ಗದಗ: ಕಳ್ಳರು ಹಾಗೂ ಹಂತಕರ ಪಾಲಿಗೆ ಸಿಂಹ ಸ್ವಪ್ನವಾಗಿ, ಹಲವು ಪ್ರಕರಣಗಳನ್ನು ಭೇದಿಸುವಲ್ಲಿ ಪೊಲೀಸರಿಗೆ ಸಹಕಾರ ನೀಡಿದ್ದ ಗದಗ ಅಪರಾಧ ದಳದ ಶ್ವಾನ ರಮ್ಯಾ ಸಾವನ್ನಪ್ಪಿದೆ. ಪೊಲೀಸ್ ಇಲಾಖೆಗೆ ರಮ್ಯಾ ನೀಡಿದ್ದ ಸೇವೆಯನ್ನು ಮೆಚ್ಚಿ ಪೊಲೀಸರು ಕಣ್ಣೀರಿಟ್ಟಿದ್ದಾರೆ.
ಕಳೆದ 10 ದಿನಗಳಿಂದ ಗರ್ಭಕೋಶ ಕಾಯಿಲೆಯಿಂದ ಬಳುತ್ತಿದ್ದ ರಮ್ಯಾ ಹಲವು ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಲು ಯಶಸ್ವಿಯಾಗಿತ್ತು. ಅಪರಾದ ಪತ್ತೆ ದಳದಲ್ಲಿ ಇದ್ದ ರಮ್ಯಾ ಇದುವರೆಗೆ 120 ರಿಂದ 130 ಪ್ರಕರಣಗಳಲ್ಲಿ ಭೇದಿಸಲು ಸಹಾಯ ಮಾಡಿತ್ತು. ಶ್ವಾನ ಆನಾರೋಗ್ಯಕ್ಕೆ ಒಳಗಾದ ವೇಳೆಯೇ ಮುನ್ನೆಚ್ಚರಿಕೆ ವಹಿಸಿದ್ದ ಪೊಲೀಸರು ಶಸ್ತ್ರ ಚಿಕಿತ್ಸೆಯನ್ನು ಕೂಡ ಮಾಡಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಹೃದಯಾಘಾತದಿಂದ ಸಾವನ್ನಪ್ಪಿದೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
Advertisement
Advertisement
ರಮ್ಯಾ ಸಾವನ್ನಪ್ಪಿರುವುದು ಇಲಾಖೆಗೆ ತುಂಬಲಾಗದ ನಷ್ಟವಾಗಿದ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಇತ್ತ ಶ್ವಾನಕ್ಕೆ ಸಕಲ ಸರ್ಕಾರಿ ಗೌರವ ನೀಡಿ ಅಂತಿಮ ವಿಧಿ ವಿಧಾನ ನಡೆಸಿದ್ದು, ಈ ವೇಳೆ ಅಪರಾಧ ಪತ್ತೆ ದಳದ ಸಿಬ್ಬಂದಿಯೊಬ್ಬರು ಬಿಕ್ಕಿ ಬಿಕ್ಕಿ ಅಳುತ್ತಿದಿದ್ದು ಮಲಕಲಕುವಂತಿತ್ತು. ಗದಗ ನಗರ ಬೆಟಗೇರಿ ಪೊಲೀಸ್ ಕವಾಯತು ಮೈದಾನದಲ್ಲಿ ಡಿಆರ್ ಪಡೆಯಿಂದ ಗೌರವ ವಂದನೆ ಸಲ್ಲಿಸಿ ಅಂತ್ಯಕ್ರಿಯೆ ನಡೆಸಲಾಯಿತು. ಶ್ವಾನ ರಮ್ಯಾ ಅಂತ್ಯಕ್ರಿಯೆಲ್ಲಿ ಡಿವೈಎಸ್‍ಪಿ ವಿಜಯಕುಮಾರ್, ಸಿಪಿಐ ವೆಂಕಟೇಶ ಯಡಹಳ್ಳಿ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಪೊಲೀಸರು ಭಾಗಿಯಾಗಿದ್ದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv