ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯಿಂದ ಪರಾರಿಯಾಗಿದ್ದ ವಿಚಾರಣಾಧೀನ ಕೈದಿಯನ್ನು ಪೊಲೀಸರು ತುಮಕೂರಿನಲ್ಲಿ(Tumakuru) ವಶಕ್ಕೆ ಪಡೆದಿದ್ದಾರೆ.
ಕೈದಿ ಚಂದ್ರಶೇಖರ್ ವಿಕ್ಟೋರಿಯಾ ಟ್ರಾಮಾ ಸೆಂಟರ್‌ನಿಂದ ತಪ್ಪಿಸಿಕೊಂಡಿದ್ದ. ಕೈದಿ ಹುಡುಕಾಟದಲ್ಲಿದ್ದ ಪೊಲೀಸರಿಗೆ ಭಾನುವಾರ ರಾತ್ರಿ 8.20ರ ಸುಮಾರಿಗೆ ತುಮಕೂರು ಬಸ್ ನಿಲ್ದಾಣದಲ್ಲಿ ಸಿಕ್ಕಿ ಬಿದ್ದಿದ್ದಾನೆ. ಇದನ್ನೂ ಓದಿ: `ಹೌಸ್ ಅರೆಸ್ಟ್’ ಶೋನಲ್ಲಿ ಸೆಕ್ಸ್ ಪೊಸಿಷನ್‌ಗೆ ಒತ್ತಾಯ – ನಟ ಅಜಾಜ್ ಖಾನ್‌ಗೆ ಸಮನ್ಸ್
ವಿವಿ ಪುರಂ ಹಾಗೂ ಜೈಲು ಪೊಲೀಸರು ಕೈದಿಯನ್ನು ಪತ್ತೆ ಹಚ್ಚಿದ್ದು, ಆತನನ್ನು ತುಮಕೂರಿನಿಂದ ಬೆಂಗಳೂರಿಗೆ ಕರೆತಂದರು. ಇದನ್ನೂ ಓದಿ: ಮನೆಗೆ ತಡವಾಗಿ ಬರ್ತಿದ್ದಕ್ಕೆ ಪೋಷಕರಿಂದ ಬುದ್ಧಿವಾದ – ವಿದ್ಯುತ್ ಕಂಬಕ್ಕೆ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ
ಘಟನೆ ಸಂಬಂಧ ವಿವಿ ಪುರಂ ಠಾಣೆಯಲ್ಲಿ(VV Puram Police Station) ಕೇಸ್ ದಾಖಲಾಗಿತ್ತು. ಸದ್ಯ ಕೈದಿ ಚಂದ್ರಶೇಖರ್‌ನನ್ನು ವಿವಿ ಪುರಂ ಠಾಣೆಯಲ್ಲಿರಿಸಲಾಗಿದೆ.