ಬೆಂಗಳೂರು: ವಿಚಾರಣೆಗೆಂದು ನನ್ನ ಗಂಡನನ್ನ ಠಾಣೆಗೆ ಕರೆಸಿ ಏಕಾಏಕಿ ಬಂಧಿಸಿಟ್ಟು, ಈಗ ಆತನನ್ನು ಬಿಡುಗಡೆಗೊಳಿಸಲು ಪೊಲೀಸರು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಸಂತ್ರಸ್ತ ಮಹಿಳೆಯೊಬ್ಬರು ಗಂಭೀರ ಆರೋಪ ಮಾಡುತ್ತಿದ್ದಾರೆ.
ಬೆಂಗಳೂರು ಹೊರವಲಯ ಬಾಗಲಗುಂಟೆ ಪೊಲೀಸರ ವಿರುದ್ಧ ಈ ಆರೋಪ ಕೇಳಿ ಬಂದಿದ್ದು, ಕಳೆದ ಮೂರು ದಿನಗಳ ಹಿಂದೆ ನಿಮ್ಮ ಮೇಲೆ ದೂರು ಬಂದಿದೆ ವಿಚಾರಣೆ ನಡೆಸಬೇಕು ಎಂದು ಸಂತ್ರಸ್ತೆ ಲಕ್ಷ್ಮೀಯ ಗಂಡ ಮಂಜುನಾಥ್ ಎಂಬವರನ್ನು ಪೊಲೀಸ್ ಠಾಣೆಗೆ ಕರೆಸಿದ್ದರಂತೆ. ವಿಚಾರಣೆಯ ನೆಪವೊಡ್ಡಿ ಬಂಧಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಮರುದಿನ ಪೊಲೀಸ್ ಠಾಣೆಯಲ್ಲಿ ವಿಚಾರಿಸಿದಾಗ ನಿನ್ನ ಗಂಡನನ್ನು ಕಳುಹಿಸಬೇಕೆಂದರೆ ಬರೋಬ್ಬರಿ 25,000 ಹಣ ಕೇಳಿದರಂತೆ ಇಲ್ಲ ಅಂದದಕ್ಕೆ, ಎಷ್ಟಾಗುತ್ತೋ ಅಷ್ಟು ಕೊಟ್ಟು, ಎಲ್ಲಾ ಸೆಟ್ಲು ಮಾಡಿಕೊಂಡು ಹೋಗಿ ಎನ್ನುವುದರೊಂದಿಗೆ, 5,000 ರೂ. ಹಣ ಕೊಡು ಎಂದು ಬೇಡಿಕೆ ಇಟ್ಟಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.
Advertisement
Advertisement
ಠಾಣೆಗೆ ಹೋದ ವೇಳೆ ಮಹಿಳೆ ಎನ್ನುವುದನ್ನು ನೋಡದೆ ಅವಾಚ್ಯ ಶಬ್ಧಗಳಿಂದ ನಿಂದಿನೆ ಮಾಡಿದ್ದಾರೆ. ಅಲ್ಲದೆ ಮೂರು ದಿನಗಳ ನಂತರ ಕೇಳಿದಾಗ, ನಿನ್ನ ಗಂಡನ ಮೇಲೆ ಎಫ್‍ಐಆರ್ ದಾಖಲಿಸಿಕೊಂಡು ಜೈಲಿಗೆ ಕಳಿಸಿದ್ದೇವೆ ಎಂದು ಹೇಳುತ್ತಾರೆ. ಮೂರು ದಿನಗಳಿಂದ ಗಂಡನನ್ನು ಕಾಣದ ಮಹಿಳೆ, ಪೊಲೀಸರು ತೋರಿರುವ ನಡೆಯಿಂದ ಬೇಸತ್ತು ನನ್ನ ಗಂಡನನ್ನು ಕೊಡಿಸಿ ಎಂದು ಅಂಗಲಾಚಿದ್ದಾರೆ.
Advertisement
ಮಂಜುನಾಥನಿಗೆ ದೂರುದಾರೆ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ. ಅವಳು ಈತನನ್ನು ಬಿಟ್ಟು ಮತ್ತೊಬ್ಬನ ಜೊತೆ ಸಂಸಾರ ಮಾಡುವುದಾಗಿ ತಿಳಿಸಿದ್ದು, ಈತ ಅದನ್ನು ನಿರಾಕರಿಸಿದ್ದಾನೆ. ಹೀಗಾಗಿ ದೂರುದಾರೆ ಮಹಿಳೆ ತನ್ನ ಮತ್ತೊಂದು ಹೊಸ ಸಂಬಂಧಕ್ಕೆ ಧಕ್ಕೆ ಉಂಟಾಗಬಾರದು ಎಂದು ಮಂಜುನಾಥನ ವಿರುದ್ಧ ದೂರು ನೀಡಿ ಠಾಣೆಗೆ ಕಳುಹಿಸಿದ್ದಾರೆ ಎನ್ನಲಾಗಿದೆ. ದೂರುದಾರೆ ದೂರು ನೀಡುವ ಮೊದಲು ಮಂಜುನಾಥನಿಗೆ ಫೋನ್ ಮಾಡಿ, ತನ್ನ ಮತ್ತೊಂದು ಸಂಬಂಧದ ಬಗ್ಗೆ ನಿವೇದನೆ ಮಾಡಿಕೊಂಡಿರುವ ಆಡಿಯೋ ಸಹ ಲಭಿಸಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv