ಕಾರವಾರ: ಖಚಿತ ಮಾಹಿತಿ ಆಧಾರದ ಮೇರೆಗೆ ಮನೆಯೊಂದರಲ್ಲಿ ಸ್ಫೋಟಕ ತಯಾರಿಕೆಗೆ ಬಳಸುತ್ತಿದ್ದ ವಸ್ತುಗಳನ್ನು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಗೋಕರ್ಣ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಂಗಾವಳಿ ಗ್ರಾಮದ ರಜಾಕ್ ಸಾಬ್ ಎಂಬವರ ಮನೆಯಲ್ಲಿ ಸ್ಫೋಟಕ ವಸ್ತುಗಳು ಪತ್ತೆಯಾಗಿದೆ. ಒಟ್ಟು 9 ಕೆ.ಜಿ ರಾಸಾಯನಿಕ ವಸ್ತುಗಳು ಕಂಡುಬಂದಿದ್ದು, ಅದರಲ್ಲಿ 2 ಕೆ.ಜಿ ಲೆಡ್ ಮತ್ತು 5 ಕೆ.ಜಿ ಪಾಸ್ಪರಸ್ ಹಾಗೂ 2 ಕೆ.ಜಿ ಸೆಲ್ಫರ್ ದೊರೆತಿವೆ. ಮನೆ ಮಾಲೀಕ ರಜಾಕ್ ಸಾಬ್ ಈಗ ತಲೆಮರೆಸಿಕೊಂಡಿದ್ದು ಪೊಲೀಸರು ಆತನ ಬಲೆ ಬೀಸಿದ್ದಾರೆ.
Advertisement
Advertisement
ಇಷ್ಟು ದೊಡ್ಡ ಪ್ರಮಾಣದಲ್ಲಿ ಸ್ಫೋಟಕಕ್ಕೆ ಬಳಸುವ ವಸ್ತುಗಳನ್ನು ಸಂಗ್ರಹಿಸಿಟ್ಟಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಹಿಂದೆ ಭಟ್ಕಳದ ಶಾಸಕರಾಗಿದ್ದ ಮಂಕಾಳು ವೈದ್ಯರನ್ನು ಹತ್ಯೆ ಮಾಡಲು ಇದೇ ರೀತಿಯ ಸ್ಫೋಟಕವನ್ನು ಬಳಸಲಾಗಿತ್ತು. ಅದೃಷ್ಟವಶಾತ್ ಮಂಕಾಳು ವೈದ್ಯರು ಯಾವುದೇ ತೊಂದರೆಗಳಾಗದೇ ಬದುಕುಳಿದಿದ್ದಾರೆ. ರೇಮಂಡ್ ಮಿರಾಂಡ ಎಂಬಾತ ಮಂಕಾಳು ವೈದ್ಯರ ಮೇಲೆ ಸುಮಾರು ರಾತ್ರಿ 12.30 ರ ವೇಳೆಗೆ ಬಾಂಬ್ ಎಸೆಯಲು ಹೋಗಿ ಕೊನೆಗೆ ಆರೋಪಿಯ ಕೈಯಲ್ಲೇ ಬಾಂಬ್ ಸ್ಟೋಟಗೊಂಡಿತ್ತು.
Advertisement
ಈಗ ಅದೇ ಮಾದರಿಯಲ್ಲಿ ಚೀಲದ ತುಂಬ ಸ್ಫೋಟಕ ದೊರೆತಿದ್ದು, ಅದು ಹಲವು ಅನುಮಾನಗಳನ್ನು ಸೃಷ್ಟಿಸುತ್ತಿವೆ. ವಿದ್ವಂಸಕ ಕೃತ್ಯಕ್ಕಾಗಿ ಇದನ್ನು ಬಳಕೆ ಮಾಡಲು ಸಂಗ್ರಹಿಸಲಾಗಿದ್ದಾರೆಯೇ ಅಥವಾ ಕಾಡು ಹಂದಿಗಳ ಭೇಟೆಗಾಗಿ ಸಂಗ್ರಹಿದ್ದಾರೆಯೇ ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv