಹೆಡ್ ಕಾನ್ಸ್ ಸ್ಟೇಬಲ್ ಕುಮಾರ್ ನಾಯ್ಕ್ ನಟನೆಗೆ ಅಲ್ಲಿದ್ದ ಜನರು ಫುಲ್ ಫಿದಾ ಆಗಿದ್ದಾರೆ.