15 ಕಿಮೀ ಕ್ರಮಿಸಿ ಕೊಲೆ ಆರೋಪಿಯ ಪತ್ತೆ ಹಚ್ಚಿದ ಪೊಲೀಸ್ ಡಾಗ್!

Public TV
1 Min Read
POLICE DOG

ಕೋಲಾರ: ಜಿಲ್ಲೆಯ (Kolar) ಬೇವಳ್ಳಿ ಎಂಬಲ್ಲಿ ನಡೆದಿದ್ದ ಕೊಲೆ ಪ್ರಕರಣವೊಂದರ ಆರೋಪಿಯನ್ನು 24 ಗಂಟೆಯಲ್ಲಿ ಪತ್ತೆ ಹಚ್ಚುವ ಮೂಲಕ ಪೊಲೀಸ್ (Police) ಇಲಾಖೆಯ ಶ್ವಾನವೊಂದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಜಿಲ್ಲಾ ಅಫರಾಧ ವಿಭಾಗದ ರಕ್ಷಾ ಎಂಬ ಹೆಸರಿನ ಶ್ವಾನ ಕೊಲೆ ಆರೋಪಿಯನ್ನು ಪತ್ತೆ ಹಚ್ಚಿದೆ. ಸುಮಾರು 15 ಕಿ.ಮೀ ದೂರದಲ್ಲಿ ಅಡಗಿ ಕುಳಿತಿದ್ದ ಕೊಲೆ ಆರೋಪಿಯನ್ನ ಶ್ವಾನ ಪತ್ತೆ ಮಾಡಿದೆ. ಶ್ವಾನವೂ ಕಳೆದ ಹಲವು ವರ್ಷಗಳಿಂದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆ ಸಕ್ರಿಯ – ಈವರೆಗೂ ಹತರಾದ ಉಗ್ರರ ಸಂಖ್ಯೆ ಎಷ್ಟು?

ಮುಳಬಾಗಿಲಿನ (Mulabagilu) ಬೇವಳ್ಳಿ ಗ್ರಾಮದಲ್ಲಿ ಸುರೇಶ್ (35) ಎಂಬಾತನನ್ನ ಮಾರಾಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಲಾಗಿತ್ತು. ಸ್ಥಳದಲ್ಲಿ ಯಾವುದೇ ಸುಳಿವು ಸಿಗದ ಕಾರಣ ಆರೋಪಿಯನ್ನು ಪತ್ತೆ ಹಚ್ಚಲು ಪೊಲೀಸರು ಶ್ವಾನವನ್ನು ಕರೆತಂದಿದ್ದರು. ಬಳಿಕ ಶ್ವಾನವು ಸುಮಾರು 15 ಕಿ.ಮೀ ದೂರಕ್ಕೆ ತೆರಳಿ ರವಿ ಎಂಬಾತನನ್ನು ಗುರುತಿಸಿತ್ತು. ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಈ ಸಂಬಂಧ ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪೊಲೀಸ್ ಶ್ವಾನದ ಈ ಕಾರ್ಯಕ್ಕೆ ಕೋಲಾರ ಎಸ್ಪಿ ನಾರಾಯಣ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಿನಿಮೀಯ ಸ್ಟೈಲ್‌ನಲ್ಲಿ ದೇವಸ್ಥಾನದಲ್ಲಿ ಜೆಡಿಎಸ್‌ ಮುಖಂಡನ ಹತ್ಯೆಗೆ ಯತ್ನ – ಕೊಲೆಗೆ ಸ್ನೇಹಿತನಿಂದಲೇ ಸ್ಕೆಚ್‌

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article