ಬೆಂಗ್ಳೂರಲ್ಲಿ ಮತ್ತೆ ಗುಂಡಿನ ಸದ್ದು – ಇಬ್ಬರು ಪುಂಡರ ಕಾಲು ಸೀಳ್ತು ಪೊಲೀಸರ ರಿವಾಲ್ವರ್!

Public TV
1 Min Read
POLICE FIRING

ಬೆಂಗಳೂರು: ಕಳೆದ ಎರಡು ದಿನಗಳ ಅಂತರದಲ್ಲಿ ಬೆಂಗಳೂರಲ್ಲಿ ಮತ್ತೆ ಪೊಲೀಸರ ಗುಂಡಿನ ಸದ್ದು ಕೇಳಿಬಂದಿದೆ. ಇದೀಗ ಪೊಲೀಸರ ರಿವಾಲ್ವರ್ ರಫಿ ಮತ್ತು ಸುಧಾಕರ್ ಅನ್ನೋ ಇಬ್ಬರು ಪುಂಡರ ಕಾಲು ಸೀಳಿದೆ.

ಮನೆ ಮುಂದೆ ನಿಲ್ಲಿಸಿದ್ದ ವಾಹನಗಳ ಗಾಜುಗಳನ್ನು ಕಳೆದ ವಾರ ಪುಡಿ ಪುಡಿ ಮಾಡಿದ್ದ ಇವರಿಬ್ಬರು ರಾಜಗೋಪಾಲನಗರದ ಕರೀಂ ಸಾಬ್ ಲೇಔಟ್‍ನಲ್ಲಿ ಕಾರ್‍ನಲ್ಲಿ ಹೋಗ್ತಿದ್ದರು. ಈ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು ನಸುಕಿನ ಜಾವ ದಾಳಿ ನಡೆಸಿದ್ದಾರೆ. ಈ ವೇಳೆ ಶರಣಾಗುವ ಬದಲು ಪೊಲೀಸರ ಮೇಲೆಯೇ ಪುಂಡರು ದಾಳಿ ನಡೆಸಿದ್ದಾರೆ.

vlcsnap 2018 06 20 07h46m53s216

ಆಗ ಮಹಾಲಕ್ಷ್ಮಿ ಲೇಔಟ್ ಇನ್ಸ್ ಪೆಕ್ಟರ್ ಲೋಹಿತ್, ತಮ್ಮ ಆತ್ಮರಕ್ಷಣೆಗಾಗಿ ಆರೋಪಿಗಳ ಮೇಲೆ ಗುಂಡು ಹಾರಿಸಿದ್ದಾರೆ. ರಫಿಯ ಬಲಗಾಲು ಮತ್ತು ಸುಧಾಕರ್ ಎಡಗಾಲಿಗೆ ಲೋಹಿತ್ ಗುಂಡಿಕ್ಕಿದ್ರು. ಇನ್ನು ಘಟನೆಯಲ್ಲಿ ಮುಖ್ಯ ಪೇದೆ ಹನುಮಂತರಾಜು ಮತ್ತು ಶ್ರೀನಿವಾಸ್‍ಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಎರಡು ದಿನಗಳ ಹಿಂದಷ್ಟೇ ಸರಗಳ್ಳ ಅಚ್ಯುತ್ ಕಾಲಿಗೆ ಪೊಲೀಸರು ಗುಂಡಿಕ್ಕಿದ್ದರು. ಇದನ್ನೂ ಓದಿ: 150 ಕೇಸ್ ನಲ್ಲಿ ಬೇಕಾಗಿದ್ದ ಆರೋಪಿಗೆ ಶೂಟ್, ಅರೆಸ್ಟ್ – ಡಿಸಿಪಿ ರವಿ ಡಿ.ಚನ್ನಣ್ಣನವರಿಂದ ತಂಡಕ್ಕೆ ಬಹುಮಾನ ಘೋಷಣೆ

vlcsnap 2018 06 20 07h47m10s136

Share This Article
Leave a Comment

Leave a Reply

Your email address will not be published. Required fields are marked *